ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು, ಎತ್ತರಕ್ಕೆ ಬದುಕಬೇಕು ಎಂದು ಬಯಸುತ್ತಾರೆ.. ಅದಕ್ಕಾಗಿ ಅವರು ಕಷ್ಟಪಟ್ಟು ಓದುತ್ತಾರೆ.. ಅವರು ಮಾಡಬೇಕಾದ ಕೆಲಸದಲ್ಲಿ ಸಂಪೂರ್ಣ ತರಬೇತಿಯನ್ನು ಪಡೆಯುತ್ತಾರೆ.. ಹೀಗೆ ಪ್ರತಿಯೊಬ್ಬರು ತಮ್ಮ ತಂದೆ-ತಾಯಿಯನ್ನು ಹೆಮ್ಮೆಪಡುವ ಬಯಕೆಯನ್ನು ಹೊಂದಿರುತ್ತಾರೆ.. ಅದಕ್ಕಾಗಿ ತಮಗೆ ಬೇಕಾದ ಕೋರ್ಸ್‌ನಲ್ಲಿ ತರಬೇತಿ ಪಡೆಯುತ್ತಾರೆ. ಉದಾಹರಣೆಗೆ, ಶಿಕ್ಷಕರಾಗಲು ಬಯಸುವ ವ್ಯಕ್ತಿಯು ಬೋಧನಾ ಕೋರ್ಸ್ ಅನ್ನು ಪೂರ್ಣಗೊಳಿಸುತ್ತಾನೆ. ಡಾಕ್ಟರ್ ಆಗಬೇಕು ಎನ್ನುವ ಆಸೆ ಇರುವವರು ಎಂಬಿಬಿಎಸ್ ಸೇರಿ ಕಷ್ಟಪಟ್ಟು ಓದುತ್ತಾರೆ. ಅಂತೆಯೇ, ವಕೀಲರು ವಕೀಲಿಕೆಗೆ ಸಂಬಂಧಿಸಿದ ಲಾ ಕೋರ್ಸ್ ಮಾಡುತ್ತಾರೆ. ಯಾವುದೇ ಪದವಿ ಇಲ್ಲದೆ ಯಾರೂ ಗೌರವಾನ್ವಿತ, ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಕೀನ್ಯಾದಲ್ಲಿ (Kenya) ವ್ಯಕ್ತಿಯೊಬ್ಬ ಭರ್ಜರಿ ಕಮಾಲ್ ಮಾಡಿದ್ದಾನೆ. ಯಾವುದೇ ಪದವಿ ಅಥವಾ ತರಬೇತಿ ಇಲ್ಲದೆ ವಕೀಲ (fake lawyer) ಆಗಿದ್ದಾನೆ. ಯಾವುದೇ ತರಬೇತಿ ಇಲ್ಲದಿದ್ದರೂ ಕೀನ್ಯಾ ಹೈಕೋರ್ಟ್ನಲ್ಲಿ 26 ಪ್ರಕರಣಗಳಲ್ಲಿ (high court of Kenya) ವಾದ ಮಂಡಿಸಿ, ಆತ ಯಶಸ್ವಿಯಾಗಿರುವುದು ಅಚ್ಚರಿಯ ಸಂಗತಿಯಾಗಿದೆ. ಆದರೆ ಇದರ ವೃತ್ತಾಂತ ತಿಳಿದಾಗ ಎಲ್ಲರೂ ಬೆಚ್ಚಿಬಿದ್ದರು. ಯಾವುದೇ ಪದವಿ, ತರಬೇತಿ ಇಲ್ಲದೇ ವಕೀಲರಾಗಿ (Advocate) 26 ಕೇಸ್ ಗೆದ್ದಿದ್ದು ಹೇಗೆ ಎಂಬುದು ಎಲ್ಲರ ಕುತೂಹಲವಾಗಿದೆ.
ಹೇಳಿ ಕೇಳಿ ನಾವೀಗ ನಕಲಿ ಬುದ್ಧಿಮತ್ತೆ ಕಾಲದಲ್ಲಿದ್ದೇವೆ! ಅದಕ್ಕೆ ತಕ್ಕಂತೆ ಈ ನಕಲಿ ಲಾಯರ್ ಮಹಾಶಯ.. ತನ್ನನ್ನು ತಾನು ವಕೀಲನಾಗಿ ಗುರುತಿಸಿಕೊಳ್ಳಲು ತನ್ನ ಹೆಸರಿಗೆ ಹೊಂದಿಕೆಯಾಗುವ ವ್ಯಕ್ತಿಯ ಪ್ರೊಫೈಲ್ ಅನ್ನು ಅಂತರ್ಜಾಲದಲ್ಲಿ ಜಾಲಾಡಿದ್ದಾನೆ. ಈ ಪ್ರಕ್ರಿಯೆಯಲ್ಲಿ ವಕೀಲ ಬ್ರಿಯಾನ್ ಮ್ವೆಂಡಾ ಹೆಸರಿನ್ನು ಹಿಡಿಯುತ್ತಾನೆ. ಅಲ್ಲಿಗೆ, ಬ್ರಿಯಾನ್ ಮ್ವೆಂಡಾ ಎಂಬ ನಿಜವಾದ ವಕೀಲನ ಗುರುತನ್ನು ಕದಿಯುತ್ತಾನೆ. ಇವನ ಹೆಸರು ಸಹ ಬ್ರಿಯಾನ್ ಮ್ವೆಂಡಾಗೆ ಹತ್ತಿರವಾಗಿದ್ದರಿಂದ ಸುಲಭವಾಗಿ ಮೋಸ ಮಾಡಿದ್ದಾನೆ. ಕೃತ್ರಿಮವಾಗಿ ನಿಜವಾದ ಬ್ರಿಯಾನ್ ಅವರ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ. ಅನುಮಾನ ಬರದಂತೆ ವಿವರಗಳನ್ನು ತಿರುಚಿ ತನ್ನ ಫೋಟೋ ಅಪ್‌ಲೋಡ್ ಮಾಡಿದ್ದಾನೆ. ಕಾಲಾಂತರದಲ್ಲಿ ನಿಜವಾದ ವಕೀಲ ಪ್ರಭು ತನ್ನ ಪ್ರಾಕ್ಟೀಸ್ಗಾಗಿ ಪ್ರಮಾಣಪತ್ರ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಸಿಸ್ಟಮ್‌ಗೆ ಲಾಗ್ ಇನ್ ಮಾಡಿದಾಗ ನಕಲಿ ಬ್ರಿಯಾನ್ ಧುತ್ತನೆ ಪ್ರತ್ಯಕ್ಷವಾಗಿದ್ದಾನೆ. ಹ್ಯಾಕ್ ಮಾಡಿ, ತನ್ನ ಪೋರ್ಟಲ್ಗೆ ಲಾಗ್ ಇನ್ ಆಗಿರುವುದರ ಕಾರಣ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ನಕಲಿ ಬ್ರಿಯಾನ್ ಮ್ವೆಂಡಾ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಗ ಇಡೀ ವೃತ್ತಾಂತ ಬಿಚ್ಚಿಕೊಂಡಿದೆ. 2022ರ ಆಗಸ್ಟ್ನಿಂದ ಆತ ಈ ಘನಂದಾರಿ ಕೆಲಸದಲ್ಲಿ ತಲ್ಲೀನನಾಗಿದ್ದನಂತೆ.
FACT: Kenyan authorities have arrested a fake lawyer, Brian Mwenda, who has falsely been presenting himself as an Advocate of the high court of Kenya.
He argued 26 cases before High Court Judges, Magistrates, and Court of Appeal Judges. He won all the 26 cases before his arrest. pic.twitter.com/fp8HXwtWS9
— Facts East Africa (@east_facts) October 12, 2023
ಈ ವಂಚನೆಯ ಹೊರತಾಗಿಯೂ, ಅನೇಕ ಜನರು ಬ್ರಿಯಾನ್ ಮ್ವೆಂಡಾನ ಬುದ್ಧಿಮತ್ತೆಯನ್ನು ಬೆಂಬಲಿಸಿದ್ದು, ಹಾಡಿಹೊಗಳಿದ್ದಾರೆ. ಯಾವುದೇ ಕಾನೂನು ತರಬೇತಿಯಿಲ್ಲದೆ ಕಾನೂನು ಪ್ರಾಕ್ಟೀಸ್ಗೆ ಮುಂದಾಗಿ, ಆತ 26 ಪ್ರಕರಣಗಳನ್ನು ಗೆದ್ದಿದ್ದಾನೆ ಎಂದು ಆತನ ಬುದ್ಧಿವಂತಿಕೆಯನ್ನು ಅನೇಕರು ಪ್ರಶಂಸಿಸಿದ್ದಾರೆ. ಬ್ರಿಯಾನ್‌ಗೆ ಹಲವಾರು ಖ್ಯಾತ ನಾಮರ ಬೆಂಬಲವೂ ಸಿಗುತ್ತಿದೆ. ಈ ಬೆಂಬಲದಿಂದ ಸಂತಸಗೊಂಡಿರುವ ಬ್ರಿಯಾನ್, ತನಗೆ ಬೆಂಬಲ ನೀಡಿದವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಸಮಯ ಬಂದಾಗ ಈ ತಪ್ಪು ತಿಳಿವಳಿಕೆಯನ್ನು ನಿವಾರಿಸುತ್ತೇನೆ ಎಂದೂ ಪೊಳಿಸರು ಬಂಧಿಸಿದಾಗ, ಸಮಜಾಯಿಷಿ ಧಾಟಿಯಲ್ಲಿ ಹೇಳಿಕೊಂಡಿದ್ದಾನೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ