AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇಟಿಂಗ್ ಆ್ಯಪ್ ಬಿಡಿ, ಸೂಪರ್ ಮಾರ್ಕೆಟ್‌ಗೆ ಹೋಗಿ, ಪಿಂಕ್ ಬಾಸ್ಕೆಟ್ ಹಿಡಿದರೆ ಸಾಕು ಸಿಗಲಿದ್ದಾರೆ ಲೈಫ್ ಪಾರ್ಟ್ನರ್

ಫಿನ್‌ಲ್ಯಾಂಡ್‌ನ ಸೂಪರ್ ಮಾರ್ಕೆಟ್‌ಗಳಲ್ಲಿ 'ಪಿಂಕ್ ಬಾಸ್ಕೆಟ್' ಹೊಸ ಡೇಟಿಂಗ್ ಟ್ರೆಂಡ್ ಸೃಷ್ಟಿಸಿದೆ. ಸಿಂಗಲ್ಸ್ ಈ ಗುಲಾಬಿ ಬುಟ್ಟಿ ಹಿಡಿದು ಶಾಪಿಂಗ್ ಮಾಡುವ ಮೂಲಕ ತಾವು ಸಂಗಾತಿ ಹುಡುಕಲು ಮುಕ್ತ ಎಂದು ಸೂಚಿಸುತ್ತಾರೆ. ಇದು ಡೇಟಿಂಗ್ ಆ್ಯಪ್‌ಗಳಿಗೆ ಪರ್ಯಾಯವಾಗಿ, ನಿಜ ಜೀವನದಲ್ಲಿ ಪ್ರೀತಿ ಹುಡುಕಲು ಅವಕಾಶ ನೀಡುತ್ತದೆ. ಈ ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಜನರಿಗೆ ಹೊಸ ಭರವಸೆ ಮೂಡಿಸಿದೆ.

ಡೇಟಿಂಗ್ ಆ್ಯಪ್ ಬಿಡಿ, ಸೂಪರ್ ಮಾರ್ಕೆಟ್‌ಗೆ ಹೋಗಿ, ಪಿಂಕ್ ಬಾಸ್ಕೆಟ್ ಹಿಡಿದರೆ ಸಾಕು  ಸಿಗಲಿದ್ದಾರೆ ಲೈಫ್ ಪಾರ್ಟ್ನರ್
ಪಿಂಕ್ ಬಾಸ್ಕೆಟ್
ನಯನಾ ರಾಜೀವ್
|

Updated on: Jul 15, 2026 | 11:03 AM

Share

ಹೆಲ್ಸಿಂಕಿ, ಜುಲೈ 15: ಇಂದಿನ ರೀಲ್ಸ್ ಜಗತ್ತಿನಲ್ಲಿ ಬೇರೆ ಜೋಡಿಗಳನ್ನು ನೋಡಿ “ಇನ್ನೂ ನಮಗ್ಯಾರು ಸಂಗಾತಿ ಸಿಕ್ಕಿಲ್ವಲ್ಲಾ” ಎಂದು ಕೊರಗುವ ಸಿಂಗಲ್ಸ್‌ಗೆ ಫಿನ್‌ಲ್ಯಾಂಡ್ ದೇಶದ ದಿನಸಿ ಅಂಗಡಿಗಳು ಭರ್ಜರಿ ಆಫರ್ ನೀಡಿವೆ. ನೀವು ಪ್ರೀತಿ(Love)ಯನ್ನು ಹುಡುಕಲು ಯಾವುದೇ ಪಬ್, ಕ್ಲಬ್‌ಗಳಿಗೆ ಹೋಗಬೇಕಾಗಿಲ್ಲ ಅಥವಾ ಡೇಟಿಂಗ್ ಆ್ಯಪ್‌ಗಳಿಗೆ ಹಣ ಸುರಿಯಬೇಕಾಗಿಲ್ಲ, ಬದಲಿಗೆ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಒಂದು ‘ಗುಲಾಬಿ ಬಣ್ಣದ ಬಾಸ್ಕೆಟ್’ ಹಿಡಿದು ಶಾಪಿಂಗ್ ಮಾಡಿದರೆ ಸಾಕು, ನಿಮ್ಮ ಒಂಟಿತನಕ್ಕೆ ಬ್ರೇಕ್ ಬೀಳುವುದು ಪಕ್ಕಾ. ಫಿನ್‌ಲ್ಯಾಂಡ್‌ನ ಅತಿ ದೊಡ್ಡ ಸೂಪರ್ ಮಾರ್ಕೆಟ್ ‘ಕೆ. ಸೂಪರ್ ಮಾರ್ಕೆಟ್’ ಮತ್ತು ‘ಎಸ್ ಸೂಪರ್ ಮಾರ್ಕೆಟ್’ ತಮ್ಮ ಮಳಿಗೆಗಳಲ್ಲಿ ಈ ವಿಶಿಷ್ಟ ಸೌಲಭ್ಯವನ್ನು ಪರಿಚಯಿಸಿವೆ.

ಏನಿದು ‘ಪಿಂಕ್ ಬಾಸ್ಕೆಟ್’ ರಹಸ್ಯ? ಸಾಮಾನ್ಯವಾಗಿ ಸೂಪರ್ ಮಾರ್ಕೆಟ್‌ಗಳಲ್ಲಿ ಕಪ್ಪು, ನೀಲಿ ಅಥವಾ ಬೂದು ಬಣ್ಣದ ಶಾಪಿಂಗ್ ಬುಟ್ಟಿಗಳಿರುತ್ತವೆ. ಆದರೆ ಅವುಗಳ ಪಕ್ಕದಲ್ಲೇ ಈಗ ಪ್ರಕಾಶಮಾನವಾದ ‘ಗುಲಾಬಿ ಬಣ್ಣದ ಬುಟ್ಟಿಗಳನ್ನು’ ಇಡಲಾಗಿದೆ.

ಮಿಂಗಲ್ ಆಗಲು ಗ್ರೀನ್ ಸಿಗ್ನಲ್: ಯಾರೆಲ್ಲಾ ಸದ್ಯ ಸಿಂಗಲ್ ಆಗಿದ್ದು, ಹೊಸ ಸಂಗಾತಿಯನ್ನು ಭೇಟಿಯಾಗಲು ಮುಕ್ತವಾಗಿದ್ದಾರೋ ಅವರು ಮಾತ್ರ ಅಂಗಡಿಯೊಳಗಿರುವ ಈ ಪಿಂಕ್ ಬಾಸ್ಕೆಟ್ ಅನ್ನು ಆಯ್ದುಕೊಳ್ಳುತ್ತಾರೆ.

ಸೈಲೆಂಟ್ ಇಂಡಿಕೇಟರ್: ಈ ಗುಲಾಬಿ ಬಣ್ಣವು ಕಿರಾಣಿ ಅಂಗಡಿಯ ಕಾರಿಡಾರ್‌ಗಳಲ್ಲಿ ಚಲಿಸುವ ಇತರ ಸಿಂಗಲ್ಸ್‌ಗೆ “ನಾನು ನಿಮ್ಮೊಂದಿಗೆ ಮಾತನಾಡಲು ಸಿದ್ಧನಿದ್ದೇನೆ” ಎಂದು ನೀಡುವ ಸೂಕ್ಷ್ಮ ಸಂಕೇತವಾಗಿದೆ.

ಅಂಗಡಿಯಲ್ಲಿ ತರಕಾರಿ ಅಥವಾ ದಿನಸಿ ಖರೀದಿಸುತ್ತಾ ಇಬ್ಬರು ಪಿಂಕ್ ಬಾಸ್ಕೆಟ್ ಹೊಂದಿರುವವರು ಎದುರಾದಾಗ, ಯಾವುದೇ ಮುಜುಗರವಿಲ್ಲದೆ ಮಾತುಕತೆ ಆರಂಭಿಸಬಹುದು. ಪರಸ್ಪರ ಇಷ್ಟವಾದರೆ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಪ್ರೇಮಕಥೆ ಮುಂದುವರಿಸಬಹುದು. ಈಗಾಗಲೇ ಹತ್ತಾರು ಜನ ಈ ಮೂಲಕ ತಮ್ಮ ‘ಸೋಲ್ ಮೇಟ್’ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: Video: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಸೋಶಿಯಲ್ ಮೀಡಿಯಾದಲ್ಲಿ 1.5 ಕೋಟಿಗೂ ಹೆಚ್ಚು ವ್ಯೂಸ್ ರೋಯಾ ಫಾಕ್ಸ್ ಎಂಬ ಸೋಷಿಯಲ್ ಮೀಡಿಯಾ ಬಳಕೆದಾರರು ಫಿನ್‌ಲ್ಯಾಂಡ್‌ನ ದಿನಸಿ ಅಂಗಡಿಯೊಂದರಲ್ಲಿ ಪಿಂಕ್ ಬಾಸ್ಕೆಟ್ ಹಿಡಿದು ಮಾಡಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕ್ಲಿಪ್ ಬರೋಬ್ಬರಿ 15.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 7 ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಬಾಚಿಕೊಂಡಿದೆ.

ಇದನ್ನು ನೋಡಿದ ನೆಟ್ಟಿಗರು ಸಖತ್ ಮಜಾವಾಗಿ ಕಾಮೆಂಟ್ ಮಾಡುತ್ತಿದ್ದಾರೆ. “ನನ್ನ ನೆಚ್ಚಿನ ಬಣ್ಣ ಗುಲಾಬಿ, ಈ ನಿಯಮ ತಿಳಿಯದೆ ನಾನು ಈ ಬುಟ್ಟಿ ಹಿಡಿದಿದ್ದರೆ ಕಥೆ ಮುಗಿಯುತ್ತಿತ್ತು” ಎಂದು ಒಬ್ಬರು ಬರೆದರೆ, ಮತ್ತೊಬ್ಬ ಯುವತಿ ನಾನು ಅಮೆರಿಕದ ಹೂಸ್ಟನ್‌ನಲ್ಲೇ ನನ್ನ ಬುಟ್ಟಿಗೆ ಪಿಂಕ್ ಪೇಂಟ್ ಮಾಡಿಕೊಂಡು ತಿರುಗಾಡುತ್ತೇನೆ, ನನ್ನ ಭಾವಿ ಪತಿ ಫಿನ್‌ಲ್ಯಾಂಡ್‌ನಿಂದಲಾದರೂ ಬಂದು ಹಾಯ್ ಅನ್ನಲಿ ಎಂದು ತಮಾಷೆ ಮಾಡಿದ್ದಾರೆ.

View this post on Instagram

A post shared by Roya Fox (@royaventurera)

ಫೀಚರಿಸ್ಟಿಕ್ ಮಾಹಿತಿ: ಕಮರ್ಷಿಯಲ್ ಗೆಲುವಿನ ಜೊತೆಗೆ ಹೊಸ ಟ್ರೆಂಡ್ ಈ ‘ಪಿಂಕ್ ಬಾಸ್ಕೆಟ್’ ಪರಿಕಲ್ಪನೆಯು ಕೇವಲ ಒಂಟಿ ಹೃದಯಗಳನ್ನು ಒಟ್ಟುಗೂಡಿಸುತ್ತಿಲ್ಲ, ಬದಲಾಗಿ ಸೂಪರ್ ಮಾರ್ಕೆಟ್‌ಗಳ ಪಾಲಿಗೆ ಬಿಜಿನೆಸ್ ಬೂಸ್ಟರ್ ಆಗಿ ಬದಲಾಗಿದೆ.

ವ್ಯಾಪಾರದಲ್ಲಿ ಭಾರಿ ವೃದ್ಧಿ: ತಮಗೆ ಇಷ್ಟವಾದ ಸಂಗಾತಿಯನ್ನು ನೋಡಲು ಅಥವಾ ಯಾರಾದರೂ ಬಂದು ಮಾತನಾಡಿಸಲಿ ಎಂಬ ಆಸೆಯಿಂದ ಯುವಕ-ಯುವತಿಯರು ಹೆಚ್ಚಿನ ಸಮಯ ಅಂಗಡಿಯಲ್ಲೇ ಕಳೆಯುತ್ತಿದ್ದಾರೆ. ಈ ನೆಪದಲ್ಲಿ ಸೂಪರ್ ಮಾರ್ಕೆಟ್‌ಗಳ ದಿನನಿತ್ಯದ ವ್ಯಾಪಾರ ದುಪ್ಪಟ್ಟಾಗಿದೆ.

ಯುರೋಪ್‌ನಾದ್ಯಂತ ಹೊಸ ಕ್ರೇಜ್: ಕೇವಲ ಫಿನ್‌ಲ್ಯಾಂಡ್ ಮಾತ್ರವಲ್ಲದೆ, ಜರ್ಮನಿ, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್‌ನಂತಹ ಹಲವು ಯುರೋಪಿಯನ್ ದೇಶಗಳ ದಿನಸಿ ಅಂಗಡಿಗಳೂ ಈಗ ಅನಿರೀಕ್ಷಿತ ಡೇಟಿಂಗ್ ತಾಣಗಳಾಗಿ ಮಾರ್ಪಡುತ್ತಿವೆ. ಕೃತಕವಾದ ಆನ್‌ಲೈನ್ ಜಗತ್ತನ್ನು ಬಿಟ್ಟು, ನೈಜ ಜಗತ್ತಿನಲ್ಲಿ ಮುಖಾಮುಖಿ ಭೇಟಿಯಾಗಲು ಬಯಸುವ ಇಂದಿನ ತಲೆಮಾರಿಗೆ ಈ ಸೂಪರ್ ಮಾರ್ಕೆಟ್ ಡೇಟಿಂಗ್ ಅತ್ಯಂತ ಸುರಕ್ಷಿತವಾಗಿ ಕಾಣಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ