ಚೀನಾದ ಪ್ರಯೋಗಾಲಯದಿಂದ ಕೊರೊನಾ ವೈರಾಣು ಉಗಮ ಸಾಧ್ಯತೆ ಹೆಚ್ಚು ಎಂದ ಅಮೆರಿಕಾದ ಹಿರಿಯ ಅಧಿಕಾರಿ
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ವುಹಾನ್ ಮಾರುಕಟ್ಟೆಯಿಂದ 11 ಮೈಲುಗಳಷ್ಟು ದೂರದಲ್ಲಿದೆ. ಕೊರೊನಾ ವೈರಾಣು ಉಗಮಕ್ಕೆ ವುಹಾನ್ನ ಪ್ರಯೋಗಾಲಯ ಮೂಲ ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪೊಟ್ಟಿಂಗರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್: ಕೊವಿಡ್-19ಗೆ ಕಾರಣವಾದ ಕೊರೊನಾ ವೈರಸ್ ಮೂಲದ ಬಗ್ಗೆ ಇರುವ ಸಿದ್ಧಾಂತಗಳಲ್ಲಿ, ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಿಂದ ಬಂದಿದೆ ಎಂಬ ವಾದ ಹೆಚ್ಚು ಸೂಕ್ತವಾಗಿದೆ ಎಂದು ಅಮೆರಿಕಾದ ಹಿರಿಯ ಸರ್ಕಾರಿ ಅಧಿಕಾರಿ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ, ಡೊನಾಲ್ಡ್ ಟ್ರಂಪ್ನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಮಾಥ್ಯೂ ಪೊಟ್ಟಿಂಗರ್ ಈ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಚೀನಾದ ವುಹಾನ್ ಪ್ರಾಣಿ ಮಾರುಕಟ್ಟೆಯಲ್ಲಿ ಉಗಮವಾಗಿದೆ ಎಂಬ ವಾದವನ್ನು ಚೀನಾದ ನಾಯಕರೂ ಸುಳ್ಳು ಎನ್ನುತ್ತಿದ್ದಾರೆ. ಆ ಮೂಲಕ ಕೊರೊನಾ ಪ್ರಯೋಗಾಲಯದಿಂದ ಬಂದಿದೆ ಎಂಬ ವಾದವನ್ನು ಚೀನಾ ನಾಯಕರು ಒಪ್ಪುತ್ತಿದ್ದಾರೆ ಎಂದು ಚೀನಾ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ವುಹಾನ್ ಮಾರುಕಟ್ಟೆಯಿಂದ 11 ಮೈಲುಗಳಷ್ಟು ದೂರದಲ್ಲಿದೆ. ಕೊರೊನಾ ವೈರಾಣು ಉಗಮಕ್ಕೆ ವುಹಾನ್ನ ಪ್ರಯೋಗಾಲಯ ಮೂಲ ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪೊಟ್ಟಿಂಗರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ರೋಗಕಾರಕ ವೈರಾಣು ಸೋರಿಕೆಯಾಗಿ ಅಥವಾ ಆಕಸ್ಮಿಕವಾಗಿ ಪ್ರಯೋಗಾಲಯದಿಂದ ಹೊರಬಂದಿರಬಹುದು ಎಂದು ಅವರು ಹೇಳಿದ್ದಾರೆ.
ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನಿರ್ಧಾರ ಮರುಪರಿಶೀಲಿಸಲು AIDAN ಆಗ್ರಹ
Published On - 4:29 pm, Sun, 3 January 21