ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್

ಭಾರತೀಯ ವಲಸಿಗರನ್ನು ಗಡಿಪಾರು ಮಾಡಲು ಟ್ರಂಪ್ ಸರ್ಕಾರ ಮುಂದಾಗಿದ್ದು, ಇಂದು ಹಲವರನ್ನು ಹೊತ್ತ ವಿಮಾನವು ಭಾರತಕ್ಕೆ ಬಂದಿಳಿಯಲಿದೆ. ಈ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು, ಇದೀಗ ಅದರ ಎರಡನೇ ಭಾಗದ ಕಾರ್ಯಾಚರಣೆ ನಡೆಯುತ್ತಿದೆ. ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು ಆದರೆ ಕನಿಷ್ಠ 24 ಗಂಟೆಗಳಾದರೂ ಅದು ತಲುಪಲಿಲ್ಲ ಎಂದು ಹೇಳಿದರು. ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದರು.

ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್
ಡೊನಾಲ್ಡ್​ ಟ್ರಂಪ್ Image Credit source: PTI
Follow us
ನಯನಾ ರಾಜೀವ್
|

Updated on: Feb 04, 2025 | 7:56 AM

ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್​ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತೀಯ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ 500 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಇತ್ತೀಚೆಗಷ್ಟೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟ್ರಂಪ್‌ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಈ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು, ಇದೀಗ ಅದರ ಎರಡನೇ ಭಾಗದ ಕಾರ್ಯಾಚರಣೆ ನಡೆಯುತ್ತಿದೆ.

ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು ಆದರೆ ಕನಿಷ್ಠ 24 ಗಂಟೆಗಳಾದರೂ ಅದು ತಲುಪಲಿಲ್ಲ ಎಂದು ಹೇಳಿದರು. ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದರು. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಪ್ಯೂ ಸಂಶೋಧನಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಭಾರತದಿಂದ ಬಂದ ಸರಿಸುಮಾರು 725,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ , ಇದು ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಅನಧಿಕೃತ ವಲಸಿಗರ ಮೂರನೇ ಅತಿದೊಡ್ಡ ಜನಸಂಖ್ಯೆಯಾಗಿದೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮತ್ತೆ ಟ್ರಂಪ್ ದರ್ಬಾರ್, ಸರ್ಕಾರ ರಚನೆಯಾಗುತ್ತಿದ್ದಂತೆ ಮಾಡಿದ ಘೋಷಣೆಗಳಿವು

ದಾಖಲೆರಹಿತ ಭಾರತೀಯರನ್ನು ತಮ್ಮ ದೇಶಕ್ಕೆ ಕಾನೂನುಬದ್ಧವಾಗಿ ಹಿಂದಕ್ಕೆ ಕರೆದುಕೊಳ್ಳಲು ಭಾರತ ಯಾವಾಗಲೂ ಸಿದ್ಧವಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿತ್ತು. ಅಮೆರಿಕದಿಂದ ಯಾರನ್ನು ಭಾರತಕ್ಕೆ ಗಡೀಪಾರು ಮಾಡಬಹುದು ಎಂಬುದನ್ನು ಭಾರತ ಪರಿಶೀಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

ಪ್ರತಿಯೊಂದು ದೇಶದಲ್ಲೂ, ಮತ್ತು ಅಮೆರಿಕವೂ ಇದಕ್ಕೆ ಹೊರತಾಗಿಲ್ಲ, ನಮ್ಮ ನಾಗರಿಕರಲ್ಲಿ ಯಾರಾದರೂ ಅಕ್ರಮವಾಗಿ ಅಲ್ಲಿಗೆ ಬಂದರೆ ಮತ್ತು ಅವರು ನಮ್ಮ ನಾಗರಿಕರು ಎಂದು ನಮಗೆ ಖಚಿತವಾಗಿದ್ದರೆ, ಅವರು ಭಾರತಕ್ಕೆ ಕಾನೂನುಬದ್ಧವಾಗಿ ಮರಳಲು ನಾವು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಅಕ್ರಮವಾಗಿ ಹೋಗಿರುವ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂದೂ ಸರಿಯಾದುದ್ದನ್ನೇ ಮಾಡುತ್ತಾರೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಇಬ್ಬರು ನಾಯಕರ ನಡುವಿನ ದೂರವಾಣಿ ಕರೆಯ ನಂತರ ಈ ಹೇಳಿಕೆಗಳು ಬಂದಿದ್ದು, ಅವರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು.

ಟೆಕ್ಸಾಸ್‌ನ ಎಲ್ ಪಾಸೊ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿರುವ 5,000 ಕ್ಕೂ ಹೆಚ್ಚು ವಲಸಿಗರನ್ನು ಗಡಿಪಾರು ಮಾಡಲು ಪೆಂಟಗನ್ ವಿಮಾನಗಳ ಸೇವೆಯನ್ನು ಪ್ರಾರಂಭಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ