ಗಾಜಾ ಪಟ್ಟಿಯ ಸ್ವಾಧೀನಕ್ಕೆ ಮುಂದಾದ ಅಮೆರಿಕ; ನೆತನ್ಯಾಹು ಭೇಟಿ ಬಳಿಕ ಟ್ರಂಪ್ ಅಚ್ಚರಿಯ ಘೋಷಣೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ನೆತನ್ಯಾಹು ಅವರಾಗಿದ್ದಾರೆ. ಈ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಅಚ್ಚರಿಯ ಘೋಷಣೆ ಮಾಡಿದ್ದಾರೆ. ಇಸ್ರೇಲ್‌ನ ಗಾಜಾ ಪಟ್ಟಿಯನ್ನು ಅಮೆರಿಕ ವಶಕ್ಕೆ ಪಡೆಯಲಿದೆ ಎಂದು ಟ್ರಂಪ್ ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ವಾಷಿಂಗ್ಟನ್: ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್‌ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಪ್ಲಾನ್ ಮಾಡಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯ ನಂತರ ಟ್ರಂಪ್ ಈ ಬಗ್ಗೆ ಘೋಷಣೆ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಲ್ಲದೆ, ಈ ಪ್ರಸ್ತಾಪದ ಬಗ್ಗೆ ಜಗತ್ತಿನಾದ್ಯಂತ ಚರ್ಚೆಗಳು ಶುರುವಾಗಿವೆ. ಪುನರಾಭಿವೃದ್ಧಿ ಯೋಜನೆಯಡಿ ಅಮೆರಿಕ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿಯಾದ ಟ್ರಂಪ್, ಗಾಜಾ ಪಟ್ಟಿಯನ್ನು ತಮ್ಮ ಸ್ವಾಧೀನಕ್ಕೆ ಪಡೆಯುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಈ ಪ್ರಸ್ತಾಪಕ್ಕೆ ಇಸ್ರೇಲ್ ಯಾವ ಉತ್ತರ ನೀಡಿದೆ ಎಂಬ ಕುರಿತು ಖಚಿತ ಮಾಹಿತಿಯಿಲ್ಲ.
ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿಗೊಳಿಸಿದ ನಂತರ ಅಮೆರಿಕವು ಗಾಜಾವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಯೋಜನೆಯಡಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆಯು ಎನ್ಕ್ಲೇವ್ ಅನ್ನು “ಮಧ್ಯಪ್ರಾಚ್ಯದ ರಿವೇರಿಯಾ” ಆಗಿ ಪರಿವರ್ತಿಸಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇಸ್ರೇಲ್-ಪ್ಯಾಲೆಸ್ತೀನಿಯನ್ ಸಂಘರ್ಷದ ಬಗ್ಗೆ ದಶಕಗಳ ಕಾಲದ ಯುಎಸ್ ನೀತಿಯನ್ನು ರದ್ದುಗೊಳಿಸಿದ ಆಘಾತಕಾರಿ ಘೋಷಣೆಯ ಬೆನ್ನಲ್ಲೇ ಟ್ರಂಪ್ ಯುನೈಟೆಡ್ ಸ್ಟೇಟ್ಸ್ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ನಾವು ಗಾಜಾದೊಂದಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 13ರಂದು ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಮಾತುಕತೆ, ಯಾವ್ಯಾವ ವಿಷಯಗಳ ಕುರಿತು ಚರ್ಚೆ?
ಗಾಜಾದಲ್ಲಿರುವ ನಾಶವಾದ ಕಟ್ಟಡಗಳನ್ನು ತೆರವುಗೊಳಿಸುವ ಮತ್ತು ಸ್ಫೋಟಗೊಳ್ಳದ ಅಪಾಯಕಾರಿ ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಅಮೆರಿಕದ ಆಡಳಿತವು ವಹಿಸಿಕೊಳ್ಳುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಗಾಜಾವನ್ನು ಆಳುವ ಪ್ಯಾಲೆಸ್ಟೀನಿಯನ್ ಗುಂಪಾದ ಹಮಾಸ್ ಈ ಪ್ರಸ್ತಾಪವನ್ನು ಖಂಡಿಸಿದೆ. ಈ ಪ್ರದೇಶದಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಪ್ರಯತ್ನವಿದು. ಗಾಜಾ ಪಟ್ಟಿಯಲ್ಲಿರುವ ನಮ್ಮ ಜನರು ಈ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹಮಾಸ್ ಟ್ರಂಪ್ ಪ್ರಸ್ತಾಪವನ್ನು ತೀವ್ರವಾಗಿ ಖಂಡಿಸಿತು.
BIG BREAKING 🚨 After Bilateral Meeting with Israel 🇮🇱 Prime Minister Benjamin Netanyahu, the US President Donald Trump declared that the US will take over Gaza Strip very soon. Trump said Palestinians should move to neighbouring countries.
Palestine Sympathizers are 😢🥺
He… pic.twitter.com/0MQE2KKF0Y
— KV Iyyer – BHARAT 🇮🇳🇮🇱 (@BanCheneProduct) February 5, 2025
ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಅವರ ಈ ಪ್ರಸ್ತಾಪವು ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ವಿಸ್ತರಿಸಲು ಮುಂದಿನ ಸುತ್ತಿನ ಮಾತುಕತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಇಸ್ರೇಲ್ ಮತ್ತು ಹಮಾಸ್ನಿಂದ ಕದನ ವಿರಾಮದ ಒಪ್ಪಂದದಂತೆ ಹಲವು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. 33 ಇಸ್ರೇಲಿ ಸೆರೆಯಾಳುಗಳು ಮತ್ತು ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವ ಆರಂಭಿಕ 42 ದಿನಗಳ ಒಪ್ಪಂದವು ಮಾರ್ಚ್ 1ರಂದು ಮುಕ್ತಾಯಗೊಳ್ಳುತ್ತದೆ.
ಗಾಜಾ ಪಟ್ಟಿ ಇತಿಹಾಸ:
ಮೆಡಿಟರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿರುವ ಒಂದು ಸಣ್ಣ ಭೂಭಾಗವಾದ ಗಾಜಾ ಪಟ್ಟಿಯು ದಶಕಗಳಿಂದ ಸಂಘರ್ಷ ಮತ್ತು ಉದ್ವಿಗ್ನತೆಯ ಕೇಂದ್ರಬಿಂದುವಾಗಿದೆ. ಕೇವಲ 365 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಸಣ್ಣ ಪ್ರದೇಶವು ಸುಮಾರು 2 ಮಿಲಿಯನ್ ಜನರಿಗೆ ನೆಲೆಯಾಗಿದೆ. ಇದು ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಗಾಜಾ ಪಟ್ಟಿಯು ನೈಋತ್ಯಕ್ಕೆ ಈಜಿಪ್ಟ್, ಉತ್ತರ ಮತ್ತು ಪೂರ್ವ ಭಾಗದಲ್ಲಿ ಇಸ್ರೇಲ್‌ನ ಗಡಿಯನ್ನು ಹೊಂದಿದೆ. ಪಶ್ಚಿಮಕ್ಕೆ ಇದು ಮೆಡಿಟರೇನಿಯನ್ ಸಮುದ್ರದಿಂದ ಸುತ್ತುವರೆದಿದ್ದು ಸುತ್ತಲೂ ಕರಾವಳಿ ಪ್ರದೇಶವನ್ನು ಹೊಂದಿರುವ ಸುಂದರವಾದ ನಗರವಾಗಿದೆ.
ಇದನ್ನೂ ಓದಿ: ಗಾಜಾದಲ್ಲಿ ಕದನ ವಿರಾಮ ಒಪ್ಪಂದ; ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್
20ನೇ ಶತಮಾನದಲ್ಲಿ ಗಾಜಾ ಪಟ್ಟಿಯು ಬ್ರಿಟಿಷ್ ಪ್ಯಾಲೆಸ್ಟೈನ್ ಆದೇಶದ ಭಾಗವಾಯಿತು. ಎರಡನೇ ಮಹಾಯುದ್ಧದ ನಂತರ ಇದು ವಿವಾದಿತ ಪ್ರದೇಶವಾಯಿತು. 1948ರ ಅರಬ್-ಇಸ್ರೇಲಿ ಯುದ್ಧದ ನಂತರ, ಗಾಜಾ ಈಜಿಪ್ಟ್ ಆಡಳಿತಕ್ಕೆ ಒಳಪಟ್ಟಿತು ಮತ್ತು ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಬಿಕ್ಕಟ್ಟು ಪ್ರಾರಂಭವಾಯಿತು. 1967ರಲ್ಲಿ ನಡೆದ 6 ದಿನಗಳ ಯುದ್ಧದ ಸಮಯದಲ್ಲಿ ಗಾಜಾ ಪಟ್ಟಿಯನ್ನು ಇಸ್ರೇಲ್ ಆಕ್ರಮಿಸಿಕೊಂಡಿತ್ತು. ಈ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ.
‘I hope we could do something with Gaza where they wouldn’t want to go back.’
Donald Trump calls for a “beautiful area” where Palestinians can “resettle permanently” as he meets Netanyahu at the White House.https://t.co/D5alSixpEe
📺 Sky 501, Virgin 602, Freeview 233 and YT pic.twitter.com/CSwUnyex8N
— Sky News (@SkyNews) February 4, 2025
ಇಸ್ರೇಲ್-ಪ್ಯಾಲೆಸ್ಟೀನಿಯನ್ ಸಂಘರ್ಷವು ಗಾಜಾ ಪಟ್ಟಿಯ ನಿರಂತರ ಸಮಸ್ಯೆಗಳ ಕೇಂದ್ರಬಿಂದುವಾಗಿದೆ. ಇಲ್ಲಿ ಯುದ್ಧಗಳು ಮಾಮೂಲಿ ಎಂಬಂತಾಗಿದೆ. ಪ್ಯಾಲೆಸ್ಟೀನಿಯನ್ ಇಸ್ಲಾಮಿಸ್ಟ್ ಸಂಘಟನೆಯಾದ ಹಮಾಸ್ ಈ ಗಾಜಾ ಪಟ್ಟಿಯನ್ನು ಆಳುತ್ತದೆ. ಆದರೆ, ಅದು ಏಕೈಕ ಅಧಿಕಾರವಲ್ಲ. ವೆಸ್ಟ್ ಬ್ಯಾಂಕ್ ಅನ್ನು ಫತಾಹ್ ನೇತೃತ್ವದ ಪ್ಯಾಲೆಸ್ಟೀನಿಯನ್ ಪ್ರಾಧಿಕಾರವು ನಿಯಂತ್ರಿಸುತ್ತದೆ. ಹಮಾಸ್ ಮತ್ತು ಫತಾಹ್ ನಡುವಿನ ರಾಜಕೀಯ ಪೈಪೋಟಿಯು ಪ್ಯಾಲೆಸ್ಟೀನಿಯನ್ ಉದ್ದೇಶವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷವು ಭೀಕರ ಮೈಲಿಗಲ್ಲನ್ನು ತಲುಪಿದೆ. ಇದೀಗ ಕದನವಿರಾಮ ಒಪ್ಪಂದವಾಗಿದ್ದು, ಹಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ