ಲಂಡನ್: ಇಂದು ಲಂಡನ್‌ನಲ್ಲಿ ನಡೆಯಲಿರುವ ಕಿಂಗ್ ಚಾರ್ಲ್ಸ್ IIIರ (King Charles III) ಪಟ್ಟಾಭಿಷೇಕ ಸಮಾರಂಭಕ್ಕೆ ಆಹ್ವಾನಿತರಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ನಟಿ ಸೋನಮ್ ಕಪೂರ್ ಭಾಗವಹಿಸಲಿದ್ದಾರೆ. ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಈ ಸಮಾರಂಭ ನಡೆಯಲಿದೆ. 70 ವರ್ಷಗಳ ಹಿಂದೆ ಕಿಂಗ್ ಚಾರ್ಲ್ಸ್ III ಅವರ ತಾಯಿ ಎಲಿಜಬೆತ್ ಪಟ್ಟಾಭಿಷೇಕಗೊಂಡಾಗ ಅನೇಕ ದೇಶದ ಗಣ್ಯರು, ಜನರು, ರಾಜಮನೆತನಗಳು, ಸರ್ಕಾರಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು, ಆದರೆ ಇದೀಗ ಮತ್ತೆ ಅದೇ ಸಂಭ್ರಮಕ್ಕೆ ಅನೇಕ ದೇಶದ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದೀಗ ಭಾರತದಿಂದ ಪ್ರತಿನಿಧಿಸುತ್ತಿರುವ ದೇಶ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ಅವರ ಪತ್ನಿ ಸುದೇಶ್ ಧಂಖರ್ ಅವರೊಂದಿಗೆ ಲಂಡನ್ ತಲುಪಿದ್ದಾರೆ.
ಈ ಸಂಭ್ರಮದ ನಿರೂಪಣೆಯನ್ನು ಮಾಡಲು ಬಾಲಿವುಡ್ ನಟಿ ಸೋನಮ್ ಕಪೂರ್ ಭಾಗವಹಿಸಲಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ. ಇದಲ್ಲದೆ, ಮುಂಬೈನ ಇಬ್ಬರು ಡಬ್ಬಾವಾಲಾಗಳು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ. ವಿಶೇಷವಾಗಿ ರಾಜನಿಗೆ ಉಡುಗೊರೆಯಾಗಿ ನೀಡಲು ಅವರು ಪುಣೇರಿ ಪೇಟ ಮತ್ತು ವಾರಕರಿ ಸಮುದಾಯದಿಂದ ತಯಾರಿಸಿದ ಶಾಲನ್ನು ತಂದಿದ್ದಾರೆ.
ಚಾರ್ಲ್ಸ್ ಅವರು 2003ರಲ್ಲಿ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಮುಂಬೈನ ಪ್ರಖ್ಯಾತ ಲಂಚ್‌ಬಾಕ್ಸ್ ಡೆಲಿವರಿ ವ್ಯಕ್ತಿಯನ್ನು ಭೇಟಿ ಮಾಡಿದ್ದರು. ಕ್ಯಾಮಿಲ್ಲಾ ಪಾರ್ಕರ್ ಬೌಲ್ಸ್ ಅವರೊಂದಿಗಿನ ಚಾರ್ಲ್ಸ್ ಅವರ ಮದುವೆಗೆ ಡಬ್ಬಾವಾಲಾಗಳನ್ನು ಸಹ ಆಹ್ವಾನಿಸಲಾಯಿತು.
ರಾಜನ ಚಾರಿಟಿ ಅಧಿಕಾರ ವಲಯದಲ್ಲಿರುವ ಮತ್ತು ರಾಜನ ಜತೆಗೆ ನಿಕಟ ಸಂಬಂಧವನ್ನು ಹೊಂದಿರುವ ಭಾರತದ ವ್ಯಕ್ತಿಗಳನ್ನು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಆಹ್ವಾನದಲ್ಲಿ ಕೆಲವೊಂದು ಸಲಹೆಗಾರ ಮತ್ತು ಬಾಣಸಿಗ ಕೂಡ ಸೇರಿದ್ದಾರೆ. ಚಾರ್ಲ್ಸ್ ಫೌಂಡೇಶನ್‌ನ ಬಿಲ್ಡಿಂಗ್ ಕ್ರಾಫ್ಟ್ ಪ್ರೋಗ್ರಾಂ ಮತ್ತು ಪ್ರಿನ್ಸ್ ಫೌಂಡೇಶನ್ ಸ್ಕೂಲ್ ಆಫ್ ಟ್ರೆಡಿಷನಲ್ ಆರ್ಟ್ಸ್‌ನಿಂದ ಪದವಿ ಪಡೆದ 37 ವರ್ಷದ ಪುಣೆ ಮೂಲದ ಆರ್ಕಿಟೆಕ್ಟ್ ಸೌರಭ್ ಫಡ್ಕೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಕೆನಡಾದ ಭಾರತೀಯ ಮೂಲದ ಜೇ ಪಟೇಲ್ ಅವರು ಕಳೆದ ಮೇ ತಿಂಗಳಲ್ಲಿ ಪ್ರಿನ್ಸ್ ಟ್ರಸ್ಟ್ ಕೆನಡಾದ ಯುವ ಉದ್ಯೋಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರು ಟೊರೊಂಟೊದ ಐಕಾನಿಕ್ ಸಿಎನ್ ಟವರ್‌ನಲ್ಲಿ ಬಾಣಸಿಗ ಹುದ್ದೆಯನ್ನು ಹೊಂದಿದ್ದಾರೆ ಎಂದು ಅರಮನೆ ತಿಳಿಸಿದೆ.
ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರು ಪಟ್ಟಾಭಿಷೇಕ ಸಮಾರಂಭದಲ್ಲಿ ಬೈಬಲ್‌ನ ಕೊಲೊಸ್ಸಿಯನ್ಸ್ ಪುಸ್ತಕವನ್ನು ಬೋಧಿಸಲಿದದ್ದು, ಪ್ರಧಾನಿ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಧ್ವಜಾರೋಹಣದಲ್ಲಿ ಭಾಗವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ