ಇಸ್ರೇಲ್ ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧ ಎಂದ ಹಮಾಸ್
ಇಸ್ರೇಲ್ ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ಗಳಿಂದ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಕಂಡ ಕಂಡಲ್ಲಿ ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ. ಒಟ್ಟಾರೆ ಘಟನೆಯಲ್ಲಿ ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್(Israel) ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ಹಮಾಸ್(Hamas) ಮೊದಲ ಬಾರಿಗೆ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ಗಳಿಂದ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಕಂಡ ಕಂಡಲ್ಲಿ ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ. ಒಟ್ಟಾರೆ ಘಟನೆಯಲ್ಲಿ ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಗಾಜಾ ಮೇಲೆ ನಾವು ಬಾಂಬ್ ದಾಳಿ ನಡೆಸುತ್ತೇವೆ ನಾಗರಿಕರೆಲ್ಲರೂ ಗಾಜಾದ ದಕ್ಷಿಣ ಭಾಗಕ್ಕೆ ಹೋಗಿ ಎಂದು ಇಸ್ರೇಲ್ ಹೇಳಿತ್ತು ಹೀಗಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಗಾಜಾವನ್ನು ತೊರೆದಿದ್ದರು. ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಹಿರಿಯ ಹಮಾಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿ ತಮ್ಮ ಸೇನಾ ದಾಳಿಯನ್ನು ಸ್ಥಗಿತಗೊಳಿಸಿದರೆ ಒಂದು ಗಂಟೆಯೊಳಗೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಅಧಿಕಾರಿ ಸಿದ್ಧ ಎಂದು ವರದಿ ಹೇಳಿದೆ . ಮಂಗಳವಾರ ಇಸ್ರೇಲ್ ಆಸ್ಪತ್ರೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿ ನೂರಾರು ಮಂದಿ ಸಾವನ್ನಪ್ಪಿದ್ದರು, ಇದಾದ ಬಳಿಕ ಹಮಾಸ್ ಈ ಹೇಳಿಕೆ ನೀಡಿದೆ.
ಮತ್ತಷ್ಟು ಓದಿ: ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ: ಇಸ್ರೇಲ್ಗೆ ಹಮಾಸ್ ಎಚ್ಚರಿಕೆ
ಗಾಜಾದ ಆಸ್ಪತ್ರೆಯೊಂದರ ಮೇಲೆ ಮಾರಣಾಂತಿಕ ವೈಮಾನಿಕ ದಾಳಿ ನಡೆಸಿ ನೂರಾರು ಜನರನ್ನು ಕೊಂದ ನಂತರ ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು.
ನಡೆಯುತ್ತಿರುವುದು ನರಮೇಧ. ಈ ಹತ್ಯಾಕಾಂಡವನ್ನು ನಿಲ್ಲಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ನಾವು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇವೆ ಎಂದು ಪ್ಯಾಲೆಸ್ತೀನ್ ಹೇಳಿದೆ.
ನೀರು, ಇಂಧನ, ವಿದ್ಯುತ್ ಮತ್ತು ವೈದ್ಯಕೀಯ ಸಾಮಗ್ರಿಗಳಂತಹ ಜೀವನಾವಶ್ಯಕ ವಸ್ತುಗಳ ಪೂರೈಕೆ ಸೇರಿದಂತೆ ಗಾಜಾದ ಮೇಲೆ ಇಸ್ರೇಲ್ ಸಂಪೂರ್ಣ ದಿಗ್ಬಂಧನವನ್ನು ವಿಧಿಸಿದ ದಿನಗಳ ನಂತರ ಎಲ್ಲಾ ನಾಗರಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಅಧಿಕಾರಿಗಳ ಷರತ್ತು ಕೇಳಿಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ