ಫೆಬ್ರವರಿ 13ರಂದು ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಮಾತುಕತೆ, ಯಾವ್ಯಾವ ವಿಷಯಗಳ ಕುರಿತು ಚರ್ಚೆ?
ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಫೆಬ್ರವರಿ 13 ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಟ್ರಂಪ್ ತಮ್ಮ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೆ ಭೋಜನ ಕೂಟವನ್ನು ಸಹ ಆಯೋಜಿಸಬಹುದು ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 12ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅವರು ತಮ್ಮ ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಪೂರೈಸಿದ ಬಳಿಕ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ.
ಫೆಬ್ರವರಿ 12 ರ ಸಂಜೆ ಪ್ರಧಾನಿ ಅಮೆರಿಕ ತಲುಪುವ ನಿರೀಕ್ಷೆಯಿದ್ದು, ಮರುದಿನ ಅವರ ಮತ್ತು ಟ್ರಂಪ್ ನಡುವೆ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಯದಲ್ಲಿ, ಟ್ರಂಪ್ ಸ್ವತಃ ಪ್ರಧಾನಿ ಮೋದಿಗೆ ಭೋಜನವನ್ನು ಆಯೋಜಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಫ್ರಾನ್ಸ್ ಭೇಟಿಯನ್ನು ಮುಗಿಸಿದ ನಂತರ, ಪ್ರಧಾನಿ ಮೋದಿ ಫೆಬ್ರವರಿ 12 ರ ಸಂಜೆ ವಾಷಿಂಗ್ಟನ್ ಡಿಸಿ ತಲುಪಲಿದ್ದಾರೆ ಮತ್ತು ಫೆಬ್ರವರಿ 14 ರವರೆಗೆ ಅಮೆರಿಕ ರಾಜಧಾನಿಯಲ್ಲಿಯೇ ಇರಲಿದ್ದಾರೆ. ಅವರು ಫೆಬ್ರವರಿ 13 ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಟ್ರಂಪ್ ತಮ್ಮ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೆ ಭೋಜನ ಕೂಟವನ್ನು ಸಹ ಆಯೋಜಿಸಬಹುದು ಎನ್ನಲಾಗಿದೆ.
ಪ್ರಧಾನಿ ಮೋದಿ ಅವರು ಅಮೆರಿಕದ ಕಾರ್ಪೊರೇಟ್ ಜಗತ್ತಿನ ಮತ್ತು ಅಮೆರಿಕನ್-ಭಾರತೀಯ ಸಮುದಾಯದ ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕೆನಡಾ ಮತ್ತು ಮೆಕ್ಸಿಕನ್ ಆಮದುಗಳ ಮೇಲೆ ಶೇ. 25 ರಷ್ಟು ಸುಂಕವನ್ನು ಹಾಗೂ ಚೀನಾದ ಸರಕುಗಳ ಮೇಲೆ ಶೇ. 10 ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸುವುದಾಗಿ ಅಧ್ಯಕ್ಷ ಟ್ರಂಪ್ ಘೋಷಿಸಿದ್ದರು.
ಮತ್ತಷ್ಟು ಓದಿ: ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್
ಯಾವ ವಿಷಯಗಳನ್ನು ಚರ್ಚಿಸಲಾಗುವುದು? ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಕುರಿತು ಚರ್ಚೆ ಭಾರತ-ಅಮೆರಿಕ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರದ ಕುರಿತು ಚರ್ಚೆ ಎಐ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ-ಯುಎಸ್ ಪಾಲುದಾರಿಕೆಗೆ ಹೊಸ ಆಯಾಮ
ನವೆಂಬರ್‌ನಲ್ಲಿ ನಡೆದ ಚುನಾವಣಾ ಗೆಲುವಿನ ನಂತರ ಜನವರಿ 20 ರಂದು ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನಿಯವರ ಮೊದಲ ಅಮೆರಿಕ ಭೇಟಿಯಾಗಲಿದೆ. ಪ್ ಆಡಳಿತ ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ದ್ವಿಪಕ್ಷೀಯ ಭೇಟಿಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಲಿರುವ ಕೆಲವೇ ವಿದೇಶಿ ನಾಯಕರಲ್ಲಿ ಮೋದಿ ಕೂಡ ಒಬ್ಬರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನು ದೂರವಾಣಿ ಮೂಲಕ ಅಭಿನಂದಿಸಿದ್ದರು. ಫೆಬ್ರವರಿ 10 ಮತ್ತು 11 ರಂದು ನಡೆಯಲಿರುವ ಕೃತಕ ಬುದ್ಧಿಮತ್ತೆ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ಅವರು ಪ್ಯಾರಿಸ್‌ಗೆ ತೆರಳಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ