ಲಾಹೋರ್ನಲ್ಲಿ ಖಲಿಸ್ತಾನ್ ಕಮಾಂಡೊ ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾರ್ ಹತ್ಯೆ
Paramjit Singh Panjwar: ಜೋಹರ್ ಟೌನ್‌ನಲ್ಲಿರುವ ಸನ್ಫ್ಲವರ್ ಸೊಸೈಟಿಯಲ್ಲಿರುವ ತನ್ನ ಮನೆಯ ಬಳಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಗನ್‌ಮ್ಯಾನ್‌ನೊಂದಿಗೆ ಸುತ್ತಾಡುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ
ವಾಂಟೆಡ್ ಭಯೋತ್ಪಾದಕ ಮತ್ತು ಖಲಿಸ್ತಾನ್ (Khalistan) ಕಮಾಂಡೊ ಫೋರ್ಸ್ (KCF) ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾರ್ (Paramjit Singh Panjwar) ಅಲಿಯಾಸ್ ಮಲಿಕ್ ಸರ್ದಾರ್ ಸಿಂಗ್ನ್ನು ಇಂದು (ಶನಿವಾರ) ಬೆಳಿಗ್ಗೆ ಪಾಕಿಸ್ತಾನದ ಲಾಹೋರ್‌ನ ಜೋಹರ್ ಟೌನ್‌ನಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜೋಹರ್ ಟೌನ್‌ನಲ್ಲಿರುವ ಸನ್ಫ್ಲವರ್ ಸೊಸೈಟಿಯಲ್ಲಿರುವ ತನ್ನ ಮನೆಯ ಬಳಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಗನ್‌ಮ್ಯಾನ್‌ನೊಂದಿಗೆ ಸುತ್ತಾಡುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗನ್ ಮ್ಯಾನ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಭಾರತದ ಪಂಜಾಬ್‌ಗೆ ಡ್ರೋನ್‌ಗಳ ಮೂಲಕ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಪರಮ್‌ಜಿತ್, ತರನ್ ತಾರನ್ ಬಳಿಯ ಪಂಜ್ವಾರ್ ಗ್ರಾಮದಲ್ಲಿ ಜನಿಸಿದರು. 1986 ರಲ್ಲಿ ಅವರ ಸೋದರಸಂಬಂಧಿ ಲಾಭ್ ಸಿಂಗ್ ಅವರಿಂದ ತೀವ್ರಗಾಮಿಯಾದ ನಂತರ KCF ಗೆ ಸೇರಿದರು. ಅದಕ್ಕೂ ಮೊದಲು ಅವರು ಸೋಹಾಲ್‌ನ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಭಾರತೀಯ ಭದ್ರತಾ ಪಡೆ ಲಾಭ್ ಸಿಂಗ್ ಹತ್ಯೆ ಮಾಡಿದ ನಂತರ 1990 ರ ದಶಕದಲ್ಲಿ ಪಂಜ್ವಾರ್ಸ, KCF ನ ಉಸ್ತುವಾರಿ ವಹಿಸಿಕೊಂಡರು ಮತ್ತು ಪಾಕಿಸ್ತಾನಕ್ಕೆ ದಾಟಿದರು.
ಇದನ್ನೂ ಓದಿ: 23ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡ ಮಿಸ್ ಯೂನಿವರ್ಸ್ ಫೈನಲಿಸ್ಟ್
ಪಾಕಿಸ್ತಾನದಿಂದ ಆಶ್ರಯ ಪಡೆದಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿರುವ ಪಂಜ್ವಾರ್ ಗಡಿಯಾಚೆಗಿನ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಹೆರಾಯಿನ್ ಕಳ್ಳಸಾಗಣೆ ಮೂಲಕ ನಿಧಿ ಸಂಗ್ರಹಿಸುವ ಮೂಲಕ ಕೆಸಿಎಫ್ ಅನ್ನು ಜೀವಂತವಾಗಿರಿಸಿದರು. ಪಾಕಿಸ್ತಾನ ಸರ್ಕಾರದ ನಿರಾಕರಣೆಗಳ ಹೊರತಾಗಿಯೂ, ಪಂಜ್ವಾರ್ ಲಾಹೋರ್‌ನಲ್ಲಿಯೇ ಇದ್ದರು. ಅವರ ಪತ್ನಿ ಮತ್ತು ಮಕ್ಕಳು ಜರ್ಮನಿಗೆ ಸ್ಥಳಾಂತರಗೊಂಡಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Sat, 6 May 23