Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಯುಕ್ರೇನ್ ಯುದ್ಧ ಕೊನೆಗೊಳಿಸುತ್ತೇನೆ, ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಘೋಷಣೆ

ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನಾದಿನದಂದು ವಿಜಯೋತ್ಸವದಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವುದಾಗಿ ಮತ್ತು ಪಶ್ಚಿಮ ಏಷ್ಯಾದಲ್ಲಿನ ಅವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದರು. ಗಡಿಗಳ ಮೇಲೆ ನಾವು ಶೀಘ್ರವಾಗಿ ನಿಯಂತ್ರಣವನ್ನು ಮರು ಸ್ಥಾಪಿಸುತ್ತೇವೆ ಎಂದು ಟ್ರಂಪ್ ಹೇಳಿದರು.

ನಾನು ಯುಕ್ರೇನ್ ಯುದ್ಧ ಕೊನೆಗೊಳಿಸುತ್ತೇನೆ, ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಘೋಷಣೆ
ಡೊನಾಲ್ಡ್​ ಟ್ರಂಪ್
Follow us
ನಯನಾ ರಾಜೀವ್
|

Updated on: Jan 20, 2025 | 8:10 AM

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ‘ನಾನು ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇನೆ. ನಾನು ಮಧ್ಯಪ್ರಾಚ್ಯದಲ್ಲಿ ಅವ್ಯವಸ್ಥೆಯನ್ನು ನಿಲ್ಲಿಸುತ್ತೇನೆ ಮತ್ತು ಮೂರನೇ ಮಹಾಯುದ್ಧ ನಡೆಯದಂತೆ ತಡೆಯುತ್ತೇನೆ’ ಎಂದು ಹೇಳಿದ್ದಾರೆ. ಗಡಿಗಳ ಮೇಲೆ ನಾವು ಶೀಘ್ರವಾಗಿ ನಿಯಂತ್ರಣವನ್ನು ಮರು ಸ್ಥಾಪಿಸುತ್ತೇವೆ ಎಂದು ಟ್ರಂಪ್ ಹೇಳಿದರು.

ಎಲಾನ್ ಮಸ್ಕ್ ಅವರ ಅಧ್ಯಕ್ಷತೆಯಲ್ಲಿ ನಾವು ಸರ್ಕಾರದ ದಕ್ಷತೆಯ ಹೊಸ ವಿಭಾಗವನ್ನು ರಚಿಸುತ್ತೇವೆ ಎಂದು ಟ್ರಂಪ್ ಹೇಳಿದರು. ನಾವು ಬಹಳಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಎಲಾನ್ ಹೇಳಿದ್ದಾರೆ. ಮುಂದಿನ ಪ್ರಮುಖವಾದವು ಗಮನಾರ್ಹ ಬದಲಾವಣೆಗಳನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ ಮತ್ತು ಮುಂಬರುವ ಶತಮಾನಗಳವರೆಗೆ ಅಮೆರಿಕ ಬಲಿಷ್ಠಗೊಳಿಸಲು ಅಡಿಪಾಯವನ್ನು ಹಾಕುತ್ತೇವೆ ಮೇಕಿಂಗ್ ಅಮೆರಿಕ ಮತ್ತೆ ಗ್ರೇಟ್ ಎಂದಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗಾಗಿ ನಾವು ಮೊದಲ ಹೆಜ್ಜೆಯಾಗಿ ಐತಿಹಾಸಿಕ ಕದನ ವಿರಾಮ ಒಪ್ಪಂದವನ್ನು ಸಾಧಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನವೆಂಬರ್‌ನಲ್ಲಿ ನಮ್ಮ ಐತಿಹಾಸಿಕ ವಿಜಯದ ಪರಿಣಾಮವಾಗಿ ಈ ಒಪ್ಪಂದವನ್ನು ಸಾಧಿಸಲು ಸಾಧ್ಯವಾಯಿತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ನಾನು ಅಧ್ಯಕ್ಷನಾಗಿದ್ದರೆ ಇದು (ಇಸ್ರೇಲ್-ಹಮಾಸ್ ಸಂಘರ್ಷ) ಎಂದಿಗೂ ಸಂಭವಿಸುತ್ತಿರಲಿಲ್ಲ.

ಮತ್ತಷ್ಟು ಓದಿ: ಹೌಡಿ ಮೋದಿ ಬಳಿಕ ಡೊನಾಲ್ಡ್ ಟ್ರಂಪ್ ಪದಗ್ರಹಣದಲ್ಲಿ ಭಾರತೀಯ ಡೋಲ್ ತಾಶಾ ಭಾಗಿ

ಹೊಸದಾಗಿ ಚುನಾಯಿತರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇಕ್ ಅಮೆರಿಕ ಗ್ರೇಟ್ ಎಗೇನ್ (MAGA) ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾವು ನಮ್ಮ ದೇಶವನ್ನು ಹಿಂದೆಂದಿಗಿಂತಲೂ ಶ್ರೇಷ್ಠವಾಗಿಸಲು ಹೊರಟಿದ್ದೇವೆ ಎಂದು ಹೇಳಿದರು. ನಾವು ಅಮೆರಿಕಕ್ಕೆ ಹೊಸ ದಿನ ಆರಂಭಿಸುತ್ತಿದ್ದೇವೆ. ಶಕ್ತಿ ಮತ್ತು ಸಮೃದ್ಧಿ, ಘನತೆ ಮತ್ತು ವೈಭವ ಇವೆಲ್ಲಾ ಇರುತ್ತೆ ನಾವು ವಿಫಲವಾದ, ಭ್ರಷ್ಟ ರಾಜಕೀಯ ಸ್ಥಾಪನೆಯ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

ರಿಪಬ್ಲಿಕನ್ನರು ಎಂದಿಗೂ ಯುವ ಮತವನ್ನು ಗೆದ್ದಿಲ್ಲ, ನಾನು ಅದನ್ನು 36 ಅಂಕಗಳಿಂದ ಗೆದ್ದಿದ್ದೇನೆ ಅದಕ್ಕಾಗಿಯೇ ನಾನು ಟಿಕ್‌ಟಾಕ್ ಅನ್ನು ಪ್ರೀತಿಸುತ್ತೇನೆ. ನಾವು ಟಿಕ್‌ಟಾಕ್ ಅನ್ನು ಉಳಿಸಬೇಕಾಗಿದೆ ಏಕೆಂದರೆ ನಾವು ಬಹಳಷ್ಟು ಉದ್ಯೋಗಗಳನ್ನು ಉಳಿಸಬೇಕಾಗಿದೆ.

ನಮ್ಮ ವ್ಯವಹಾರವನ್ನು ಚೀನಾಕ್ಕೆ ನೀಡಲು ನಾವು ಬಯಸುವುದಿಲ್ಲ. ನಾನು ಟಿಕ್‌ಟಾಕ್ ಅನ್ನು ಅನುಮೋದಿಸಲು ಒಪ್ಪಿಕೊಂಡಿದ್ದೇನೆ ಆದರೆ ಷರತ್ತಿದೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ರೆಡ್ ಕಾರ್ಪೆಟ್ ರೀ ಲಾಂಚ್​ಗೆ ಸ್ಟೈಲ್​ ಆಗಿ ಎಂಟ್ರಿ ಕೊಟ್ಟ ಪವಿತ್ರಾ ಗೌಡ
ರೆಡ್ ಕಾರ್ಪೆಟ್ ರೀ ಲಾಂಚ್​ಗೆ ಸ್ಟೈಲ್​ ಆಗಿ ಎಂಟ್ರಿ ಕೊಟ್ಟ ಪವಿತ್ರಾ ಗೌಡ
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ಮದುವೆಗೆ ಟೆಂಪಲ್-ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಮದುವೆಗೆ ಟೆಂಪಲ್-ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ