Brazil Fire Accident: ಬ್ರೆಜಿಲ್​ನಲ್ಲಿ ಬೆಂಕಿ ಅವಘಡ, ಒಂಬತ್ತು ಮಂದಿ ಸಜೀವ ದಹನ, ಎಂಟು ಮಂದಿಗೆ ಗಾಯ

ಬ್ರೆಜಿಲ್​ನ ಪ್ಯಾರಾಪೇಬಾಸ್ ಪಟ್ಟಣದಲ್ಲಿರುವ ಗ್ರಾಮೀಣ ರೈತರ ಶಿಬಿರದಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ಒಂಬತ್ತು ಮಂದಿ ಸಜೀವ ದಹನಗೊಂಡಿದ್ದಾರೆ. ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಏಳು ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.

Brazil Fire Accident: ಬ್ರೆಜಿಲ್​ನಲ್ಲಿ ಬೆಂಕಿ ಅವಘಡ, ಒಂಬತ್ತು ಮಂದಿ ಸಜೀವ ದಹನ, ಎಂಟು ಮಂದಿಗೆ ಗಾಯ
ಬ್ರೆಜಿಲ್​ನಲ್ಲಿ ಬೆಂಕಿ ಅವಘಡ, ಒಂಬತ್ತು ಮಂದಿ ಸಜೀವ ದಹನ, ಎಂಟು ಮಂದಿಗೆ ಗಾಯ (ಸಾಂದರ್ಭಿಕ ಚಿತ್ರ)
Edited By:

Updated on: Dec 11, 2023 | 7:23 AM

ಸಾವೊ ಪಾಲೊ, ಡಿ.11: ಬ್ರೆಜಿಲ್‌ನ (Brazil) ಉತ್ತರ ರಾಜ್ಯವಾದ ಪಾರಾದಲ್ಲಿ ಭೂರಹಿತ ಕಾರ್ಮಿಕ ಚಳವಳಿ ಎಂಎಸ್‌ಟಿಗೆ ಸೇರಿದ ಶಿಬಿರದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) ಒಂಬತ್ತು ಮಂದಿ ಸಜೀವ ದಹನರಾಗಿದ್ದಾರೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಎಂಎಸ್‌ಟಿ ಪ್ರಕಾರ, ಪಾರಾಪೇಬಾಸ್ ಪಟ್ಟಣದಲ್ಲಿರುವ ಗ್ರಾಮೀಣ ರೈತರ ಶಿಬಿರದಲ್ಲಿ ಇಂಟರ್ನೆಟ್ ವೈರಿಂಗ್ ಕಾಮಗಾರಿ ವೇಳೆ ಶಾರ್ಟ್ ಸರ್ಕ್ಯೂಟ್‌ ಆಗಿ ಈ ದುರ್ಘಟನೆ ಸಂಭವಿಸಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಆಂಟೆನಾವು ಹೈ-ವೋಲ್ಟೇಜ್ ನೆಟ್‌ವರ್ಕ್‌ಗೆ ತಗುಲಿದಾಗ ವಿದ್ಯುತ್ ತಂತಿಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕೆಲವು ಗುಡಿಸಲುಗಳಿಗೆ ಬೆಂಕಿ ತಗುಲಿದೆ.

ಇದನ್ನೂ ಓದಿ: ವಿಜಯಪುರ ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಘಟನೆಯಲ್ಲಿ ಮೃತಪಟ್ಟ ಒಂಬತ್ತು ಮಂದಿಯಲ್ಲಿ ಆರು ಮಂದಿ ಶಿಬಿರದಲ್ಲಿದ್ದವರಾಗಿದ್ದು, ಉಳಿದ ಮೂವರು ಇಂಟರ್ನೆಟ್ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಎಂಟು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಏಳು ಮಂದಿ ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರವಾಗಿ ಗಾಯಗೊಂಡ ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ