ಈ ವಾರ ಸ್ಯಾನ್ ಫ್ರಾನ್ಸಿಸ್ಕೋದ ಕೊಲ್ಲಿ ಪ್ರದೇಶದಲ್ಲಿ ಬಳಕೆಯಲ್ಲಿರದಅನಿಲ ಕೇಂದ್ರದ ಹೊರಗೆ ಒಂದು ಸಾವಿರಕ್ಕೂ ಹೆಚ್ಚು ಜನರು ಕ್ಯೂನಲ್ಲಿ ನಿಂತಿದ್ದಾರೆ. ಅವರೆಲ್ಲರಕ ಇದು ಅತ್ಯಂತ ಅಪರೂಪದ ಮತ್ತು ಸೂಕ್ತವಾಗಿ ಹೆಸರಿಸಲಾದ ‘ಕಾರ್ಪ್ಸ್ ಫ್ಲವರ್’ (ಶವದ ಹೂವು) ನೋಡಲು ಕಾತರದಿಂದ ನಿಂತಿದ್ದರು. ಈ ಅತೀ ಕೆಟ್ಟ ವಾಸನೆಯಿಂದ ಕೂಡಿರುವ ಹೂವಿನ ವಾಸನೆ ಎಷ್ಟು ಕೆಟ್ಟದು ಎಂದರೆ ಕೊಳೆತ ಮಾಂಸಕ್ಕೆ ಇದನ್ನು ಹೋಲಿಸಲಾಗುತ್ತದೆ. ಅದೇ ಸಮಯದಲ್ಲಿ ಫಿಲಡೆಲ್ಫಿಯಾದ ಟೆಂಪಲ್ ಯೂನಿವರ್ಸಿಟಿಯ ಹಸಿರುಮನೆ ಯಲ್ಲಿ ಇದೇ ರೀತಿಯ ದೃಶ್ಯವನ್ನು ಪ್ರದರ್ಶಿಸಲಾಯಿತು, ಅಲ್ಲಿ ಅಳಿವಿನಂಚಿನಲ್ಲಿರುವ ಎರಡು ಹೂಬಿಡುವ ಸಸ್ಯಗಳನ್ನು ಕ್ಯಾಂಪಸ್‌ಗೆ ಕರೆತಂದ ನಂತರ ಮೊದಲ ಬಾರಿಗೆ ಅರಳುತ್ತಿವೆ.
ಕಾರ್ಪ್ಸ್ ಫ್ಲವರ್ ಎಂದು ಕರೆಯಲ್ಪಡುಡುವ ಈ ಹೂವಿನ ವೈಜ್ಞಾನಿಕ ಹೆಸರು ಅಮೊರ್ಫೊಫಾಲಸ್ ಟೈಟಾನಮ್ (Amorphophallus titanium) ಎಂದೂ ಕರೆಯುತ್ತಾರೆ. ಅತೀ ಅಪರೂಪದ ಸಸ್ಯವಾಗಿರುವ ಇದು ಪ್ರತಿ ಏಳು-ಹತ್ತು ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆ ಎಂದು ಹೇಳಲಾಗುತ್ತಿದೆ. ಜಗತ್ತಿನಲ್ಲಿರುವ ಅತೀ ದೊಡ್ಡ ಹೂ ಇದು ಎಂದು ಹೇಳಲಾಗುತ್ತಿದೆ. ಇಂಡೋನೇಷ್ಯಾ ಮೂಲದ ಸಸ್ಯ ಇದಾಗಿದ್ದರೂ, ಅದರ ಸಸಿಗಳನ್ನು ಹಲವಾರು ವರ್ಷಗಳಿಂದ ಪ್ರಾಣಿಸಂಗ್ರಹಾಲಯಗಳು, ಬೊಟಾನಿಕಲ್ ಗಾರ್ಡನ್‌ಗಳು ಮತ್ತು ಹಸಿರುಮನೆಗಳಲ್ಲಿ ಬೆಳೆಸಲಾಗುತ್ತದೆ.
ಹಾಗಾದರೆ, ‘ಕಾರ್ಪ್ಸ್ ಫ್ಲವರ್’ ಎಂದರೇನು?
‘ಕಾರ್ಪ್ಸ್ ಫ್ಲವರ್ ಒಂದು ಹೂಬಿಡುವ ಸಸ್ಯವಾಗಿದ್ದು, ಇದು ಇಂಡೋನೇಷ್ಯಾದ ಸುಮಾತ್ರಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ಅಪರೂಪದ ಈ ಸಸ್ಯದ ವೈಜ್ಞಾನಿಕ ಹೆಸರು, ಅಮೊರ್ಫಾಫಲ್ಲಸ್ ಟೈಟಾನಮ್, ಅಕ್ಷರಶಃ ದೈತ್ಯ ಸಸ್ಯ ಇದಾಗಿದ್ದು, ಗಾತ್ರದಿಂದಾಗಿ ಇದನ್ನು misshapen phallus ಎಂದು ಹೇಳಲಾಗಿದೆ.
ಸುಮಾರು ಒಂದು ದಶಕದಲ್ಲಿ, ‘ಕಾರ್ಪ್ಸ್ ಫ್ಲವರ್’ 10 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಹುದು ಮತ್ತು ಅದರ ಎರಡು ಪ್ರಮುಖ ಅಂಶಗಳೆಂದರೆ – ಆಳವಾದ ಕೆಂಪು ಸ್ಕರ್ಟ್ ತರಹದ ದಳವನ್ನು ಸ್ಪ್ಯಾಥೆ ಎಂದು ಕರೆಯಲಾಗುತ್ತದೆ. ಹಳದಿ ರಾಡ್ ನಂತಿರುವ ಭಾಗವನ್ನು ‘ಸ್ಪ್ಯಾಡಿಕ್ಸ್’ ಅಂತಾರೆ. ಸಸ್ಯದ ಮತ್ತೊಂದು ನಿರ್ಣಾಯಕ ಅಂಶವೆಂದರೆ ‘ಕಾರ್ಮ್’, ತಿರುಳಿರುವ ಸಸ್ಯ ಕಾಂಡವು ಮಣ್ಣಿನಡಿಯಲ್ಲಿ ಗೆಡ್ಡೆಯಂತಿರುತ್ತದೆ , ಇದು ಈ ಸಸ್ಯದ ಶಕ್ತಿಯನ್ನು ಸಂಗ್ರಹಿಸುವ ಶೇಖರಣಾ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಅಪೂರ್ವ ಸಸ್ಯವು ಅತಿದೊಡ್ಡ ಕಾರ್ಮ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಂದರೆ ಇವು ಕೆಲವೊಮ್ಮೆ 100 ಕಿ.ಗ್ರಾಂ ತೂಕವಿರುತ್ತದೆ.
ಸಣ್ಣ ಗಂಡು ಮತ್ತು ಹೆಣ್ಣು ಹೂವುಗಳು ಸ್ಪ್ಯಾಡಿಕ್ಸ್‌ನ ಬುಡದ ಕಡೆಗೆ ಬೆಳೆಯುತ್ತವೆ, ಇದು ಪರಾಗಸ್ಪರ್ಶವಾಗಿದ್ದರೆ, ಸುಟ್ಟ ಕಿತ್ತಳೆ ಬಣ್ಣವಿರುವ ಬೀಜಗಳು ದೊಡ್ಡ ತಲೆಯಾಗಿ ಬೆಳೆಯುತ್ತದೆ. ಕಾರ್ಪ್ಸ್ ಹೂವು ವಿಶ್ವದ ಅತಿದೊಡ್ಡ ‘unbranched inflorescence’ ಅಥವಾ ಹೂಗಳ ಸಮೂಹವನ್ನು ಹೊಂದಿರುವ ಕಾಂಡ ಎಂದು ತಿಳಿದುಬಂದಿದೆ. ಇದು ಸುಮಾರು ಮೂರು-ನಾಲ್ಕು ದಶಕಗಳ ಜೀವಿತಾವಧಿಯನ್ನು ಹೊಂದಿದೆ.
ಅದರ ರೂಪವನ್ನು ಹೊರತು ಪಡಿಸಿದರೆ ಈ ಹೂವು ಅದರ ದುರ್ವಾಸನೆಗೆ ಹೆಸರುವಾಸಿಯಾಗಿದೆ, ಇದು ಕೊಳೆಯುತ್ತಿರುವ ಮಾಂಸ ಅಥವಾ ಕೊಳೆಯುತ್ತಿರುವ ಶವವನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಸಸ್ಯವು ಅರಳಿದಾಗ ಮಾತ್ರ ವಿಶಿಷ್ಟವಾದ ವಾಸನೆಯನ್ನು ಹೊರಸೂಸುತ್ತದೆ, ಇದು ಪ್ರತಿ 10 ವರ್ಷಗಳಿಗೊಮ್ಮೆ ಅಥವಾ ಸ್ವಲ್ಪ ಸಮಯದವರೆಗೆ ಸಂಭವಿಸುತ್ತದೆ.
ದುರ್ವಾಸನೆಯ ಹಿಂದಿರುವ ಕಾರಣ ಏನು?
ಕಾರ್ಪ್ಸ್ ಫ್ಲವರ್ ಅದರ ವಿಶಿಷ್ಟ ವಾಸನೆಯನ್ನು ಹೊಂದಿದೆ. ಇದನ್ನು ಕ್ಯಾರಿಯನ್ ಹೂ, ಅಥವಾ ಕಾಡಿನಲ್ಲಿ ಪರಾಗಸ್ಪರ್ಶ ಮಾಡುವ ಕೀಟಗಳಾದ ಸ್ಕ್ಯಾವೆಂಜಿಂಗ್ ನೊಣಗಳು ಮತ್ತು ಜೀರುಂಡೆಗಳನ್ನು ಆಕರ್ಷಿಸುವ ಸಲುವಾಗಿ ತೀವ್ರವಾದ ವಾಸನೆಯನ್ನು ಹೊರಸೂಸುವ ಹೂ ಎಂದೂ ಕರೆಯುತ್ತಾರೆ.
ಬಯೋಸೈನ್ಸ್, ಬಯೋಟೆಕ್ನಾಲಜಿ ಮತ್ತು ಬಯೋಕೆಮಿಸ್ಟ್ರಿ ಜರ್ನಲ್‌ನಲ್ಲಿ 2010 ರಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಈ ಹೂವಿನ ವಾಸನೆಗೆ ಡೈಮಿಥೈಲ್ ಟ್ರೈಸಲ್ಫೈಡ್ (ಕ್ಯಾನ್ಸರ್ ಗಾಯಗಳು, ಸೂಕ್ಷ್ಮಾಣುಜೀವಿಗಳು ಮತ್ತು ಕೆಲವು ತರಕಾರಿಗಳಿಂದ ಹೊರಸೂಸಲ್ಪಡುವ ವಸ್ತು) ಕಾರಣವಾಗದೆ. ಈದುರ್ವಾಸನೆಯು ಡೈಮಿಥೈಲ್ ಡೈಸಲ್ಫೈಡ್ ಮತ್ತು ಮೀಥೈಲ್ ಥಿಯೋಲಾಸೆಟೇಟ್ ನಂತಹ ರಾಸಾಯನಿಕಗಳಿಂದ ಕೂಡಿದೆ.ಇದು ಬೆಳ್ಳುಳ್ಳಿ ಮತ್ತು ಚೀಸ್ ತರಹದ ವಾಸನೆಗೆ ಕಾರಣವಾಗಿದೆ, ಜೊತೆಗೆ ಐಸೊವಾಲೆರಿಕ್ ಆಮ್ಲವು ಹೂವಿಗೆ ಬೆವರಿನಂತಹ ವಾಸನೆಯನ್ನು ನೀಡುತ್ತದೆ. ಸಸ್ಯದ ಹೂವುಗಳಿಂದ ಕೀಟಗಳು ಪರಾಗಸ್ಪರ್ಶ ಮಾಡಲಾಗುತ್ತದೆ. ಕೀಟಗಳನ್ನು ಆಕರ್ಷಿಸಲು ಈ ಸಸ್ಯ ವಾಸನೆಯನ್ನು ಹೊರಸೂಸುತ್ತದೆ.
ಅದು ಏಕೆ ಅಪರೂಪ?
ಇಂಡೋನೇಷ್ಯಾದ ಈ ಹೂವನ್ನು ಪ್ರಪಂಚದಾದ್ಯಂತ ಬೆಳೆಸಲಾಗುತ್ತಿದ್ದು ಅರಣ್ಯನಾಶದಿಂದಾಗಿ ಸಸ್ಯಗಳ ಸಂಖ್ಯೆಯು ಸುಮಾತ್ರಾದಲ್ಲಿ ಮಾತ್ರ ಕ್ಷೀಣಿಸುತ್ತಿದೆ. ಇದನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) 2018 ರಲ್ಲಿ ಅಳಿವಿನಂಚಿನಲ್ಲಿರುವ ಸಸ್ಯವೆಂದು ಪಟ್ಟಿಮಾಡಿದೆ.
ಕಾರ್ಪ್ಸ್ ಹೂವನ್ನು ನೈಸರ್ಗಿಕ ಆವಾಸಸ್ಥಾನದ ಹೊರಗೆ ಸಂರಕ್ಷಿಸುವುದು ಸುಲಭವಲ್ಲ. ಇದು ಬೆಳೆಯಲು ನಿರ್ದಿಷ್ಟ ಶಾಖ ಮತ್ತು ತೇವಾಂಶದ ಅಗತ್ಯವಿದೆ. ಇಂದು ಕೆಲವೇ ಮಾದರಿಗಳು ಅಸ್ತಿತ್ವದಲ್ಲಿವೆ ಎಂಬ ಅಂಶವು ಆರೋಗ್ಯಕರ ಈ ಹೂವಿನ ಸಸ್ಯವನ್ನು ಬೆಳೆಸಲು ಬೇಕಾದ ಆನುವಂಶಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಆನುವಂಶಿಕ ವೈವಿಧ್ಯತೆಯ ಕೊರತೆಯು ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ. ಇದರರ್ಥ ನಿಕಟ ಸಂಬಂಧಿತ ಸಸ್ಯಗಳನ್ನು ಪರಸ್ಪರ ಬೆಳೆಸಲಾಗುತ್ತದೆ. ತೋಟಗಾರಿಕೆ ತಜ್ಞರ ಪ್ರಕಾರ, ಇದು ಕಡಿಮೆ ಬೀಜಗಳಿಗೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಸಸ್ಯಗಳ ಅಳಿವಿಗೆ ಕಾರಣವಾಗಿದೆ.
ಇದನ್ನೂ ಓದಿ: Explainer: ತೌಕ್ತೆ ಚಂಡಮಾರುತ ಸೇರಿದಂತೆ ತೀವ್ರವಾದ ಚಂಡಮಾರುತಗಳು ಅರಬ್ಬೀ ಸಮುದ್ರದಲ್ಲೇ ರೂಪುಗೊಳ್ಳುವುದೇಕೆ?