ಅಮೆರಿಕ ಏರ್​ಬೇಸ್ ಮೇಲೆ ಕ್ಷಿಪಣಿ ದಾಳಿ ಬೆನ್ನಲ್ಲೇ ಇರಾಕ್​ನಲ್ಲಿ ಭೂಕಂಪ!

ಅಮೆರಿಕ ಏರ್​ಬೇಸ್ ಮೇಲೆ ಕ್ಷಿಪಣಿ ದಾಳಿ ಬೆನ್ನಲ್ಲೇ ಇರಾಕ್​ನಲ್ಲಿ ಭೂಕಂಪ!

ಟೆಹ್ರಾನ್: ಅಮೆರಿಕ ಮತ್ತು ಇರಾಕ್ ನಡುವೆ ಈಗಾಗಲೇ ಮಹಾ ಕದನವೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಇರಾನ್​ನ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೊಲೆಮಾನಿಯನ್ನು ವಾಯುದಾಳಿ ಮೂಲಕ ಅಮೆರಿಕ ಅಟ್ಟಾಡಿಸಿ ಕೊಂದಿತ್ತು. ತದನಂತರ ಇರಾನ್ ಸಹ ಅಮೆರಿಕ ವಿರುದ್ಧ ತೊಡೆತಟ್ಟಿ ಇರಾಕ್​ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು. ಇದೇ ಬೆನ್ನಲ್ಲೇ ಇಂದು ಇರಾನ್​ನ ಹಲವೆಡೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಇರಾನ್​ನ ಅಣುಸ್ಥಾವರದ ಸಮೀಪದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ಮತ್ತು 4.9ರಷ್ಟು ತೀವ್ರತೆ […]

sadhu srinath

|

Jan 09, 2020 | 12:01 PM

ಟೆಹ್ರಾನ್: ಅಮೆರಿಕ ಮತ್ತು ಇರಾಕ್ ನಡುವೆ ಈಗಾಗಲೇ ಮಹಾ ಕದನವೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಇರಾನ್​ನ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೊಲೆಮಾನಿಯನ್ನು ವಾಯುದಾಳಿ ಮೂಲಕ ಅಮೆರಿಕ ಅಟ್ಟಾಡಿಸಿ ಕೊಂದಿತ್ತು. ತದನಂತರ ಇರಾನ್ ಸಹ ಅಮೆರಿಕ ವಿರುದ್ಧ ತೊಡೆತಟ್ಟಿ ಇರಾಕ್​ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು.

ಇದೇ ಬೆನ್ನಲ್ಲೇ ಇಂದು ಇರಾನ್​ನ ಹಲವೆಡೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಇರಾನ್​ನ ಅಣುಸ್ಥಾವರದ ಸಮೀಪದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ಮತ್ತು 4.9ರಷ್ಟು ತೀವ್ರತೆ ದಾಖಲಾಗಿದೆ. ಅಮೆರಿಕ ಮತ್ತು ಇರಾನ್​ ನಡುವಿನ ಸಂಘರ್ಷದ ನಡುವೆಯೇ ಭೂಕಂಪನವಾಗಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಆದ್ರೆ ಇದು ನೈಸರ್ಗಿಕವಾಗಿ ಸಂಭವಿಸಿರುವ ಭೂಕಂಪ ಎಂದು ವರದಿಯಾಗಿದೆ.

ಬಾಗ್ದಾದ್‌ನಲ್ಲಿನ ಅಮೆರಿಕದ ಎರಡು ವಾಯುನೆಲೆಗಳ ಮೇಲೆ ಇರಾನ್‌ ನಿನ್ನೆ ಸಂಜೆ ಕ್ಷಿಪಣಿ ದಾಳಿ ನಡೆಸಿದೆ. ಏರ್​ಬೇಸ್ ಮೇಲೆ ಇರಾನ್ ದಾಳಿ ನಡೆಸಿದ ಪರಿಣಾಮ ಅಮೆರಿಕದ 80 ಸೈನಿಕರು ಮೃತಪಟ್ಟಿರುವುದಾಗಿ ಇರಾನ್ ಮಾಹಿತಿ ನೀಡಿದೆ. ಆದ್ರೆ, ದಾಳಿಯಲ್ಲಿ ತಮ್ಮ ಸೈನಿಕರು ಮೃತಪಟ್ಟಿರುವ ಬಗ್ಗೆ ಅಮೆರಿಕ ಸ್ಪಷ್ಟಪಡಿಸಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada