Assam Earthquake: ಅಸ್ಸಾಂನಲ್ಲಿ 3.4 ತೀವ್ರತೆಯ ಲಘು ಭೂಕಂಪ
ಅಸ್ಸಾಂನಲ್ಲಿ ಇಂದು ಬೆಳಗಿನ ಜಾವ 3.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಅಸ್ಸಾಂನ ತೇಜ್ಪುರ್ ಜಿಲ್ಲೆಯಲ್ಲಿ ಇಂದು ಭೂಕಂಪದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ವರದಿ ಪ್ರಕಾರ ಬೆಳಗ್ಗೆ 5.53ಕ್ಕೆ ಭೂಕಂಪ ಸಂಭವಿಸಿದೆ. ಯಾವುದೇ ಆಸ್ತಿಪಾಸ್ತಿ ಅಥವಾ ಪ್ರಾಣಹಾನಿ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಭೂಕಂಪದ ಕೇಂದ್ರ ಬಿಂದು ನೆಲದ ಮೇಲ್ಮೈಯಿಂದ 20 ಕಿ.ಮೀ ಆಳದಲ್ಲಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 7 ರಂದು ಗುವಾಹಟಿಯಲ್ಲಿ ಬೆಳಗ್ಗೆ 5.42ರ ಸುಮಾರಿಗೆ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಮತ್ತಷ್ಟು ಓದಿ: Ladakh Earthquake: ಲಡಾಖ್ನಲ್ಲಿ 4.5 ತೀವ್ರತೆಯ ಭೂಕಂಪ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹಲವು ಬಾರಿ ಭೂಕಂಪಗಳ ಅನುಭವವಾಗಿದೆ. ಡಿಸೆಂಬರ್ 26 ರಂದು ಲಡಾಖ್ನಲ್ಲಿ4.5 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಭೂಕಂಪದ ಕೇಂದ್ರಬಿಂದು ಐದು ಕಿಲೋಮೀಟರ್ ಆಳದಲ್ಲಿದೆ ಎಂದು ಹೇಳಲಾಗಿದೆ. ಹಿಮಾಲಯ ಶ್ರೇಣಿಯಲ್ಲಿನ ಟೆಕ್ಟೋನಿಕ್ ಪ್ಲೇಟ್ ಅಸ್ಥಿರವಾಗಿದೆ, ಈ ಕಾರಣದಿಂದಾಗಿ, ಅಂತಹ ಭೂಕಂಪಗಳು ದೀರ್ಘಕಾಲದವರೆಗೆ ಸಂಭವಿಸುತ್ತಲೇ ಇರುತ್ತವೆ ಎಂದು ನಾವು ಐಐಟಿ ಕಾನ್ಪುರದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರೊಫೆಸರ್ ಜಾವೇದ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಲಡಾಖ್, ನೇಪಾಳ, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಸಂಭವಿಸುವ ಭೂಕಂಪಗಳ ಪರಿಣಾಮವು ಕೆಲವೊಮ್ಮೆ ದೆಹಲಿ NCR ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿಯೂ ಕಂಡುಬರುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ