AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೋಟ್ ಕೊಟ್ರೆ 4.3 ಲಕ್ಷ ರೂ. ನಗದು ಗಿಫ್ಟ್: ಮಧ್ಯಂತರ ಚುನಾವಣೆಗೆ ಟ್ರಂಪ್ ಮೆಗಾ ಆಫರ್, ಅಮೆರಿಕನ್ನರಿಗೆ ಬಂಪರ್ ಭಾಗ್ಯ

ಡೊನಾಲ್ಡ್ ಟ್ರಂಪ್ ಅಮೆರಿಕದ ಮಧ್ಯಂತರ ಚುನಾವಣೆಗೆ ಬಂಪರ್ ಆಫರ್ ನೀಡಿದ್ದಾರೆ. ರಿಪಬ್ಲಿಕನ್ ಪಕ್ಷ ಹೌಸ್ ಮತ್ತು ಸೆನೆಟ್ ಎರಡರಲ್ಲೂ ಬಹುಮತ ಸಾಧಿಸಿದರೆ, ಪ್ರತಿ ವಯಸ್ಕ ನಾಗರಿಕನಿಗೆ 5000 ಡಾಲರ್ (ಸುಮಾರು 4.3 ಲಕ್ಷ ರೂ.) ನಗದು ನೀಡುವ ಭರವಸೆ ನೀಡಿದ್ದಾರೆ. ದೇಶದ ಬಲಿಷ್ಠ ಆರ್ಥಿಕತೆಯ ಲಾಭಾಂಶವನ್ನು 'ಟ್ರಂಪ್ ಡಿವಿಡೆಂಡ್' ಹೆಸರಿನಲ್ಲಿ ಹಂಚುವುದು ಇದರ ಉದ್ದೇಶ. ಇದು ರಾಜಕೀಯ ಸಂಚಲನ ಮೂಡಿಸಿದ್ದು, ಡೆಮಾಕ್ರಟಿಕ್ ಪಕ್ಷದ ಪೈಪೋಟಿಗೆ ಟ್ರಂಪ್‌ನ ತಂತ್ರವಾಗಿದೆ.

ವೋಟ್ ಕೊಟ್ರೆ  4.3 ಲಕ್ಷ ರೂ. ನಗದು ಗಿಫ್ಟ್: ಮಧ್ಯಂತರ ಚುನಾವಣೆಗೆ ಟ್ರಂಪ್ ಮೆಗಾ ಆಫರ್, ಅಮೆರಿಕನ್ನರಿಗೆ ಬಂಪರ್ ಭಾಗ್ಯ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Sep 10, 2026 | 11:26 AM

Share

ಡಲ್ಲಾಸ್, ಸೆಪ್ಟೆಂಬರ್ 10: ಅಮೆರಿಕದಲ್ಲಿ ನವೆಂಬರ್​ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರಲ್ಲೂ ಬಹುಮತ ಸಾಧಿಸಿದರೆ, ಅಮೆರಿಕದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ 5 ಸಾವಿರ ಡಾಲರ್ (ಸುಮಾರು 4.3 ಲಕ್ಷ ರೂ.) ನೇರ ನಗದು ನೀಡುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ದೇಶದ ಬಲಿಷ್ಠ ಆರ್ಥಿಕತೆ ಮತ್ತು ಆದಾಯದ ಲಾಭಾಂಶವನ್ನು ಜನರಿಗೆ ನೇರವಾಗಿ ಹಂಚುವುದಾಗಿ ಹೇಳಿರುವ ಅವರ ಈ ಬೃಹತ್ ಆಫರ್, ಅಮೆರಿಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಬಲಿಷ್ಠ ಆರ್ಥಿಕತೆ ಮತ್ತು ವಿದೇಶಿ ಸರಕುಗಳ ಮೇಲಿನ ಸುಂಕದ ಆದಾಯದಿಂದ ಈ ಹಣ ನೀಡಲಾಗುವುದು ಎಂದು ಪ್ರತಿಪಾದಿಸಿದ್ದಾರೆ.

ಟ್ರಂಪ್ ಡಿವಿಡೆಂಡ್ ಆಫರ್: ಯಶಸ್ವಿ ಕಾರ್ಪೊರೇಟ್ ಕಂಪನಿಗಳು ತಮ್ಮ ಷೇರುದಾರರಿಗೆ ಲಾಭಾಂಶ ಹಂಚುವಂತೆ, ದೇಶದ ಪ್ರಚಂಡ ಆರ್ಥಿಕ ಯಶಸ್ಸಿನ ಫಲವನ್ನು ನಾಗರಿಕರಿಗೆ ನೇರವಾಗಿ ಹಂಚಲಾಗುವುದು. ಇದನ್ನು ‘ಟ್ರಂಪ್ ಡಿವಿಡೆಂಡ್’ ಎಂದು ಕರೆದಿರುವ ಅವರು, ಈ ಹಣವನ್ನು ಅಮೆರಿಕದ ಗಡಿಯೊಳಗೆಯೇ ಖರ್ಚು ಮಾಡಬೇಕೆಂಬ ಷರತ್ತು ವಿಧಿಸಿದ್ದಾರೆ.

ಷರತ್ತುಬದ್ಧ ಭರವಸೆ: ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಮತದಾರರು ಸಂಸತ್ತಿನ ಉಭಯ ಸದನಗಳಲ್ಲೂ (ಹೌಸ್ ಮತ್ತು ಸೆನೆಟ್) ರಿಪಬ್ಲಿಕನ್ ಪಕ್ಷವನ್ನು ಗೆಲ್ಲಿಸಿದರೆ ಮಾತ್ರ ಈ ಪಾವತಿ ಜಾರಿಗೆ ಬರಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹಣಕಾಸು ಮೂಲದ ವಿವರಗಳಿಲ್ಲ: ಈ ಬೃಹತ್ ನಗದು ವಿತರಣೆಗೆ ಬಜೆಟ್‌ನಲ್ಲಿ ಹಣ ಹೇಗೆ ಹೊಂದಿಸಲಾಗುತ್ತದೆ, ವಿತರಣಾ ದಿನಾಂಕ ಯಾವುದು ಮತ್ತು ಇದಕ್ಕೆ ಕಾಂಗ್ರೆಸ್‌ನ ಶಾಸನಬದ್ಧ ಒಪ್ಪಿಗೆ ಅಗತ್ಯವೇ ಎಂಬ ಬಗ್ಗೆ ಟ್ರಂಪ್ ಯಾವುದೇ ಸ್ಪಷ್ಟ ನೀಲನಕ್ಷೆಯನ್ನು ನೀಡಿಲ್ಲ.

ಮತ್ತಷ್ಟು ಓದಿ:

ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ

ಹಿಂದಿನ ಯೋಜನೆಗಳ ಮುಂದುವರಿಕೆ: ಟ್ರಂಪ್ ಆಡಳಿತ ಈ ಹಿಂದೆ ನವಜಾತ ಶಿಶುಗಳಿಗೆ 1 ಸಾವಿರ ಡಾಲರ್ ಹೂಡಿಕೆ ನೀಡುವ “ಟ್ರಂಪ್ ಅಕೌಂಟ್ಸ್” ಹಾಗೂ ಸೇನಾ ಯೋಧರಿಗೆ 1,776 ಡಾಲರ್ “ವಾರಿಯರ್ ಡಿವಿಡೆಂಡ್” ನಂತಹ ನೇರ ಆರ್ಥಿಕ ಸವಲತ್ತುಗಳನ್ನು ಪ್ರಕಟಿಸಿತ್ತು. ಆದರೆ, ಈ ಹಿಂದೆ ಭರವಸೆ ನೀಡಿದ್ದ2 ಸಾವಿರ ಡಾಲರ್ ಸುಂಕ ರಿಯಾಯಿತಿ ಚೆಕ್‌ಗಳು ಇಂದಿಗೂ ಜಾರಿಗೆ ಬಂದಿಲ್ಲ ಎಂದು ವಿರೋಧ ಪಕ್ಷಗಳು ನೆನಪಿಸಿವೆ.

ಮಧ್ಯಂತರ ಚುನಾವಣೆಯ ರಾಜಕೀಯ ತಂತ್ರ: ಆಡಳಿತಾರೂಢ ಅಧ್ಯಕ್ಷರ ಪಕ್ಷವು ಮಧ್ಯಂತರ ಚುನಾವಣೆಗಳಲ್ಲಿ ಹಿನ್ನಡೆ ಕಾಣುವುದು ಅಮೆರಿಕದ ಇತಿಹಾಸದಲ್ಲಿ ವಾಡಿಕೆ. ಹಣದುಬ್ಬರ ಮತ್ತು ಜೀವನ ವೆಚ್ಚದ ಏರಿಕೆಯಿಂದ ಜನರಲ್ಲಿರುವ ಅಸಮಾಧಾನವನ್ನು ಶಮನಗೊಳಿಸಿ, ಡೆಮಾಕ್ರಟಿಕ್ ಪಕ್ಷದ ಪೈಪೋಟಿಯನ್ನು ಮೆಟ್ಟಿ ನಿಲ್ಲಲು ಟ್ರಂಪ್ ಈ ‘ನೇರ ನಗದು’ ಭರವಸೆಯನ್ನು ರಾಜಕೀಯ ಅಸ್ತ್ರವಾಗಿ ಪ್ರಯೋಗಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್