ಬ್ರಾಟಿಸ್ಲಾವಾ: ಉಕ್ರೇನ್ ಮತ್ತು ರಷ್ಯಾ ಯುದ್ಧ (Russia vs Ukraine war)ದ ನಡುವೆ ಭಾರತ (India) ರಷ್ಯಾದಿಂದ ತೈಲ ಆಮದು ಮಾಡಿಕೊಂಡ ಬಗ್ಗೆ ವಿವಿಧ ದೇಶಗಳ ಮಾಡಿದ ಟೀಕೆಗಳಿಗೆ ತಿರುಗೇಟು ನೀಡಿದ ವಿದೇಶಾಂಗ ಸಚಿವ ಜೈಶಂಕರ್ (Jaishankar), ತೈಲ ಆಮದುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಉಕ್ರೇನ್ ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್
ಸ್ಲೋವಾಕಿಯಾದಲ್ಲಿ ನಡೆಯುತ್ತಿರುವ GLOBSEC 2022 ಬ್ರಾಟಿಸ್ಲಾವಾ ಫೋರಮ್‌ನಲ್ಲಿ ‘ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮಿತ್ರರಾಷ್ಟ್ರಗಳು’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಉಕ್ರೇನ್ ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಒತ್ತಿ ಹೇಳಿದರು. ಉಕ್ರೇನ್ ಯುದ್ಧದ ನಡುವೆ ಯುರೋಪ್ ರಷ್ಯಾದಿಂದ ಅನಿಲ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸುತ್ತಿರುವಾಗ ಭಾರತವನ್ನು ಮಾತ್ರ ಏಕೆ ಪ್ರಶ್ನಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪುಟಿನ್ ಗರ್ಲ್ಫ್ರೆಂಡ್ಗೆ ಗೌರವಾರ್ಥವಾಗಿ ‘ಅಲೀನಾ ಫೆಸ್ಟಿವಲ್’ ನಡೆಸಿದ ರಷ್ಯಾ: ವರದಿ
ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದರಿಂದ ನಡೆಯುತ್ತಿರುವ ಉಕ್ರೇನ್ ಯುದ್ಧಕ್ಕೆ ಹಣ ನೀಡುತ್ತಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವರು, “ನಾನು ವಾದ ಮಾಡಲು ಬಯಸುವುದಿಲ್ಲ. ಭಾರತವು ರಷ್ಯಾಕ್ಕೆ ತೈಲವನ್ನು ನೀಡಿದರೆ, ಯುದ್ಧಕ್ಕೆ ಧನಸಹಾಯ ನೀಡುತ್ತಿದ್ದರೆ ಹೇಳಿ. ಯುರೋಪ್‌ಗೆ ಬರುವ ರಷ್ಯಾದ ಅನಿಲವು ಯುದ್ಧಕ್ಕೆ ನಿಧಿಯನ್ನು ನೀಡಿದಂತೆ ಆಗಲ್ವಾ? ಸ್ವಲ್ಪ ಸಮಂಜಸವಾಗಿರಲಿ.” ಎಂದರು. ಯುರೋಪಿಯನ್ ಒಕ್ಕೂಟವು ವಿಧಿಸಿರುವ ನಿರ್ಬಂಧಗಳು ಕೆಲವು ಯುರೋಪಿಯನ್ ರಾಷ್ಟ್ರಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೇರಲಾಗಿದೆ ಎಂದು ಇದೇ ವೇಳೆ ಹೇಳಿದರು.
ಕಠಿಣ ಮತ್ತು ಪ್ರಕ್ಷುಬ್ಧ ಕೋವಿಡ್ ಸಮಯದ ನಂತರ ಭಾರತ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ ಜೈಶಂಕರ್, “ನಾವು ಹೆಚ್ಚಿನ ಪ್ರಮಾಣದ ಕೋವಿಡ್‌ನಿಂದ ಹೊರಗಿದ್ದೇವೆ. ಆದರೆ ಅದು ಎಂದಿಗೂ ದೂರವಾಗುವುದಿಲ್ಲ. ನಾವು ಆರ್ಥಿಕ ಚೇತರಿಕೆಯ ಬಲವಾದ ಅರ್ಥದಲ್ಲಿ ಕೋವಿಡ್‌ನಿಂದ ಹೊರಗಿದ್ದೇವೆ. ನಾವು ಅದನ್ನು ಬಹಳ ವಿವೇಕದಿಂದ, ಆರ್ಥಿಕವಾಗಿ ನಿಭಾಯಿಸಿದ್ದೇವೆ” ಎಂದರು. “ನಾವು ಆರ್ಥಿಕ ಪ್ರತಿಕ್ರಿಯೆಗಳ ವಿಷಯದಲ್ಲಿ ಅದನ್ನು ಬಹಳ ವಿವೇಕದಿಂದ ನಿರ್ವಹಿಸಿದ್ದೇವೆ. ನಾವು ಎಲ್ಲಿ ಮಧ್ಯಪ್ರವೇಶಿಸಬೇಕೋ ಅಲ್ಲಿ ನಾವು ಮಧ್ಯಪ್ರವೇಶಿಸಿದ್ದೇವೆ. ಮೋದಿ ಸರ್ಕಾರದ 8 ವರ್ಷಗಳಲ್ಲಿ ನಾವು ಸಾಮಾಜಿಕ ಕಲ್ಯಾಣವನ್ನು ನಿರ್ಮಿಸಿದ್ದೇವೆ ಎಂದರು.
ಇದನ್ನೂ ಓದಿ: ಅಪರೂಪಕ್ಕೆ ಕ್ಯಾಲೊಫೋರ್ನಿಯಾದಿಂದ ಹೊರಬಿದ್ದ ಹ್ಯಾರಿ-ಮೇಘನಾ ದಂಪತಿ ರಾಣಿ ಎಲಿಜಬೆತ್ರ ಜುಬಿಲೀ ಪರೇಡಲ್ಲಿ ಪಾಲ್ಗೊಂಡರು!
Pleased to speak at @GLOBSEC 2022 Bratislava Forum.
Animated discussion, reflecting a perspective from India and the Indo-Pacific.
?: https://t.co/lSY1VuJlaW pic.twitter.com/4SgdXSg91r
— Dr. S. Jaishankar (@DrSJaishankar) June 3, 2022
ಎಸ್ ಜೈಶಂಕರ್ ಅವರು ಪ್ರಸ್ತುತ ಜೂನ್ 2 ರಿಂದ 6 ರವರೆಗೆ ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜೂನ್ 2 ರಿಂದ 4 ರವರೆಗೆ ಬ್ರಾಟಿಸ್ಲಾವಾ ಪ್ರವಾಸದಲ್ಲಿ ಸ್ಲೋವಾಕಿಯಾದ ಪ್ರಧಾನ ಮಂತ್ರಿ ಎಡ್ವರ್ಡ್ ಹೆಗರ್ ಅವರನ್ನು ಭೇಟಿ ಮಾಡಲಿದ್ದು, ಸ್ಲೋವಾಕಿಯಾದ ವಿದೇಶಾಂಗ ಮತ್ತು ಯುರೋಪಿಯನ್ ವ್ಯವಹಾರಗಳ ಸಚಿವ ಇವಾನ್ ಕೊರ್ಕಾಕ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ.
ಇದಲ್ಲದೆ, ಜೂನ್ 4 ರಿಂದ 6 ರವರೆಗೆ ಜೆಕ್ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜಾನ್ ಲಿಪಾವ್ಸ್ಕಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಎರಡು ದೇಶಗಳ ರಾಜಕೀಯ ನಾಯಕತ್ವವನ್ನು ಭೇಟಿ ಮಾಡುವುದರ ಜೊತೆಗೆ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ವಲಸಿಗರ ಜೊತೆ ಸಂವಾದ ನಡೆಸಲಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Fri, 3 June 22