ಪ್ರೀತಿಯ ತುತ್ತತುದಿಯೇರಿ ಪರ್ವತದ ತುದಿಯಲ್ಲಿ ಪ್ರಪೋಸ್ ಮಾಡಿದ ಯುವಕ: ಕುಣಿದು ಕುಪ್ಪಳಿಸಿದ ಯುವತಿ ಬಿದ್ದಿದ್ದು ಮಾತ್ರ..!
ಈ ದುರ್ಘಟನೆ ನಡೆದಿದ್ದು ಆಸ್ಟ್ರಿಯಾದ ಕ್ಯಾರಿಂಥಿಯಾದಲ್ಲಿ. ಅದು ಕ್ರಿಸ್ಮಸ್ ಸಮಯ. ಈ ವೇಳೆ, ಇಬ್ಬರೂ ಕ್ಯಾರಿಂಥಿಯಾದ ಫಾಲ್ಕರ್ಟ್ ಪರ್ವತ ಏರಿದ್ದಾರೆ. ಈ ವೇಳೆ ಯುವಕ ಪ್ರೀತಿಸಿದಾಕೆಗೆ ಉಂಗುರ ನೀಡಿ ಪ್ರಪೋಸ್ ಮಾಡಿದ್ದಾನೆ. ಈ ವೇಳೆ ಎಡವಟ್ಟು ಸಂಭವಿಸಿದೆ.
ಪ್ರೀತಿಸಿದ ಹುಡುಗಿಯನ್ನು ಬೆಟ್ಟದ ತುದಿಗೆ ಕರೆದೊಯ್ಯಬೇಕು. ಪ್ರಕೃತಿ ಮಧ್ಯೆ ಅವಳೆದುರು ಮಂಡಿ ಊರಿ, ರಿಂಗ್ ಕೊಟ್ಟು ಪ್ರಪೋಸ್ ಮಾಡಬೇಕು ಎನ್ನುವುದು ಅನೇಕ ಹುಡುಗರ ಕನಸು. ಆ ಯುವಕನ ಕನಸು ಕೂಡ ಇದೇ ಆಗಿತ್ತು. ಕನಸನ್ನು ನನಸು ಮಾಡುವ ಉದ್ದೇಶದಿಂದಲೇ ಪ್ರೀತಿಸಿದಾಕೆಯನ್ನು ಪರ್ವತದ ತುತ್ತ ತುದಿಗೆ ಕರೆದುಕೊಂಡು ಹೋಗಿ ಪ್ರಪೋಸ್ ಮಾಡಿದ್ದ. ಆಕೆ ಪ್ರೀತಿಗೆ ಸಮ್ಮಿಸಿದ್ದಾಳೆ ಕೂಡ. ಹೀಗಿರುವಾಗಲೇ ಆಕೆ ಬೆಟ್ಟದಿಂದ ಜಾರಿ ಬಿದ್ದಿದ್ದಾಳೆ.
ಈ ದುರ್ಘಟನೆ ನಡೆದಿದ್ದು ಆಸ್ಟ್ರಿಯಾದ ಕ್ಯಾರಿಂಥಿಯಾದಲ್ಲಿ. ಅದು ಕ್ರಿಸ್ಮಸ್ ಸಮಯ. ಈ ವೇಳೆ, ಇಬ್ಬರೂ ಕ್ಯಾರಿಂಥಿಯಾದ ಫಾಲ್ಕರ್ಟ್ ಪರ್ವತ ಏರಿದ್ದಾರೆ. ಈ ವೇಳೆ ಯುವಕ ಪ್ರೀತಿಸಿದಾಕೆಗೆ ಉಂಗುರ ನೀಡಿ ಪ್ರಪೋಸ್ ಮಾಡಿದ್ದಾನೆ. ಅಚ್ಚರಿಗೊಂಡ ಆಕೆ, ಕುಣಿದು ಕುಪ್ಪಳಿಸಿದ್ದಾಳೆ. ಈ ಸಂಭ್ರಮವೇ ಆಕೆಗೆ ಮುಳುವಾಗಿದೆ.
ಕುಣಿಯುತ್ತಿರುವಾಗಲೇ ಆಕೆಯ ಕಾಲು ಜಾರಿದೆ. 650 ಅಡಿ ಕಣಿವೆಯಲ್ಲಿ ಯುವತಿ ಜಾರಿ ಬಿದ್ದಿದ್ದಾಳೆ. ಪ್ರೀತಿಸಿದಾಕೆ ಕಣ್ಣೆದುರೇ ಬೆಟ್ಟದಿಂದ ಬೀಳುತ್ತಿರುವದನ್ನು ಕಂಡು ಈಕೆಯನ್ನು ರಕ್ಷಿಸಲು ಮುಂದಾದ ಹುಡುಗ ಕೂಡ ಜಾರಿ ಬಿದ್ದಿದ್ದಾನೆ. ಬೆಟ್ಟದ ಕೆಳಗೆ ಹಿಮ ಇದ್ದಿದ್ದರಿಂದ ಆಕೆಗೆ ಏನು ತೊಂದರೆ ಉಂಟಾಗಿಲ್ಲ. ಇನ್ನು, ಯುವಕ ಕೂಡ ಜಾರಿ ಬಿದ್ದಿದ್ದು ಆತನೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆತನ ಪ್ರೀತಿಯೇ ನನ್ನನ್ನು ಉಳಿಸಿದೆ ಎಂದ ಯುವತಿ! ಯುವತಿ ಕೆಳಕ್ಕೆ ಬೀಳುತ್ತಿದ್ದಂತೆ ಪ್ರಜ್ಞೆ ತಪ್ಪಿದ್ದಾಳೆ. ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಆತನ ಪ್ರೀತಿಯೇ ನನ್ನನ್ನು ಉಳಿಸಿದೆ ಎಂದು ಯುವತಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾಳೆ. ಇನ್ನು ಕೊರಕಲು ಮಧ್ಯೆ ಸಿಕ್ಕಿ ಬಿದ್ದ ಯುವಕನನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.
ಪ್ರೀತಿಸಿ ಮದುವೆಯಾದವರನ್ನು ಕಾಡುತ್ತಿದೆ ಜಾತಿ ಭೂತ; ಹುಡುಗಿ ಮನೆಯವರ ಕಿರುಕುಳಕ್ಕೆ ದಂಪತಿ ಕಂಗಾಲು