AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

King Charles III: ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ, ಭಾರತದ ಉಪರಾಷ್ಟ್ರಪತಿ ಭಾಗಿ, ಕಾರ್ಯಕ್ರಮದ ನಿರೂಪಣೆಗೆ ನಟಿ ಸೋನಮ್ ಕಪೂರ್

ಇಂದು ಲಂಡನ್‌ನಲ್ಲಿ ನಡೆಯಲಿರುವ ಕಿಂಗ್ ಚಾರ್ಲ್ಸ್ IIIರ ಪಟ್ಟಾಭಿಷೇಕ ಸಮಾರಂಭಕ್ಕೆ ಆಹ್ವಾನಿತರಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ನಟಿ ಸೋನಮ್ ಕಪೂರ್ ಭಾಗವಹಿಸಲಿದ್ದಾರೆ.

King Charles III: ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ, ಭಾರತದ ಉಪರಾಷ್ಟ್ರಪತಿ ಭಾಗಿ, ಕಾರ್ಯಕ್ರಮದ ನಿರೂಪಣೆಗೆ ನಟಿ ಸೋನಮ್ ಕಪೂರ್
ಜಗದೀಪ್ ಧಂಖರ್
ಅಕ್ಷಯ್​ ಪಲ್ಲಮಜಲು​​
|

Updated on: May 06, 2023 | 11:07 AM

Share

ಲಂಡನ್: ಇಂದು ಲಂಡನ್‌ನಲ್ಲಿ ನಡೆಯಲಿರುವ ಕಿಂಗ್ ಚಾರ್ಲ್ಸ್ III(King Charles III) ಪಟ್ಟಾಭಿಷೇಕ ಸಮಾರಂಭಕ್ಕೆ ಆಹ್ವಾನಿತರಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ನಟಿ ಸೋನಮ್ ಕಪೂರ್ ಭಾಗವಹಿಸಲಿದ್ದಾರೆ. ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಈ ಸಮಾರಂಭ ನಡೆಯಲಿದೆ. 70 ವರ್ಷಗಳ ಹಿಂದೆ ಕಿಂಗ್ ಚಾರ್ಲ್ಸ್ III ಅವರ ತಾಯಿ ಎಲಿಜಬೆತ್ ಪಟ್ಟಾಭಿಷೇಕಗೊಂಡಾಗ ಅನೇಕ ದೇಶದ ಗಣ್ಯರು, ಜನರು, ರಾಜಮನೆತನಗಳು, ಸರ್ಕಾರಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು, ಆದರೆ ಇದೀಗ ಮತ್ತೆ ಅದೇ ಸಂಭ್ರಮಕ್ಕೆ ಅನೇಕ ದೇಶದ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದೀಗ ಭಾರತದಿಂದ ಪ್ರತಿನಿಧಿಸುತ್ತಿರುವ ದೇಶ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ಅವರ ಪತ್ನಿ ಸುದೇಶ್ ಧಂಖರ್ ಅವರೊಂದಿಗೆ ಲಂಡನ್ ತಲುಪಿದ್ದಾರೆ.

ಈ ಸಂಭ್ರಮದ ನಿರೂಪಣೆಯನ್ನು ಮಾಡಲು ಬಾಲಿವುಡ್​​ ನಟಿ ಸೋನಮ್ ಕಪೂರ್ ಭಾಗವಹಿಸಲಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ. ಇದಲ್ಲದೆ, ಮುಂಬೈನ ಇಬ್ಬರು ಡಬ್ಬಾವಾಲಾಗಳು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ. ವಿಶೇಷವಾಗಿ ರಾಜನಿಗೆ ಉಡುಗೊರೆಯಾಗಿ ನೀಡಲು ಅವರು ಪುಣೇರಿ ಪೇಟ ಮತ್ತು ವಾರಕರಿ ಸಮುದಾಯದಿಂದ ತಯಾರಿಸಿದ ಶಾಲನ್ನು ತಂದಿದ್ದಾರೆ.

ಚಾರ್ಲ್ಸ್ ಅವರು 2003ರಲ್ಲಿ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಮುಂಬೈನ ಪ್ರಖ್ಯಾತ ಲಂಚ್‌ಬಾಕ್ಸ್ ಡೆಲಿವರಿ ವ್ಯಕ್ತಿಯನ್ನು ಭೇಟಿ ಮಾಡಿದ್ದರು. ಕ್ಯಾಮಿಲ್ಲಾ ಪಾರ್ಕರ್ ಬೌಲ್ಸ್ ಅವರೊಂದಿಗಿನ ಚಾರ್ಲ್ಸ್ ಅವರ ಮದುವೆಗೆ ಡಬ್ಬಾವಾಲಾಗಳನ್ನು ಸಹ ಆಹ್ವಾನಿಸಲಾಯಿತು.

ರಾಜನ ಚಾರಿಟಿ ಅಧಿಕಾರ ವಲಯದಲ್ಲಿರುವ ಮತ್ತು ರಾಜನ ಜತೆಗೆ ನಿಕಟ ಸಂಬಂಧವನ್ನು ಹೊಂದಿರುವ ಭಾರತದ ವ್ಯಕ್ತಿಗಳನ್ನು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಆಹ್ವಾನದಲ್ಲಿ ಕೆಲವೊಂದು ಸಲಹೆಗಾರ ಮತ್ತು ಬಾಣಸಿಗ ಕೂಡ ಸೇರಿದ್ದಾರೆ. ಚಾರ್ಲ್ಸ್ ಫೌಂಡೇಶನ್‌ನ ಬಿಲ್ಡಿಂಗ್ ಕ್ರಾಫ್ಟ್ ಪ್ರೋಗ್ರಾಂ ಮತ್ತು ಪ್ರಿನ್ಸ್ ಫೌಂಡೇಶನ್ ಸ್ಕೂಲ್ ಆಫ್ ಟ್ರೆಡಿಷನಲ್ ಆರ್ಟ್ಸ್‌ನಿಂದ ಪದವಿ ಪಡೆದ 37 ವರ್ಷದ ಪುಣೆ ಮೂಲದ ಆರ್ಕಿಟೆಕ್ಟ್ ಸೌರಭ್ ಫಡ್ಕೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: King Charles III Coronation: ಮೇ 6ರಂದು ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ : ಕಾರ್ಯಕ್ರಮದ ವೇಳಾಪಟ್ಟಿ, ನೇರ ಪ್ರಸಾರದ ಬಗ್ಗೆ ಇಲ್ಲಿದೆ ಮಾಹಿತಿ

ಕೆನಡಾದ ಭಾರತೀಯ ಮೂಲದ ಜೇ ಪಟೇಲ್ ಅವರು ಕಳೆದ ಮೇ ತಿಂಗಳಲ್ಲಿ ಪ್ರಿನ್ಸ್ ಟ್ರಸ್ಟ್ ಕೆನಡಾದ ಯುವ ಉದ್ಯೋಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರು ಟೊರೊಂಟೊದ ಐಕಾನಿಕ್ ಸಿಎನ್ ಟವರ್‌ನಲ್ಲಿ ಬಾಣಸಿಗ ಹುದ್ದೆಯನ್ನು ಹೊಂದಿದ್ದಾರೆ ಎಂದು ಅರಮನೆ ತಿಳಿಸಿದೆ.

ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರು ಪಟ್ಟಾಭಿಷೇಕ ಸಮಾರಂಭದಲ್ಲಿ ಬೈಬಲ್‌ನ ಕೊಲೊಸ್ಸಿಯನ್ಸ್ ಪುಸ್ತಕವನ್ನು ಬೋಧಿಸಲಿದದ್ದು, ಪ್ರಧಾನಿ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಧ್ವಜಾರೋಹಣದಲ್ಲಿ ಭಾಗವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ