ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಬರೋಬ್ಬರಿ ಒಂದು ವಾರದ ನಂತರ ಚೀನಾ, ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಆ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡೆನ್ ಅವರನ್ನು ಅಭಿನಂದಿಸಿದೆ. ಚೀನಾ, ರಷ್ಯ, ಬ್ರೆಜಿಲ್ ಮತ್ತು ಇನ್ನಿತರ ಕೆಲ ಪ್ರಮುಖ ರಾಷ್ಟ್ರಗಳು; ಟ್ರಂಪ್ ಮೇಲಿನ ವ್ಯಾಮೋಹಕ್ಕೋ ಅಥವಾ ಅವರಿಗೆ ಬೈಡೆನ್ ಆಯ್ಕೆಯಾಗುವುದು ಬೇಕಿರಲಿಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲ, ಆದರೆ ಈ ರಾಷ್ಟ್ರಗಳೆಲ್ಲ ತಮ್ಮದೇ ಅದ ಕಾರಣಗಳಿಗೆ ಬೈಡೆನ್ ಅವರನ್ನು ಅಭಿನಂದಿಸಲು ನಿರಾಕರಿಸುತ್ತಿವೆ. ಶುಕ್ರವಾರದಂದು ಈ ರಾಷ್ಟ್ರಗಳ ಗುಂಪಿನಿಂಧ […]
Ad
Follow us on
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಬರೋಬ್ಬರಿ ಒಂದು ವಾರದ ನಂತರ ಚೀನಾ, ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಆ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡೆನ್ ಅವರನ್ನು ಅಭಿನಂದಿಸಿದೆ. ಚೀನಾ, ರಷ್ಯ, ಬ್ರೆಜಿಲ್ ಮತ್ತು ಇನ್ನಿತರ ಕೆಲ ಪ್ರಮುಖ ರಾಷ್ಟ್ರಗಳು; ಟ್ರಂಪ್ ಮೇಲಿನ ವ್ಯಾಮೋಹಕ್ಕೋ ಅಥವಾ ಅವರಿಗೆ ಬೈಡೆನ್ ಆಯ್ಕೆಯಾಗುವುದು ಬೇಕಿರಲಿಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲ, ಆದರೆ ಈ ರಾಷ್ಟ್ರಗಳೆಲ್ಲ ತಮ್ಮದೇ ಅದ ಕಾರಣಗಳಿಗೆ ಬೈಡೆನ್ ಅವರನ್ನು ಅಭಿನಂದಿಸಲು ನಿರಾಕರಿಸುತ್ತಿವೆ.
ಶುಕ್ರವಾರದಂದು ಈ ರಾಷ್ಟ್ರಗಳ ಗುಂಪಿನಿಂಧ ಹೊರಬಂದಿರುವ ಚೀನಾ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಿದೆ.
‘‘ಚೀನಾ ವಿದೇಶಾಂಗ ಇಲಾಖೆಯ ಬಾತ್ಮೀದಾರ, ವ್ಯಾಂಗ್ ವೆನ್ಬಿನ್ ಶುಕ್ರವಾರದಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘‘ಅಮೆರಿಕ ಜನತೆಯ ಆಯ್ಕೆಯನ್ನು ನಾವು ಗೌರವಿಸುತ್ತೇವೆ ಮತ್ತು ಶ್ರೀ ಬೈಡೆನ್ ಹಾಗೂ ಶ್ರೀಮತಿ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸುತ್ತೇವೆ,’’ ಎಂದು ಹೇಳಿದ್ದಾರೆ.
ಆದರೆ ಸೋಜಿಗದ ಸಂಗತಿಯೆಂದರೆ, ಖುದ್ದು ಟ್ರಂಪ್ ತಾವು ಸೋತಿರುವುದನ್ನು ಒಪ್ಪಿಕೊಂಡಿಲ್ಲ ಮತ್ತು ಅಧಿಕಾರ ಹಸ್ತಾಂತರಿಸುವುದನ್ನು ಉಪೇಕ್ಷಿಸುತ್ತಿದ್ದಾರೆ. ಅಸಲಿಗೆ, ಚೀನಾ ಟ್ರಂಪ್ ತನ್ನೊಂದಿಗೆ ಹೊಂದಿದ್ದ ಸಂಬಂಧದಿಂದ ಅಸಾಮಾಧಾನಗೊಂಡಿದೆ. ಟ್ರಂಪ್ ಅಧಿಕಾರಕ್ಕೆ ಬಂದಂದಿನಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಹಳಸಿವೆ. ಚೀನಾ ಸೃಷ್ಟಿಸಿದ ಅವಾಂತರದಿಂದಾಗಿಯೇ ಕೊರೊನಾ ವೈರಸ್ ವಿಶ್ವದಾದ್ಯಂತ ಹಬ್ಬಿ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ ಎಂದು ಟ್ರಂಪ್ ಬಹಿರಂಗವಾಗಿ ಖಂಡಿಸಲಾರಂಭಿಸಿದ್ದು ಮತ್ತು ಹಾಂಗ್ ಕಾಂಗ್ನಲ್ಲಿ ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಕಠೋರ ಮಾತುಗಳಲ್ಲಿ ನಿಂದಿಸಿರುವುದು ಏಷ್ಯಾದ ಸೂಪರ್ ಪವರ್ಗೆ ಅರಗಿಸಿಕೊಳ್ಳಲಾಗಿಲ್ಲ.
ಚೀನಾ ವಿರುದ್ಧ ಟ್ರಂಪ್ ಟೀಕಾ ಪ್ರಹಾರ ಅಷ್ಟಕ್ಕೇ ನಿಂತಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ಮಗ್ನರಾಗುವ ಮೊದಲು ಅವರು, ಅಮೆರಿಕಾಗೆ ಅಪಾಯವಿರುವುದಾದರೆ ಅದು ಚೀನಾದಿಂದ ಮಾತ್ರ, ಆ ದೇಶದಿಂದ ಇಡೀ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಿದೆ ಅಂತಲೂ ಹೇಳಿದ್ದರು.
ಈಗ, ಟ್ರಂಪ್ ಜಾಗಕ್ಕೆ ಮೃದು ಸ್ವಭಾವದವರಂತೆ ಕಾಣುವ ಬೈಡೆನ್ ಬಂದಿದ್ದಾರೆ ಮತ್ತು ಅವರನ್ನು ವಿಳಂಬವಾಗಿಯಾದರೂ ಅಭಿನಂದಿಸುವ ಮೂಲಕ ಚೀನಾ, ಪ್ರಾಯಶ: ಹೊಸ ಅಧ್ಯಾಯ ಆರಂಭಿಸುವ ಇಂಗಿತ ವ್ಯಕ್ತಪಡಿಸಿದೆ. ಅದರ ಈ ಧೋರಣೆಯನ್ನು ಹೊಸ ಅಧ್ಯಕ್ಷ ಹೇಗೆ ಅಂಗೀಕರಿಸುತ್ತಾರೆನ್ನುವುದು ಕಾದು ನೋಡಬೇಕಾದ ಅಂಶ.