AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

King Charles III’s Coronation: ಮೇ 6ರಂದು ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ : ಕಾರ್ಯಕ್ರಮದ ವೇಳಾಪಟ್ಟಿ, ನೇರ ಪ್ರಸಾರದ ಬಗ್ಗೆ ಇಲ್ಲಿದೆ ಮಾಹಿತಿ

ಪಟ್ಟಾಭಿಷೇಕ ಸಮಾರಂಭವು ಬಕಿಂಗ್‌ಹ್ಯಾಮ್ ಅರಮನೆಯಿಂದ ಮೆರವಣಿಗೆಯ ನಂತರ 10.00 GMTಗೆ ಪ್ರಾರಂಭವಾಗುತ್ತದೆ. 70 ವರ್ಷಗಳ ಹಿಂದಿನ ಪಟ್ಟಾಭಿಷೇಕಕ್ಕೆ ಹೋಲಿಸಿದರೆಇದು ಚಿಕ್ಕ ಸಮಾರಂಭವಾಗಿದೆ.

King Charles III's Coronation: ಮೇ 6ರಂದು ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ : ಕಾರ್ಯಕ್ರಮದ ವೇಳಾಪಟ್ಟಿ, ನೇರ ಪ್ರಸಾರದ ಬಗ್ಗೆ ಇಲ್ಲಿದೆ ಮಾಹಿತಿ
ಪಟ್ಟಾಭಿಷೇಕಕ್ಕೆ ಸಿದ್ದವಾಗಿರುವ ಬ್ರಿಟನ್
Follow us
ರಶ್ಮಿ ಕಲ್ಲಕಟ್ಟ
|

Updated on: May 05, 2023 | 1:52 PM

ಕಿಂಗ್ ಚಾರ್ಲ್ಸ್ (King Charles III) ಸೆಪ್ಟೆಂಬರ್​​ನಲ್ಲಿ ತಮ್ಮ ತಾಯಿ ರಾಣಿ ಎಲಿಜಬೆತ್ ಅವರ ಮರಣದ ನಂತರ ಯುನೈಟೆಡ್ ಕಿಂಗ್‌ಡಮ್ ಮತ್ತು 14 ಇತರ ಕ್ಷೇತ್ರಗಳ ರಾಜನಾಗಿದ್ದು ಮೇ 6, ಶನಿವಾರದಂದು ವೈಭವ, ಧಾರ್ಮಿಕ ಪ್ರಾಮುಖ್ಯತೆಯಿಂದ ಕೂಡಿದ ಅದ್ದೂರಿ ಸಮಾರಂಭದಲ್ಲಿ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಕಿರೀಟಧಾರಣೆ (Coronation) ಮಾಡಲಿದ್ದಾರೆ.ಅಬ್ಬೆಯಲ್ಲಿ 38 ದೊರೆಗಳು ಪಟ್ಟಾಭಿಷಿಕ್ತರಾಗಿದ್ದಾರೆ. 15 ನೇ ಶತಮಾನದಲ್ಲಿ ಲಂಡನ್ ಗೋಪುರದಲ್ಲಿ ಕೊಲೆ ಮಾಡಲಾಗಿದೆ ಎಂದು ನಂಬಲಾದ ಇಬ್ಬರು ಯುವ ರಾಜಕುಮಾರರಲ್ಲಿ ಒಬ್ಬರಾದ ಎಡ್ವರ್ಡ್ V ಮತ್ತು ವಿಚ್ಛೇದಿತರಾಗಿದ್ದ ಅಮೇರಿಕದ ವಾಲಿಸ್ ಸಿಂಪ್ಸನ್ ಅವರನ್ನು ಮದುವೆಯಾಗಲು ರಾಜಪಟ್ಟ ತ್ಯಜಿಸಿದ್ದ ಎಡ್ವರ್ಡ್ VIII ಅವರು ಕಿರೀಟಧಾರಣೆ  ಮಾಡಿರಲಿಲ್ಲ.

ಪಟ್ಟಾಭಿಷೇಕ ಸಮಾರಂಭ ಎಷ್ಟು ಗಂಟೆಗೆ ನಡೆಯುತ್ತದೆ? ನೇರ ಪ್ರಸಾರ ಎಲ್ಲಿ?

ಪಟ್ಟಾಭಿಷೇಕ ಸಮಾರಂಭವು ಬಕಿಂಗ್‌ಹ್ಯಾಮ್ ಅರಮನೆಯಿಂದ ಮೆರವಣಿಗೆಯ ನಂತರ 10.00 GMTಗೆ ಪ್ರಾರಂಭವಾಗುತ್ತದೆ. 70 ವರ್ಷಗಳ ಹಿಂದಿನ ಪಟ್ಟಾಭಿಷೇಕಕ್ಕೆ ಹೋಲಿಸಿದರೆಇದು ಚಿಕ್ಕ ಸಮಾರಂಭವಾಗಿದೆ.ಬ್ರಿಟನ್‌ ಮತ್ತು ಕಾಮನ್‌ವೆಲ್ತ್‌ನಾದ್ಯಂತ ಸಶಸ್ತ್ರ ಪಡೆಗಳಿಂದ ಕೂಡಿದ ಮೆರವಣಿಗೆ ಅಬ್ಬೆಯಿಂದ ಹೊರಡಲಿದೆ. ರಾಜ ಮತ್ತು ರಾಣಿ ಗೋಲ್ಡ್ ಸ್ಟೇಟ್ ಕೋಚ್‌ನಲ್ಲಿ ಪ್ರಯಾಣಿಸುತ್ತಾರೆ, ಇದನ್ನು 1760 ರಲ್ಲಿ ನಿಯೋಜಿಸಲಾಯಿತು.

ಇದನ್ನೂ ಓದಿ: Hindu Temple Vandalised In Sydney: ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಧ್ವಂಸಗೊಳಿಸಿದ ಖಲಿಸ್ತಾನಿಗಳು

ಪಟ್ಟಾಭಿಷೇಕದ ದಿನದ ವೇಳಾಪಟ್ಟಿ

ಮಧ್ಯಾಹ್ನ 3 ಗಂಟೆ IST: ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರು ವೆಸ್ಟ್‌ಮಿನಿಸ್ಟರ್ ಅಬ್ಬೆಗೆ ಹೋಗಲು ಬಕಿಂಗ್‌ಹ್ಯಾಮ್ ಅರಮನೆಯಿಂದ ಮೆರವಣಿಗೆ  ಹೊರಡುತ್ತಾರೆ.

ಮಧ್ಯಾಹ್ನ 3.30 IST: ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ (ಚರ್ಚ್) ಪಟ್ಟಾಭಿಷೇಕ ಸಮಾರಂಭವನ್ನು ರಾಜಮನೆತನದ ಸದಸ್ಯರು ಮತ್ತು ಅತಿಥಿಗಳ ಮುಂದೆ ಆರ್ಚ್‌ಬಿಷಪ್‌ ನೆರವೇರಿಸಲಿದ್ದಾರೆ.

ಸಂಜೆ 4.30 IST: ರಾಜ ಮತ್ತು ರಾಣಿ ಮೆರವಣಿಗೆಯ ಮೂಲಕ ಅರಮನೆಗೆ ಹಿಂತಿರುಗುತ್ತಾರೆ, ಜನಸಮೂಹವನ್ನು ಭೇಟಿ ಮಾಡುತ್ತಾರೆ.

ಸಂಜೆ6.45 : ರಾಜ ಮತ್ತು ರಾಣಿ ಅರಮನೆಯಲ್ಲಿ ತಮ್ಮ ಎಂದಿನ ರಾಜಮನೆತನದ ಬಾಲ್ಕನಿಯಲ್ಲಿ ಜನ ಸಮೂಹಕ್ಕೆ ಕೈ ಬೀಸಿ, ಫ್ಲೈಪಾಸ್ಟ್ ವೀಕ್ಷಿಸುತ್ತಾರೆ.

ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕ ಎಲ್ಲಿ ನೋಡಬಹುದು?

BBC, ABC News, CBS, CNN, Fox News, ಮತ್ತು NBC ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಟಿವಿ ಚಾನೆಲ್‌ಗಳು ತಮ್ಮ ವಿಭಿನ್ನ ಪ್ರಸಾರ ವೇದಿಕೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತವೆ.

ರಾಯಲ್ ಫ್ಯಾಮಿಲಿ ಯೂಟ್ಯೂಬ್ ಚಾನೆಲ್ ಕೂಡ ಸಮಾರಂಭವನ್ನು ಲೈವ್ ಸ್ಟ್ರೀಮ್ ಮಾಡುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ