ಟಿಕ್‌ ಟಾಕ್​ಗೆ ಮತ್ತೊಂದು ಸಂಕಷ್ಟ.. ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ!

| Updated By: ಸಾಧು ಶ್ರೀನಾಥ್​

Updated on: Aug 25, 2020 | 11:50 AM

ಹನೋಯ್: ವಿಶ್ವದಾದ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ ಟಿಕ್‌ ಟಾಕ್‌ ಌಪ್‌ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ನಿಷೇಧದ ನಂತರ ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್‌, ಈಗ ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ ಸಿಲುಕಿದೆ. ಹೌದು ವಿಯೆಟ್ನಾಮ್‌ನ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯು ಟಿಕ್‌ ಟಾಕ್‌ ಌಪ್‌ ಕಾಪಿ ರೈಟ್ಸ್‌ ಉಲ್ಲಂಘಿಸಿ ತನ್ನ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತವನ್ನು ಬಳಸುತ್ತಿದೆ ಎಂದು ಕೋರ್ಟ್‌ನಲ್ಲಿ ಅದರ ವಿರುದ್ಧ ದಾವೆ ಹೂಡಿದೆ. ಟಿಕ್‌ ಟಾಕ್ ಬಳಿ […]

ಟಿಕ್‌ ಟಾಕ್​ಗೆ ಮತ್ತೊಂದು ಸಂಕಷ್ಟ.. ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ!
Follow us on

ಹನೋಯ್: ವಿಶ್ವದಾದ್ಯಂತ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ ಟಿಕ್‌ ಟಾಕ್‌ ಌಪ್‌ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ನಿಷೇಧದ ನಂತರ ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್‌, ಈಗ ವಿಯೆಟ್ನಾಮ್‌ನಲ್ಲಿ ಕಾನೂನಿನ ಸರಪಳಿಯಲ್ಲಿ ಸಿಲುಕಿದೆ.

ಹೌದು ವಿಯೆಟ್ನಾಮ್‌ನ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯು ಟಿಕ್‌ ಟಾಕ್‌ ಌಪ್‌ ಕಾಪಿ ರೈಟ್ಸ್‌ ಉಲ್ಲಂಘಿಸಿ ತನ್ನ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತವನ್ನು ಬಳಸುತ್ತಿದೆ ಎಂದು ಕೋರ್ಟ್‌ನಲ್ಲಿ ಅದರ ವಿರುದ್ಧ ದಾವೆ ಹೂಡಿದೆ. ಟಿಕ್‌ ಟಾಕ್ ಬಳಿ ಈ ಸಂಗೀತದ ಪರವಾನಗಿ ಇಲ್ಲ. ಅದು ತನ್ನ ಒಡೆತನದಲ್ಲಿರುವ ಸಂಗೀತ ಗೀತೆಗಳು. ಹಾಗಾಗಿ, ಇದನ್ನು ಬಳಸಿದ್ದಕ್ಕಾಗಿ ಪರಿಹಾರ ನೀಡುವಂತೆ ನ್ಯಾಯಾಲಯದಲ್ಲಿ ಟಿಕ್‌ ಟಾಕ್‌ ವಿರುದ್ಧ ಜಿಂಗ್‌ ಮ್ಯೂಸಿಕ್‌ ಕಂಪನಿ ಪ್ರಕರಣ ದಾಖಲಿಸಿದೆ.

ವಿಎನ್‌ಜಿ ಒಡೆತನದ ಜಿಂಗ್‌ ಕಂಪನಿ ಕೋರ್ಟ್‌ನಲ್ಲಿ ಟಿಕ್‌ ಟಾಕ್‌ನಿಂದ ನಷ್ಟ ಪರಿಹಾರವಾಗಿ ವಿಯೆಟ್ನಾಮ್‌ನ ಹೋ ಚಿ ಮಿನ್‌ ಸಿಟಿಯ ಪೀಪಲ್ಸ್‌ ಕೋರ್ಟ್‌ನಲ್ಲಿ 221 ಡೊಂಗ್‌ಗಳು ಅಂದ್ರೆ 9.5 ಮಿಲಿಯನ್‌ ಡಾಲರ್‌ಗಳ ದಾವೆ ಹೂಡಿದೆ. ಅಷ್ಟೇ ಅಲ್ಲ ತತ್‌ಕ್ಷಣವೇ ಟಿಕ್‌ ಟಾಕ್‌ ಌಪ್‌ನಿಂದ ವಿಎನ್‌ಜಿ ಒಡೆತನದ ಜಿಂಗ್‌ ಮ್ಯೂಸಿಕ್‌ ಕಂಪನಿಯ ಎಲ್ಲ ಸಂಗೀತದ ಆಡಿಯೋಗಳನ್ನು ತೆಗೆದುಹಾಕುವಂತೆಯೂ ತಿಳಿಸಿದೆ.

Published On - 11:48 am, Tue, 25 August 20