ಇಸ್ರೇಲ್​ನ್ನು ಸಂಪೂರ್ಣವಾಗಿ ನಾಶ ಮಾಡುವ ಹಮಾಸ್​ನ ಕನಸು ಎಂದೂ ಈಡೇರುವುದಿಲ್ಲ: ನೇತನ್ಯಾಹು

ಇಸ್ರೇಲ್​ನ್ನು ಸಂಪೂರ್ಣವಾಗಿ ನಾಶ ಮಾಡುವುದೇ ಹಮಾಸ್​ನ ಮುಖ್ಯ ಗುರಿ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಯಹೂದಿಗಳನ್ನು ಕೊಲ್ಲುವುದು ಅವರ ಧ್ಯೇಯವಾಗಿದೆ, ಅವರಿಗೆ ಸಾಮರ್ಥ್ಯವಿದ್ದರೆ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಕೊಲ್ಲುತ್ತಿದ್ದರು. ಆದರೆ ಮುಗ್ಧ ನಾಗರಿಕರನ್ನು ಕೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಸ್ರೇಲ್​ನ್ನು ಸಂಪೂರ್ಣವಾಗಿ ನಾಶ ಮಾಡುವ ಹಮಾಸ್​ನ ಕನಸು ಎಂದೂ ಈಡೇರುವುದಿಲ್ಲ: ನೇತನ್ಯಾಹು
ನೇತನ್ಯಾಹುImage Credit source: NDTV
Follow us
ನಯನಾ ರಾಜೀವ್
|

Updated on: Oct 18, 2023 | 9:43 AM

ಇಸ್ರೇಲ್​(Israel)ನ್ನು ಸಂಪೂರ್ಣವಾಗಿ ನಾಶ ಮಾಡುವುದೇ ಹಮಾಸ್​ನ ಮುಖ್ಯ ಗುರಿ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಯಹೂದಿಗಳನ್ನು ಕೊಲ್ಲುವುದು ಅವರ ಧ್ಯೇಯವಾಗಿದೆ, ಅವರಿಗೆ ಸಾಮರ್ಥ್ಯವಿದ್ದರೆ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಕೊಲ್ಲುತ್ತಿದ್ದರು. ಆದರೆ ಮುಗ್ಧ ನಾಗರಿಕರನ್ನು ಕೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್​ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇಸ್ರೇಲ್ ಹಾಗೂ ಅರಬ್ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇರಾನ್​ನ ವಿದೇಶಾಂಗ ಸಚಿವ ಅಬ್ದುಲ್ಲಾಹಿಯಾನ್ ಮಾತನಾಡಿ, ಇಸ್ರೇಲ್​ ದಾಳಿಗೆ ಪ್ರತಿಯಾಗಿ ಇರಾನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಇಸ್ರೇಲ್ ರಾಯಭಾರಿ ದೇಶವನ್ನು ತೊರೆಯಬೇಕೆಂದು ಕೊಲಂಬಿಯಾದ ವಿದೇಶಾಂಗ ಸಚಿವರು ಸೂಚಿಸಿದ್ದಾರೆ. ಅಕ್ಟೊಬರ್ 7 ರಂದು ಹಮಾಸ್ ಭಯೋತ್ಪಾದನಾ ಸಂಘಟನೆ ಇಸ್ರೇಲ್​ ಮೇಲೆ ರಾಕೆಟ್ ದಾಳಿ ನಡೆಸಿತ್ತು ಘಟನೆಯಲ್ಲಿ 1500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಇದೀಗ ಗಾಜಾದ ಆಸ್ಪತ್ರೆ ಮೇಲೆ ಬಾಂಬ್ ದಾಳಿ ನಡೆದಿದ್ದು, ಪ್ಯಾಲೆಸ್ತೀನ್ ಇದು ಇಸ್ರೇಲ್​ ಮಾಡಿದ್ದು ಎಂದು ಹೇಳಿದ್ದರೆ, ಇಸ್ರೇಲ್​ ದಾಳಿಯಲ್ಲಿ ನಮ್ಮ ಕೈವಾಡವಿಲ್ಲ ಎಂದಿದೆ.

ಗಾಜಾ ಪಟ್ಟಿಯನ್ನು ಮತ್ತೆ ವಶಪಡಿಸಿಕೊಳ್ಳಲು ಇಸ್ರೇಲ್​ ತೆಗೆದುಕೊಂಡಿರುವ ನಿರ್ಧಾರ ತಪ್ಪು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇಸ್ರೇಲ್ ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್​ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್​ಗಳಿಂದ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಕಂಡ ಕಂಡಲ್ಲಿ ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್​ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ. ಒಟ್ಟಾರೆ ಘಟನೆಯಲ್ಲಿ ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ಗಾಜಾದ ಆಸ್ಪತ್ರೆ ಮೇಲೆ ಬಾಂಬ್ ದಾಳಿ, 500ಕ್ಕೂ ಅಧಿಕ ಮಂದಿ ಸಾವು, ನಮ್ಮ ಕೈವಾಡವಿಲ್ಲ ಎಂದ ಇಸ್ರೇಲ್

‘ಗಾಜಾ ಮೇಲೆ ನಾವು ಬಾಂಬ್ ದಾಳಿ ನಡೆಸುತ್ತೇವೆ ನಾಗರಿಕರೆಲ್ಲರೂ ಗಾಜಾದ ದಕ್ಷಿಣ ಭಾಗಕ್ಕೆ ಹೋಗಿ ಎಂದು ಇಸ್ರೇಲ್​ ಹೇಳಿತ್ತು ಹೀಗಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಗಾಜಾವನ್ನು ತೊರೆದಿದ್ದರು. ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಹಿರಿಯ ಹಮಾಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿ ತಮ್ಮ ಸೇನಾ ದಾಳಿಯನ್ನು ಸ್ಥಗಿತಗೊಳಿಸಿದರೆ ಒಂದು ಗಂಟೆಯೊಳಗೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಅಧಿಕಾರಿ ಸಿದ್ಧ ಎಂದು ವರದಿ ಹೇಳಿದೆ . ಮಂಗಳವಾರ ಇಸ್ರೇಲ್​ ಆಸ್ಪತ್ರೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿ ನೂರಾರು ಮಂದಿ ಸಾವನ್ನಪ್ಪಿದ್ದರು, ಇದಾದ ಬಳಿಕ ಹಮಾಸ್ ಈ ಹೇಳಿಕೆ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ