
ನ್ಯೂಯಾರ್ಕ್ ನಗರದಲ್ಲಿ (New York City) ದೀಪಾವಳಿಗೆ (Diwali) ಶಾಲಾ ರಜೆ ಇರುವ ಸಾಧ್ಯತೆಯಿದೆ ಎಂದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ನ್ಯೂಯಾರ್ಕ್ ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಶಾಲೆಗೆ ರಜೆ ನೀಡುವ ಬಗ್ಗೆ ಮಸೂದೆಯನ್ನು ಸಿದ್ಧಪಡಿಸಲಾಗಿದ್ದು, ವಿಧಾನಮಂಡಲವನ್ನು ಮುಂದೂಡುವ ಮೊದಲು ಅಂಗೀಕರಿಸಲಾಗಿದೆ. ಜೂನ್ 10 ರಂದು ತಮ್ಮ ಅಧಿವೇಶನವನ್ನು ಕೊನೆಗೊಳಿಸುವ ಮೊದಲು ನ್ಯೂಯಾರ್ಕ್ ಸೆನೆಟ್ ಮತ್ತು ಅಸೆಂಬ್ಲಿ ಮಸೂದೆಯ ಪರವಾಗಿ ಮತ ಚಲಾಯಿಸಿದವು ಎಂದು ವರದಿ ಹೇಳಿದೆ.
ಮಸೂದೆಯು ಈಗ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಟೇಬಲ್ಗೆ ಹೋಗಲಿದ್ದು ಅಲ್ಲಿ ಅವರು ಅದನ್ನು ಕಾನೂನಾಗಿ ಮಾಡಲು ಸಹಿ ಹಾಕುವ ನಿರೀಕ್ಷೆಯಿದೆ. ಈ ಹಿಂದೆ 2021 ಮತ್ತು 2022ರಲ್ಲಿ ಎರಡು ಬಾರಿ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಲಾಗಿತ್ತು. ಎರಡೂ ವಿಫಲವಾಗಿತ್ತು. ಈ ಮಸೂದೆಯನ್ನು ವಿಧಾನಸಭೆಯ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಮಂಡಿಸಿ, ಮಸೂದೆ ಅಂಗೀಕಾರವಾದಾಗ ದಕ್ಷಿಣ ಏಷ್ಯಾದ ಸಮುದಾಯದ ಕನಸನ್ನು ನನಸು ಮಾಡಿದೆ ಎಂದು ಹೇಳಿದರು.
ಅಮೆರಿಕದಲ್ಲಿ ಇನ್ನೂ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಗಿಲ್ಲ. ಕಳೆದ ತಿಂಗಳು ಯುಎಸ್ ಕಾಂಗ್ರೆಸ್ ಮಹಿಳೆ ಗ್ರೇಸ್ ಮೆಂಗ್ ಅವರು ದೀಪಾವಳಿಯನ್ನು ಫೆಡರಲ್ ರಜಾದಿನವೆಂದು ಘೋಷಿಸುವ ಮಸೂದೆಯನ್ನು ಮಂಡಿಸಿದರು. ಒಂದು ವೇಳೆ ಜಾರಿಗೆ ಬಂದರೆ, ದೀಪಾವಳಿ ಅಮೆರಿಕದಲ್ಲಿ 12 ನೇ ಫೆಡರಲ್ ಮಾನ್ಯತೆ ಪಡೆದ ರಜಾದಿನವಾಗುತ್ತದೆ ಎಂದು ವರದಿ ಹೇಳಿದೆ.
ಏಪ್ರಿಲ್‌ನಲ್ಲಿ, ಪೆನ್ಸಿಲ್ವೇನಿಯಾ ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಘೋಷಿಸಿತು. ಸೆನೆಟರ್ ನಿಕಿಲ್ ಸವಾಲ್ ಅವರು ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಗುರುತಿಸಲು ಸೆನೆಟ್ ಸರ್ವಾನುಮತದಿಂದ ಮತ ಹಾಕಿತು. ಈ ಬೆಳಕು ಮತ್ತು ಸಂಬಂಧದ ಹಬ್ಬವನ್ನು ಆಚರಿಸುವ ಎಲ್ಲಾ ಪೆನ್ಸಿಲ್ವೇನಿಯನ್ನರಿಗೆ ಸ್ವಾಗತ, ನಿಮ್ಮನ್ನು ಪರಿಗಣಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಯುಎಸ್ ಸೆನೆಟರ್ ಗ್ರೆಗ್ ರೋಥ್‌ಮನ್, ದೀಪಾವಳಿಯನ್ನು ಅಧಿಕೃತ ರಾಜ್ಯ ರಜಾದಿನವೆಂದು ಗುರುತಿಸುವುದು ನಮ್ಮ ಕಾಮನ್‌ವೆಲ್ತ್‌ನ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿಹಿಡಿಯುತ್ತದೆ. 34 ನೇ ಸೆನೆಟೋರಿಯಲ್ ಜಿಲ್ಲೆಯ ಅನೇಕ ನಿವಾಸಿಗಳನ್ನು ಒಳಗೊಂಡಂತೆ ಸಾವಿರಾರು ಪೆನ್ಸಿಲ್ವೇನಿಯನ್ನರು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ