ದುಬೈ ಮೂಲದ ದಂಪತಿಗಳು ಮುಂದೆ ಹುಟ್ಟಲಿರುವ ತಮ್ಮ ಮಗುವಿನ ಲಿಂಗವನ್ನು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬಹಿರಂಗಪಡಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಅನಸ್ ಮಾರ್ವಾ ಮತ್ತು ಅಸಲಾ ಮಾಲೆಹ್ ಎಂಬ ದಂಪತಿಗಳು ಈ ಕೆಲಸ ಮಾಡಿದ್ದು, ತಮ್ಮ ಕುಟುಂಬಸ್ಥರು, ಗೆಳೆಯರು ಹಾಗೂ ಮಗಳೊಂದಿಗೆ ಬುರ್ಜ್ ಖಲೀಫಾ ಕಟ್ಟಡದ ಬಳಿ ಹಾಜರಿದ್ದರು. ಬುರ್ಜ್ ಖಲೀಫಾ ಕಟ್ಟಡದಲ್ಲಿ 10 ರ ಎಣಿಕೆ ನಂತರ, ಕಟ್ಟಡದ ಮೇಲೆ ನೀಲಿ ಬಣ್ಣದಲ್ಲಿ ದಂಪತಿಗಳ ಮುಂದಿನ ಮಗು ಗಂಡು ಎಂಬುದನ್ನು ಪ್ರದರ್ಶಿಸಲಾಯಿತು.
2000 ಇಸವಿಯ ಬಳಿಕ ಲಿಂಗ ಬಹಿರಂಗ ಪಾರ್ಟಿಗಳು ಜಗತ್ತಿನಾದ್ಯಂತ ಬಹಳ ಸಾಮಾನ್ಯವಾಗುತ್ತಿವೆ. ಈ ದಿನಗಳಲ್ಲಿ ದಂಪತಿಗಳು ತಮ್ಮ ಹುಟ್ಟಲಿರುವ ಮಗುವಿನ ಲಿಂಗವನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಬಹಿರಂಗಪಡಿಸುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ
Published On - 8:00 am, Sat, 12 September 20