ಕೊರೊನಾ ವೈರಸ್ ಭೀತಿ ನಿಧಾನವಾಗಿ ಕಡಿಮೆ ಆಗುತ್ತಿದೆ. ಅಗತ್ಯ ಕ್ರಮಗಳನ್ನು ಕೈಗೊಂಡ ಪರಿಣಾಮ, ಕೊರೊನಾ ಹರಡುವಿಕೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಅಲ್ಲದೆ, ಕೊರೊನಾಗೆ ಲಸಿಕೆ ಕೂಡ ಅನ್ವೇಷಣೆಗೊಂಡಿದ್ದು ಜನರ ಆತ್ಮಸ್ಥೈರ್ಯ ಹೆಚ್ಚಿಸಿದೆ. ಹೀಗಿರುವಾಗಲೇ, ದಕ್ಷಿಣಾ ಆಫ್ರಿಕಾದಲ್ಲಿ ಭೀಕರ ಎಬೋಲಾ ಮತ್ತೆ ಕಾಣಿಸಿಕೊಂಡಿದೆ. 7 ಎಬೋಲಾ ಪ್ರಕರಣಗಳು ಇಂದು ದೃಢವಾಗಿದೆ ಎಂದು ಗಿನಿಯಾ ಆರೋಗ್ಯ ಇಲಾಖೆ ಹೇಳಿದೆ.
ಇಂದು ಬೆಳಗ್ಗೆ, ಕೊನಾಕ್ರಿ ಪ್ರಯೋಗಾಲಯವು ಎಬೋಲಾ ವೈರಸ್ ಇರುವಿಕೆಯನ್ನು ದೃಢಪಡಿಸಿದೆ ಎಂದು ತುರ್ತು ಸಭೆಯ ನಂತರ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಮೂವರು ಮೃತಪಟ್ಟಿದ್ದು, ಇದಕ್ಕೆ ಎಬೋಲಾ ಕಾರಣ ಎಂದು ಅಧಿಕಾರಿಗಳು ಆತಂಕ ಹೊರಹಾಕಿದ್ದಾರೆ.
ಜನವರಿ ಅಂತ್ಯಕ್ಕೆ ಲಿಬೇರಿಯನ್ ಗಡಿ ಭಾಗದಲ್ಲಿರುವ ಗೌಕೆಯಲ್ಲಿ ಓರ್ವ ಮೃತಪಟ್ಟಿದ್ದ. ಈತನ ಅಂತ್ಯಕ್ರಿಯೆ ಫೆಬ್ರವರಿ 1ರಂದು ನಡೆದಿತ್ತು. ಈತನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಅನೇಕರಲ್ಲಿ ಅತಿಸಾರ, ವಾಂತಿ ಜತೆಗೆ ರಕ್ತ ಕಾರಿಕೊಳ್ಳಲು ಆರಂಭಿಸಿದ್ದರು. ಕೆಲ ದಿನ ಬಿಟ್ಟು ಜ್ವರ ಕೂಡ ಕಾಣಿಸಿಕೊಂಡಿತ್ತು. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲವರಲ್ಲಿ ಎಬೋಲಾ ವೈರಸ್ ಇರುವ ವಿಚಾರ ಬೆಳಕಿಗೆ ಬಂದಿದೆ. 7 ಪ್ರಕರಣಗಳು ದೃಢವಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಬೋಲಾ ದಕ್ಷಿಣ ಆಫ್ರಿಕಾವನ್ನು ಭೀಕರವಾಗಿ ಕಾಡಿತ್ತು. ಈ ರೋಗಕ್ಕೆ 11,360 ಜನರು ಮೃತಪಟ್ಟಿದ್ದರು. ಈಗ ಈ ವೈರಸ್ ಮತ್ತೆ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಅಲ್ಲದೆ, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚೆತ್ತುಕೊಂಡಿದ್ದು, ಸಹಾಯ ನೀಡುವ ಭರವಸೆ ನೀಡಿದೆ.
ಇದನ್ನೂ ಓದಿ: Disease X ಬರುತಿದೆ ಎಚ್ಚರವಿರಲಿ.. ಎಬೊಲಾದಷ್ಟೇ ಮಾರಣಾಂತಿಕ, ಪ್ರಸರಣದಲ್ಲಿ ಕೊರೊನಾಕ್ಕಿಂತಲೂ ವೇಗ