ಅಫ್ಘಾನಿಸ್ತಾದಲ್ಲಿ ಪಾಪಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಕಂದಹಾರ್ನ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡು ಐವರು ನಾಗರಿಕರು ಮೃತಪಟ್ಟಿದ್ದಾರೆ. ಯಾವುದೇ ಸಂಘಟನೆಗಳು ಇಲ್ಲಿಯವರೆಗೂ ದಾಳಿ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇದು ತಾಲಿಬಾನಿಗಳ ಕೃತ್ಯ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.
ಜ್ವಾಲಾಮುಖಿ ಭಯ, ಊರುಬಿಟ್ಟ ಜನ:
ಫಿಲಿಪೈನ್ಸ್ನಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿ, ದಿನದಿಂದ ದಿನಕ್ಕೆ ತೀವ್ರ ರೂಪಪಡೆಯುತ್ತಿದೆ. ಹೀಗಾಗಿ ಬೂದಿ ಸಾಕಷ್ಟು ಪ್ರಮಾಣದಲ್ಲಿ ವಾತಾವರಣ ಸೇರಿದ್ದು, ಜನರು ಪರದಾಡುವಂತಾಗಿದೆ. ಸ್ಥಳೀಯರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ.
ಚೀನಿ ವಸ್ತುಗಳ ಬೆಲೆಯಲ್ಲಿ ಇಳಿಕೆ!
ಅಮೆರಿಕ ಹಾಗೂ ಚೀನಾ ಮಧ್ಯೆ ವಾಣಿಜ್ಯ ಒಪ್ಪಂದ ಏರ್ಪಟ್ಟಿರುವ ಬೆನ್ನಲ್ಲೇ ರೈತರು ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೆರಿಕದಲ್ಲಿ ಚೀನಿ ವಸ್ತುಗಳಿಗೆ ಬೃಹತ್ ಮಾರುಕಟ್ಟೆ ಇದ್ದು, ಈ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಜನರು ತತ್ತರಿಸಿದ್ದರು. ಆದ್ರೆ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.