ಲಾಕ್​ಡೌನ್​ ನಿರ್ಧಾರಕ್ಕೆ ದಾಖಲೆಗಳ ಸಮೇತ ಕಾರಣ ನೀಡಿದ ಬೋರಿಸ್​ ಜಾನ್ಸನ್​

ಕಳೆದ ಒಂದು ವಾರದ ಅವಧಿಯಲ್ಲಿ ಬ್ರಿಟನ್​ ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತರಾಗುತ್ತಿರುವವರ ಸಂಖ್ಯೆ ಶೇ.20ರಷ್ಟು ಏರಿಕೆ ಕಂಡಿದೆ. ಕೊರೊನಾ ಮೊದಲ ಅಲೆ ಉತ್ತುಂಗಕ್ಕೇರಿದ್ದಾಗ ದಾಖಲಾಗುತ್ತಿದ್ದ ಸಾವಿನ ಪ್ರಮಾಣ ಮತ್ತೆ ಮರುಕಳಿಸುತ್ತಿದ್ದು, ಪ್ರತಿನಿತ್ಯ ಸುಮಾರು 1 ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ.

ಲಾಕ್​ಡೌನ್​ ನಿರ್ಧಾರಕ್ಕೆ ದಾಖಲೆಗಳ ಸಮೇತ ಕಾರಣ ನೀಡಿದ ಬೋರಿಸ್​ ಜಾನ್ಸನ್​
ಬ್ರಿಟನ್​​ ಪ್ರಧಾನಿ ಬೋರಿಸ್​ ಜಾನ್ಸನ್​
Follow us
Skanda
| Updated By: ಸಾಧು ಶ್ರೀನಾಥ್​

Updated on: Jan 05, 2021 | 1:10 PM

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಮೂರನೇ ಹಂತದ ಲಾಕ್​ಡೌನ್​ ಘೋಷಿಸಿದ್ದಾರೆ. ವೈಜ್ಞಾನಿಕ ಕಾರಣ ಮತ್ತು ಸಂಗ್ರಹಿಸಿದ ದತ್ತಾಂಶಗಳನ್ನು ಮುಂದಿಟ್ಟುಕೊಂಡು ಮಾತು ಆರಂಭಿಸಿದ ಅಲ್ಲಿನ ಪ್ರಧಾನಿ ತಮ್ಮ ನಿಲುವಿನ ಹಿಂದಿರುವ ಉದ್ದೇಶವನ್ನು ಲಾಕ್​ಡೌನ್​ ಘೋಷಿಸುವ ವೇಳೆಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ಬ್ರಿಟನ್​ ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತರಾಗುತ್ತಿರುವವರ ಸಂಖ್ಯೆ ಶೇ.20ರಷ್ಟು ಏರಿಕೆ ಕಂಡಿದೆ. ಕೊರೊನಾ ಮೊದಲ ಅಲೆ ಉತ್ತುಂಗಕ್ಕೇರಿದ್ದಾಗ ದಾಖಲಾಗುತ್ತಿದ್ದ ಸಾವಿನ ಪ್ರಮಾಣ ಮತ್ತೆ ಮರುಕಳಿಸುತ್ತಿದ್ದು, ಪ್ರತಿನಿತ್ಯ ಸುಮಾರು 1 ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ. ಇದು ನಮ್ಮನ್ನು ಮತ್ತೆ ಅಪಾಯದಂಚಿಗೆ ದೂಡುತ್ತಿದೆ. ಆದ್ದರಿಂದ ಮೂರನೇ ಹಂತದ ಲಾಕ್​ಡೌನ್​ ಸದ್ಯದ ಅನಿವಾರ್ಯತೆ ಎಂದು ಬೋರಿಸ್​ ಜಾನ್ಸನ್​ ದಾಖಲೆಗಳ ಸಮೇತ ವಿವರಣೆ ನೀಡಿದ್ದಾರೆ.

ಬ್ರಿಟನ್​ನ ಆಸ್ಪತ್ರೆಗಳು ಕೊರೊನಾ ಆರಂಭವಾದ ಮೇಲೆ ಇದೇ ಮೊದಲ ಬಾರಿಗೆ ಅತಿಹೆಚ್ಚು ಒತ್ತಡಕ್ಕೆ ಸಿಲುಕಿವೆ. ಈಗ ಆಸ್ಪತ್ರೆಗೆ ತೆರಳುತ್ತಿರುವ ಸೋಂಕಿತರ ಸಂಖ್ಯೆ ಏಪ್ರಿಲ್​ ತಿಂಗಳ ಅಂಕಿ ಅಂಶಗಳನ್ನೂ ಮೀರಿಸುವಂತಿದೆ. ಮೊದಲ ಅಲೆ ಮುಗಿಯುವಾಗ ದಾಖಲಾಗುತ್ತಿದ್ದ ಸೋಂಕಿತರಿಗಿಂತ ಶೇ.40ರಷ್ಟು ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

ಡಿಸೆಂಬರ್​ 29ರಂದು ಸುಮಾರು 80 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಇದು ದೇಶದ ಮಟ್ಟಿಗೆ ಹೊಸ ದಾಖಲೆಯಾಗಿದೆ. ಇದೇ ರೀತಿ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಹೋದರೆ ರಾಷ್ಟ್ರೀಯ ಆರೋಗ್ಯ ಸೇವಾ ಸಮಿತಿಯೂ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಎಂದು ತಿಳಿಸಿದೆ. ಆದ್ದರಿಂದ ಸೋಂಕು ಹರಡುವಿಕೆ ತಡೆಗಟ್ಟಲು ನಾವು ಲಾಕ್​ಡೌನ್​ ನಿಯಮಗಳನ್ನು ಪಾಲಿಸಲೇಬೇಕು ಎಂದು ಮನವಿ ಮಾಡಿರುವ ಬೋರಿಸ್​ ವೈಜ್ಞಾನಿಕ ದಾಖಲೆ ಮತ್ತು ದತ್ತಾಂಶಗಳನ್ನಿಟ್ಟುಕೊಂಡು ಗಂಭೀರತೆಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

ವೇಗ ಪಡೆದುಕೊಂಡ ರೂಪಾಂತರ ಕೊರೊನಾ: ಬ್ರಿಟನ್​ನಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸಿದ ಪ್ರಧಾನಿ ಬೋರಿಸ್ ಜಾನ್ಸನ್‌

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು