Nepal Earthquake: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೇಪಾಳದಲ್ಲಿ ಲಘು ಭೂಕಂಪ, 4.3 ತೀವ್ರತೆ ದಾಖಲು

ನೇಪಾಳದಲ್ಲಿ 4.3 ತೀವ್ರತೆಯ ಲಘು ಭೂಕಂಪ(Earthquake) ಸಂಭವಿಸಿದೆ, ಭಾನುವಾರ ರಾತ್ರಿಯೇ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರವು ಮಾಹಿತಿ ನೀಡಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಜನರು ಭಯಭೀತರಾದರು. ಹೊಸ ವರ್ಷ ಆಚರಿಸಲು ಜನರು ಅನೇಕ ಸ್ಥಳಗಳಲ್ಲಿ ಜಮಾಯಿಸಿದ್ದರು.

Nepal Earthquake: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೇಪಾಳದಲ್ಲಿ ಲಘು ಭೂಕಂಪ, 4.3 ತೀವ್ರತೆ ದಾಖಲು
ಭೂಕಂಪ
Image Credit source: Mint

Updated on: Jan 01, 2024 | 9:42 AM

ನೇಪಾಳದಲ್ಲಿ 4.3 ತೀವ್ರತೆಯ ಲಘು ಭೂಕಂಪ(Earthquake) ಸಂಭವಿಸಿದೆ, ಭಾನುವಾರ ರಾತ್ರಿಯೇ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರವು ಮಾಹಿತಿ ನೀಡಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಜನರು ಭಯಭೀತರಾದರು. ಹೊಸ ವರ್ಷ ಆಚರಿಸಲು ಜನರು ಅನೇಕ ಸ್ಥಳಗಳಲ್ಲಿ ಜಮಾಯಿಸಿದ್ದರು.

ಇದಕ್ಕೂ ಮುನ್ನ ನವೆಂಬರ್​ನಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪ ಭಾರಿ ಹಾನಿಯನ್ನುಂಟು ಮಾಡಿತ್ತು. ನವೆಂಬರ್ 3 ರಂದು ಪಶ್ಚಿಮ ನೇಪಾಳದ ಜಜರ್ಕೋಟ್​ ಹಾಗೂ ರುಕುಮ್ ಪಶ್ಚಿಮ ಜಿಲ್ಲೆಗಳಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇದರಿಂದ 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅನೇಕ ಮಂದಿ ಗಾಯಗೊಂಡಿದ್ದರು. ಮೂರು ದಿನಗಳ ನಂತರ ಅಂದರೆ ನವೆಂಬರ್ 6 ರಂದು ಮತ್ತೆ ಭೂಕಂಪ ಸಂಭವಿಸಿತ್ತು. ನವೆಂಬರ್ 23 ರಂದು ನೇಪಾಳದ ಕಠ್ಮಂಡುವಿನಲ್ಲಿ ಭೂಕಂಪ ಸಂಭವಿಸಿತ್ತು, ಅದರ ತೀವ್ರತೆ 4.6ರಷ್ಟಿತ್ತು.

ಮತ್ತಷ್ಟು ಓದಿ: Nepal Earthquake: ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ, ಸಾವಿನ ಸಂಖ್ಯೆ 129ಕ್ಕೆ ಏರಿಕೆ

22 ಜಿಲ್ಲೆಗಳು ಅಪಾಯದ ವಲಯದಲ್ಲಿವೆ
ನೇಪಾಳದಲ್ಲಿ ಕಾಲ ಕಾಲಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ, 22 ಜಿಲ್ಲೆಗಳಲ್ಲಿ ಅಪಾಯದ ವಲಯ ಎಂದು ಗುರುತಿಸಲಾಗಿದೆ. ಬಜಾಂಗ್ ಜಿಲ್ಲೆಯನ್ನು ಸಹ ಒಳಗೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ