ಬೀಜಿಂಗ್: ಈ ಆಧುನಿಕ ಜಗತ್ತಿನಲ್ಲಿ ಯಾವಾಗ ಎಂತೆಂಥ ರೋಗಗಳು ಬಂದು ವಕ್ಕರಿಸಿಕೊಳ್ತವೆ ಅನ್ನೋದನ್ನ ಹೇಳೋಕೆ ಆಗಲ್ಲ. ಇದ್ದಕ್ಕಿದ್ದಂತೆ ಡೆಡ್ಲಿ ವೈರಸ್ಗಳು ದಾಳಿಯಿಟ್ಟುಬಿಡ್ತವೆ. ಹೀಗೆ ಚೀನಾದಲ್ಲೊಂದು ಭಯಾನಕ ರೋಗ ಹರಡುತ್ತಿದೆ. ಈ ರೋಗದಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದ್ದು, ವಿಶೇಷವಾಗಿ ಜಪಾನ್, ಥಾಯ್ಲ್ಯಾಂಡ್ ದೇಶಗಳು ತತ್ತರಿಸಿಹೋಗಿವೆ. ಮುಖವನ್ನ ಫುಲ್ ಪ್ಯಾಕ್ ಮಾಡ್ಕೊಂಡು ಓಡಾಡ್ತಿರೋ ಜನ. ಎಲ್ಲೆಲ್ಲೂ ಆತಂಕ. ಎಲ್ಲಿ ಮಾಸ್ಕ್ ತೆಗೆದ್ರೆ ನಮ್ಗೆ ತೊಂದ್ರೆ ಆಗುತ್ತೋ ಅನ್ನೋ ಭಯ. ಅಂದಹಾಗೆ ಇದು ಮಾಲಿನ್ಯದ ಭಯವಂತೂ ಅಲ್ಲ. ಆದ್ರೆ ದಿಢೀರ್ ದಾಳಿಯಿಟ್ಟ ಭಯಾನಕ ‘ಕೊರೊನಾ’ ವೈರಸ್ನಿಂದ ಇವರೆಲ್ಲಾ ಬೆಚ್ಚಿಬಿದ್ದಿದ್ದಾರೆ.
ಚೀನಾಗೆ ಭೇಟಿ ನೀಡುವ ಮೊದಲು ಎಚ್ಚರ.. ಎಚ್ಚರ..!
ಹೌದು ಈ ವೈರಸ್ ಬಗ್ಗೆ ಇಡೀ ವಿಶ್ವ ಚಿಂತೆ ಮಾಡುವಂತಾಗಿದೆ. ಅಷ್ಟಕ್ಕೂ ಇದು ಸಾಮಾನ್ಯ ವೈರಸ್ಗಳಂತೆ, ಬಂತಾ ಹೋಯ್ತಾ ಅನ್ನುವಂತಿಲ್ಲ. ಒಮ್ಮೆ ಓರ್ವ ವ್ಯಕ್ತಿಯ ದೇಹವನ್ನ ಪ್ರವೇಶಿಸ್ತು ಅಂದ್ರೆ ಖಲ್ಲಾಸ್, ಅಲ್ಲಿ ಜೀವಬಲಿ ಪಡೆಯದೇ ತನ್ನ ಅಂತ್ಯ ಕಾಣೋದಿಲ್ಲ. ಈ ಹಿಂದೆ ನಿಫಾ ಮತ್ತು ಎಬೋಲಾದಂಥ ಭಯಾನಕ ರೋಗಗಳಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಇದೀಗ ನಿಫಾ, ಎಬೋಲಾವನ್ನೂ ಮೀರಿಸುವಂತಹ ರೋಗವೊಂದು ಎಂಟ್ರಿಯಾಗಿದೆ. ಅದೇ ‘ಕೊರೊನಾ’. ಅಷ್ಟಕ್ಕೂ ಈ ರೋಗ ಹುಬೈ ಪ್ರಾಂತ್ಯದ ವುಹಾನ್ನಲ್ಲಿ ಹೆಚ್ಚಾಗಿ ಹರಡಿದ್ದು, ಚೀನಾದ ಇನ್ನೂ ಅನೇಕ ಭಾಗಗಳಿಗೂ ವ್ಯಾಪಿಸಿರುವ ಸಾಧ್ಯತೆ ಇದೆ. ಹೀಗಾಗಿ ನೀವೇನಾದ್ರು ಚೀನಾಗೆ ಪ್ರಯಾಣಬೆಳೆಸುವವರಾಗಿದ್ರೆ, ತುಂಬಾ ಎಚ್ಚರಿಕೆಯಿಂದ ಇರಬೇಕಿದೆ.
ರೋಗದ ಲಕ್ಷಣಗಳೇನು?
‘ಕೊರೊನಾ’ ವೈರಸ್ ದೇಹಕ್ಕೆ ತಗುಲಿದ ಆರಂಭದಲ್ಲಿ ನೆಗಡಿ ಸಮಸ್ಯೆ ವಿಪರೀತ ಕಾಡತೊಡಗುತ್ತದೆ. ರೋಗಲಕ್ಷಣಗಳು ಕ್ರಮೇಣ ಹೆಚ್ಚಾಗುತ್ತಾ ಸಾಗಿದಂತೆ ವೈರಸ್ ರೋಗಿ ದೇಹವನ್ನು ಸುಸ್ತಾಗುವಂತೆ ಮಾಡಿಬಿಡುತ್ತದೆ. ‘ನಿಮೋನಿಯಾ’ ರೀತಿಯಲ್ಲೇ ತೊಂದರೆ ನೀಡುತ್ತದೆ, ಹೀಗಾಗಿ ಸದ್ಯಕ್ಕೆ ನಿಮೋನಿಯಾ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ. ವೈರಸ್ ತಗುಲಿ ಸುಸ್ತು ಹೆಚ್ಚಾಗುತ್ತಾ ಸಾಗಿದಂತೆಲ್ಲಾ ರೋಗಿ ನಡೆಯಲಾಗದ ಸ್ಥಿತಿಯನ್ನೇ ತಲುಪಿಬಿಡುತ್ತಾನೆ. ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ ರೋಗಿಯು ಸಾವನ್ನಪ್ಪುವವೇ ಹೆಚ್ಚಾಗಿರುತ್ತದೆ.
ಒಟ್ನಲ್ಲಿ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೂ ‘ಕೊರೊನಾ’ ವೈರಸ್ ದೊಡ್ಡ ಆತಂಕ ತಂದೊಡ್ಡಿದೆ. ಹೀಗಾಗಿ ಎಲ್ಲಾ ರಾಷ್ಟ್ರಗಳು ಫುಲ್ ಅಲರ್ಟ್ ಆಗಿವೆ. ನೀವು ಮಾಂಸಾಹಾರಿಗಳಾಗಿದ್ದರೆ ಎಚ್ಚರಿಕೆಯಿಂದ ಇರೋದು ಒಳಿತು. ಹಾಗೇ ಚೀನಾಗೆ ಪ್ರಯಾಣ ಬೆಳೆಸುವ ಪ್ಲ್ಯಾನ್ ಏನಾದ್ರೂ ಇದ್ರೆ ಭಾರಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
Published On - 7:34 am, Sat, 18 January 20