
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. 2022 ರಲ್ಲಿ ತಾವು ಅಧಿಕಾರದಲ್ಲಿದ್ದರೆ ಸಂಘರ್ಷ ಸಂಭವಿಸುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ದಿ ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ಯುದ್ಧದಲ್ಲಿ ಜನರು ಪ್ರಾಣ ಕಳೆದುಕೊಳ್ಳುವುದು ಪುಟಿನ್ಗೂ ಇಷ್ಟವಿಲ್ಲ, ಜನರ ಸಾವನ್ನು ತಡೆಯಬೇಕೆಂದು ಅವರು ಬಯಸುತ್ತಾರೆ. ಬೈಡನ್ ನಮ್ಮ ದೇಶಕ್ಕೆ ಮುಜುಗರ ತಂದೊಡ್ಡಿದ್ದರು ಎಂದಿದ್ದಾರೆ.
ಸುಮಾರು ಮೂರು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಲು ನೇರ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯನ್ನು ಪುಟಿನ್ ವ್ಯಕ್ತಪಡಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಅಧಿಕಾರಾವಧಿ ಮುಗಿದಿದೆ. ಹಾಗಾಗಿ ಅವರ ಜತೆ ಮಾತನಾಡಲು ಪುಟಿನ್ ಸಿದ್ಧರಿಲ್ಲ. ಟ್ರಂಪ್ ಉಕ್ರೇನ್‌ನೊಂದಿಗೆ 500 ಮಿಲಿಯನ್ ಡಾಲರ್‌ಗಳ ಒಪ್ಪಂದವನ್ನು ಪ್ರಸ್ತಾಪಿಸಿದ್ದಾರೆ.
ಮತ್ತಷ್ಟು ಓದಿ: ಗಾಜಾ ಪಟ್ಟಿಯ ಸ್ವಾಧೀನಕ್ಕೆ ಮುಂದಾದ ಅಮೆರಿಕ; ನೆತನ್ಯಾಹು ಭೇಟಿ ಬಳಿಕ ಟ್ರಂಪ್ ಅಚ್ಚರಿಯ ಘೋಷಣೆ
ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಎಂದು ಟ್ರಂಪ್ ಮೊದಲೇ ಹೇಳಿದ್ದರು. ಯುಕ್ರೇನ್ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮುಂದಾಗದಿದ್ದರೆ ಮಾಸ್ಕೋ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸಬಹುದು ಎಂದು ಡೊನಾಲ್ಡ್ ಟ್ರಂಪ್ ಈ ಹಿಂದೆ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:30 am, Sun, 9 February 25