Disease X ಬರುತಿದೆ ಎಚ್ಚರವಿರಲಿ.. ಎಬೊಲಾದಷ್ಟೇ ಮಾರಣಾಂತಿಕ, ಪ್ರಸರಣದಲ್ಲಿ ಕೊರೊನಾಕ್ಕಿಂತಲೂ ವೇಗ
ಡಿಸೀಸ್ ಎಕ್ಸ್ನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಡೇಲಿ ಮೇಲ್ ಮಾಧ್ಯಮ ವರದಿ ಮಾಡಿದೆ. ವ್ಯಕ್ತಿಯೋರ್ವನಿಗೆ ಜ್ವರ ಮತ್ತು ರಕ್ತಸ್ರಾವ ಆಗುತ್ತಿತ್ತು. ಇದು ಎಬೋಲಾ ಲಕ್ಷಣವೇ ಆಗಿದ್ದರಿಂದ ಎಬೋಲಾ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್ ಬಂದಿದೆ.
ನವದೆಹಲಿ: ಕೊರೊನಾ ವೈರಸ್ನಿಂದ ಜಗತ್ತು ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹಲವು ಲಸಿಕೆಗಳು ಹೊರಬರುತ್ತಿದ್ದು, ತುರ್ತು ಬಳಕೆಗೆ ಆಯಾ ದೇಶಗಳ ಔಷಧ ನಿಯಂತ್ರಣಾ ಪ್ರಾಧಿಕಾರಗಳಿಂದ ಅನುಮೋದನೆಯನ್ನೂ ಪಡೆಯುತ್ತಿವೆ. ಈ ಮಧ್ಯೆ ಕೊರೊನಾ ರೂಪಾಂತರಿ ವೈರಸ್ ಕೂಡ ಲಗ್ಗೆಯಿಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಆದರೆ ಇಷ್ಟಕ್ಕೇ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಭವಿಷ್ಯದಲ್ಲಿ ಇನ್ನೂ ಮಾರಕ ವೈರಸ್ಗಳು ಮನುಕುಲಕ್ಕೆ ಕಂಟಕವಾಗಲಿರುವ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ Disease X (ಡಿಸೀಸ್ ಎಕ್ಸ್) ಎಂಬ ಮಾರಣಾಂತಿಕ ವೈರಸ್ ಶೀಘ್ರದಲ್ಲೇ ಜಗತ್ತಿಗೆ ದಾಂಗುಡಿ ಇಡಲಿದ್ದು, ಇದು ಕೊರೊನಾಕ್ಕಿಂತಲೂ ವೇಗವಾಗಿ ಪ್ರಸರಣವಾಗಲಿದೆ. ಎಬೊಲಾದಷ್ಟೇ ಮಾರಣಾಂತಿಕವಾದ ವೈರಸ್ ಎಂದು ವಿಜ್ಞಾನಿ, ವೈದ್ಯ ಪ್ರೊಫೆಸರ್ ಜೀನ್-ಜಾಕ್ವೆಸ್ ಮುಯೆಂಬೆ ಟಾಮ್‌ಫಮ್ ತಿಳಿಸಿದ್ದಾರೆ.
ಈ ಜೀನ್ ಜಾಕ್ವೆಸ್ ಬೇರೆ ಯಾರೂ ಅಲ್ಲ, 1976ರಲ್ಲಿ ಎಬೊಲಾ ವೈರಸ್ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈದ್ಯ. ಮುಂಬರುವ ದಿನಗಳಲ್ಲಿ ಮನುಕುಲ ಡಿಸೀಸ್ ಎಕ್ಸ್ ನಂತಹ ಹಲವು ಅಪಾಯಕಾರಿ ವೈರಸ್ಗಳನ್ನು ಎದುರಿಸಬೇಕಾಗುತ್ತದೆ. ಸದ್ಯ Disease X ಎಂಬುದು ಒಂದು ಕಾಲ್ಪನಿಕ ರೋಗವಾಗಿರಬಹುದು. ಆದರೆ ಒಮ್ಮೆ ಇದು ಕಾಣಿಸಿಕೊಂಡರೆ ಜಗತ್ತಿಗೇ ಮಾರಕವಾಗಲಿದೆ. ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಿಂದ ಹೊಸ ಮತ್ತು ಮಾರಣಾಂತಿಕ ವೈರಸ್ಗಳು ಉಗಮಗೊಳ್ಳುತ್ತಿವೆ ಎಂದು ಜಾಕ್ವೆಸ್ ಹೇಳಿದ್ದಾರೆ.
ಮೊದಲ ಪ್ರಕರಣ ಡಿಸೀಸ್ ಎಕ್ಸ್ನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಡೇಲಿ ಮೇಲ್ ಮಾಧ್ಯಮ ವರದಿ ಮಾಡಿದೆ. ವ್ಯಕ್ತಿಯೋರ್ವನಿಗೆ ಜ್ವರ ಮತ್ತು ರಕ್ತಸ್ರಾವ ಆಗುತ್ತಿತ್ತು. ಇದು ಎಬೋಲಾ ಲಕ್ಷಣವೇ ಆಗಿದ್ದರಿಂದ ಎಬೋಲಾ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಇದನ್ನು ಡಿಸೀಸ್ ಎಕ್ಸ್ ಎಂದು ಗುರುತಿಸಿರುವ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ರೋಗಕ್ಕಿಂತಲೂ ಭೀಕರ, ಅಪಾಯಕಾರಿ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?