ಫಿಜಿ(Fiji)ಯಲ್ಲಿ ಭೂಕಂಪ (Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ. ಫಿಜಿ ದಕ್ಷಿಣ ಪೆಸಿಫಿಕ್ನಲ್ಲಿರುವ ಒಂದು ದೇಶ, ಇದು 300ಕ್ಕೂ ಹೆಚ್ಚು ದ್ವೀಪಗಳ ಸಮೂಹವಾಗಿದೆ. ಭೂಕಂಪವು ಇಂದು 10 ಗಂಟೆಗೆ ಸಂಭವಿಸಿದೆ. ಫಿಜಿಯಿಂದ 569 ಕಿ.ಮೀ ಆಳದಲ್ಲಿ ಅಪ್ಪಳಿಸಿದೆ. ಯಾವುದೇ ಸಾವು ನೋವು ಕುರಿತು ಇನ್ನೂ ವರದಿಯಾಗಿಲ್ಲ.
ಒಂದು ವಾರದೊಳಗೆ ಸಂಭವಿಸಿರುವ ಎರಡನೇ ಭೂಕಂಪ ಇದಾಗಿದೆ. ಇದಕ್ಕೂ ಮೊದಲು ಗುರುವಾರ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಮಾಹಿತಿ ನೀಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:21 am, Tue, 18 April 23