- Kannada News Photo gallery Sienna Weir, a 2022 Miss Universe finalist and Australian fashion model, died at the age of 23
23ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡ ಮಿಸ್ ಯೂನಿವರ್ಸ್ ಫೈನಲಿಸ್ಟ್
ಮಿಸ್ ಯೂನಿವರ್ಸ್ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದ ಆಸ್ಟ್ರೇಲಿಯನ್ ಮಾಡೆಲ್ ಸಿಯೆನ್ನಾ ವೀರ್(23) ದಾರುಣವಾಗಿ ಸಾವನ್ನಪ್ಪಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
Updated on:May 06, 2023 | 1:03 PM

ಮಿಸ್ ಯೂನಿವರ್ಸ್ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದ ಆಸ್ಟ್ರೇಲಿಯನ್ ಮಾಡೆಲ್ ಸಿಯೆನ್ನಾ ವೀರ್ ದಾರುಣವಾಗಿ ಸಾವನ್ನಪ್ಪಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕೇವಲ 23ನೇ ವಯಸ್ಸಿನಲ್ಲಿಯೇ ಮಾಡಲಿಂಗ್ ಫೀಲ್ಡ್ನಲ್ಲಿ ಮಿಂಚಿ, ಮಿಸ್ ಯೂನಿವರ್ಸ್ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು.

ತನ್ನ ಸೌಂದರ್ಯದ ಮೂಲಕವೇ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿದ್ದ ಬೆಡಗಿ ಇಹಲೋಕ ತ್ಯಜಿಸಿದ್ದಾರೆ.

ಕೆಲ ದಿನಗಳ ಹಿಂದೆ ಕುದುರೆ ಸವಾರಿ ಮಾಡುವಾಗ ಆಯಾ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಈಕೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ನ್ಯೂಯಾರ್ಕ್ ಮಾಧ್ಯಮವೊಂದು ವರದಿ ಮಾಡಿದೆ.

ಕುದುರೆ ಸವಾರಿಯ ಬಗ್ಗೆ ಅಪಾರ ಕ್ರೇಜ್ ಹೊಂದಿದ್ದ ಈಕೆ ತನ್ನ 3ನೇ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ ಎಂದು ಇತ್ತೀಚೆಗಷ್ಟೇ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದರು.

ಏಪ್ರಿಲ್ 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಕುದುರೆ ನೆಲಕ್ಕುರುಳಿದೆ. ಕುದುರೆ ಮೇಲಿದ್ದ ಸಿಯೆನ್ನಾ ಸಹ ಕೆಳಗೆ ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
Published On - 1:03 pm, Sat, 6 May 23




