Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಡಿಯೋ ಟೇಪ್​ ಲೀಕ್​: ಬಯಲಾಯ್ತು ಡೊನಾಲ್ಡ್ ಟ್ರಂಪ್ ಮೋಸ

ಅಮೆರಿಕದ ಸ್ಥಳೀಯ ಮಾಧ್ಯಮಗಳು ಟ್ರಂಪ್ ಜಾರ್ಜಿಯಾದ ಚುನಾವಣಾ ಅಧಿಕಾರಿಗಳ ಜೊತೆ ಮಾತನಾಡಿದ​ ಆಡಿಯೋ ಒಂದನ್ನು ಲೀಕ್​ ಮಾಡಿದೆ. ಇದರಲ್ಲಿ ಚುನಾವಣಾ ಅಧಿಕಾರಿಗಳ ಬಳಿ ಸಹಾಯ ಮಾಡುವಂತೆ ಟ್ರಂಪ್​ ಒತ್ತಡ ಹಾಕಿದ್ದಾರೆ.

ಆಡಿಯೋ ಟೇಪ್​ ಲೀಕ್​: ಬಯಲಾಯ್ತು ಡೊನಾಲ್ಡ್ ಟ್ರಂಪ್ ಮೋಸ
ಡೊನಾಲ್ಡ್​ ಟ್ರಂಪ್ (ಸಂಗ್ರಹ ಚಿತ್ರ)
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Jan 04, 2021 | 3:27 PM

ವಾಷಿಂಗ್ಟನ್​: ಡೊನಾಲ್ಡ್ ಟ್ರಂಪ್​​ ಅವರು ಇನ್ನು ವೈಟ್​ಹೌಸ್​ನಲ್ಲಿ ಉಳಿಯುವುದು ಕೆಲವೇ ದಿನ ಮಾತ್ರ. ಅಧ್ಯಕ್ಷರಾಗಿ ಟ್ರಂಪ್​​ ಕೊನೆಯ ದಿನಗಳಲ್ಲೂ ಸಾಕಷ್ಟು ಹಗರಣಗಳು ಹೊರ ಬೀಳುತ್ತಿವೆ. ಈಗ ಟ್ರಂಪ್​ ಅವರ ಹೊಸ ಆಡಿಯೋ ಟೇಪ್​ ಒಂದು ಲೀಕ್​ ಆಗಿದ್ದು, ಮತ ಪಡೆಯಲು ಚುನಾವಣಾ ಅಧಿಕಾರಿಗಳಿಗೆ ಒತ್ತಡ ಹೇರಿರುವುದು ಕಂಡು ಬಂದಿದೆ.

ಅಮೆರಿಕದ ಸ್ಥಳೀಯ ಮಾಧ್ಯಮಗಳು ಟ್ರಂಪ್ ಜಾರ್ಜಿಯಾದ ಚುನಾವಣಾ ಅಧಿಕಾರಿಗಳ ಜೊತೆ ಮಾತನಾಡಿದ​ ಆಡಿಯೋ ಒಂದನ್ನು ಲೀಕ್​ ಮಾಡಿದೆ. ಇದರಲ್ಲಿ ಚುನಾವಣಾ ಅಧಿಕಾರಿಗಳ ಬಳಿ ಸಹಾಯ ಮಾಡುವಂತೆ ಟ್ರಂಪ್​ ಒತ್ತಡ ಹಾಕಿದ್ದಾರೆ.

ನನ್ನನ್ನು ಗೆಲ್ಲಿಸಲು ಹೆಚ್ಚೆಚ್ಚು ಮತಗಳನ್ನು ಹುಡುಕಿ ಎಂದು ಚುನಾವಣಾ ಅಧಿಕಾರಿಗಳಿಗೆ ಟ್ರಂಪ್​ ಒತ್ತಡ ಹಾಕಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ. ಸದ್ಯ, ಈ ಆಡಿಯೋ ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಆಡಿಯೋ ಹೊರ ಬರುತ್ತಿದ್ದಂತೆ ಡೊನಾಲ್ಡ್​​ ಟ್ರಂಪ್​ ಟ್ವೀಟ್​ ಮಾಡಿದ್ದು, ವೋಟರ್​ ಸ್ಕ್ಯಾಮ್​ ಬಗ್ಗೆ ನಾನು ರಾಜ್ಯ ಕಾರ್ಯದರ್ಶಿ ಬ್ರಾಡ್ ರಾಫೆನ್ಸ್‌ಪರ್ಗರ್ ಜೊತೆ ಮಾತನಾಡಲು ಪ್ರಯತ್ನಿಸಿದ್ದೆ. ಆದರೆ, ಈ ಬಗ್ಗೆ ಅವರು ಉತ್ತರಿಸಲು ನಿರಾಕರಿಸಿದ್ದಾರೆ ಎಂದಿದ್ದಾರೆ.

ಇದಕ್ಕೆ ಜಾರ್ಜಿಯಾ ಚುನಾವಣಾ ಅಧಿಕಾರಿ ಉತ್ತರ ನೀಡಿದ್ದು, ಇದು ಸಂಪೂರ್ಣ ಸುಳ್ಳು. ಈ ಆಡಿಯೋದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.

ಬಿಡೆನ್ ಪರ ಎಫ್​ಬಿಐ ಶಾಮೀಲು: ಡೊನಾಲ್ಡ್​ ಟ್ರಂಪ್ ಹೊಸ ಆರೋಪ

ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ