ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್
ಯುರೋಪ್ ಮಾತನಾಡದ ಸಾಕಷ್ಟು ಸಮಸ್ಯೆಗಳಿವೆ.ಯುರೋಪ್‌ನ ಸಮಸ್ಯೆಯು ಪ್ರಪಂಚದ ಸಮಸ್ಯೆಯಾಗಿದೆ. ಆದರೆ ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು" ಎಂದು ವಿದೇಶಾಂಗ ಸಚಿವರು ಹೇಳಿದರು.
ದೆಹಲಿ: ಭಾರತದ ವಿದೇಶಾಂಗ ನೀತಿಯು ಕೆಲವು ರಾಷ್ಟ್ರಗಳಿಗೆ ಒಪ್ಪಿಗೆ ಆಗುವುದಿಲ್ಲ ಎಂದು ಹೇಳಿ ನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಹೇಳಿದ್ದಾರೆ. ನಾನು ನಿಮ್ಮೊಂದಿಗೆ ಒಮ್ಮತ ಹೊಂದಿಲ್ಲ ಎಂದು ನಾನು ನಿರ್ಧಾರ ವಿಳಂಬ ಮಾಡಿಲ್ಲ ಎಂದು GLOBESEC ನಲ್ಲಿ ಭಾಗವಹಿಸಿದ ಸಚಿವರು ಹೇಳಿದ್ದಾರೆ. Taking Friendship to the Next Level: Allies in the Indo-Pacific ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರವರು. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವು ಮತ್ತು ಉದಯೋನ್ಮುಖ ವಿಶ್ವ ನಾಯಕನಾಗಿ ನಿರ್ಧಾರ ತೆಗೆದುಕೊಳ್ಳಲು ಭಾರತಕ್ಕೆ ಸಾಧ್ಯವೇ ಎಂದು ವಿದೇಶಾಂಗ ಸಚಿವರನ್ನು ಕೇಳಿದ್ದಕ್ಕೆ ಸಚಿವರು ಈ ಉತ್ತರ ನೀಡಿದ್ದಾರೆ. ಈ ಕಲ್ಪನೆ ಹೇಗಿದೆ ಅಂದರೆ ಒಂದು ಘರ್ಷಣೆ ಬಗ್ಗೆ ನಾನು ಮಾಡಿದ ವ್ಯವಹಾರವು ಇನ್ನೊಂದು ಘರ್ಷಣೆಗೆ ಸಹಾಯ ಮಾಡುತ್ತದೆ ಎನ್ನುವಂತಿದೆ. ಜಗತ್ತಿನ ವ್ಯವಹಾರವೇ ಈ ರೀತಿ ಇದೆ. ಚೀನಾದಲ್ಲಿನ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಉಕ್ರೇನ್, ರಷ್ಯಾದೊಂದಿಗೆ ಯಾವುದೇ ಸಂಬಂಧವಿಲ್ಲ. ಚೀನಾದೊಂದಿಗಿನ ತನ್ನ ಪರಿಸ್ಥಿತಿಯಲ್ಲಿ ಭಾರತವು ಜಾಗತಿಕ ಸಹಾಯವನ್ನು ನಿರೀಕ್ಷಿಸುತ್ತದೆಯೇ ಎಂಬ ಪ್ರಶ್ನೆಗೆ ಇದು ತುಂಬಾ ಮುಂಚಿತ ಎಂದು ಉತ್ತರಿಸಿದ್ದಾರೆ.
ಯುರೋಪ್ ಮಾತನಾಡದ ಸಾಕಷ್ಟು ಸಮಸ್ಯೆಗಳಿವೆ.ಯುರೋಪ್‌ನ ಸಮಸ್ಯೆಯು ಪ್ರಪಂಚದ ಸಮಸ್ಯೆಯಾಗಿದೆ. ಆದರೆ ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು” ಎಂದು ವಿದೇಶಾಂಗ ಸಚಿವರು ಹೇಳಿದರು. “ಇಂದು ಚೀನಾ ಮತ್ತು ಭಾರತದ ನಡುವೆ ಸಂಪರ್ಕವನ್ನು ಮಾಡಲಾಗುತ್ತಿದೆ. ಉಕ್ರೇನ್ನಲ್ಲಿ ಏನಾಗುತ್ತಿದೆ? ಉಕ್ರೇನ್ ವಿಷಯಕ್ಕಿಂತ ಮುಂಚೆಯೇ ಚೀನಾ ಮತ್ತು ಭಾರತ ಪರಸ್ಪರ ಸಂಪರ್ಕಹೊಂದಿದೆ. ಇದೊಂದು ಚತುರ ಚರ್ಚೆ ಎಂದು ನನಗನಿಸುವುದಿಲ್ಲ. ಜಗತ್ತು ಎದುರಿಸುತ್ತಿರುವ ಎಲ್ಲಾ ದೊಡ್ಡ ಸವಾಲುಗಳಿಗೆ ಭಾರತದಿಂದ ಕೆಲವು ರೀತಿಯಲ್ಲಿ ಪರಿಹಾರಗಳು ಬರುತ್ತಿವೆ ಎಂದು ಜೈಶಂಕರ್ ಹೇಳಿದರು.
#WATCH This is construct you’re trying to impose on India. Don’t think it’s necessary for India to join any axis.India entitled to make its own choices which will be a balance of its values &interests:EAM on being asked about US-led axis & China as another potential axis in world pic.twitter.com/cFCiy3wneq
— ANI (@ANI) June 3, 2022
ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿರುವುದು ನಡೆಯುತ್ತಿರುವ ಯುದ್ಧಕ್ಕೆ ಧನಸಹಾಯ ನೀಡಿದಂತೆ ಅಲ್ಲವೇ ಎಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, “ನೋಡಿ, ನಾನು ವಾದ ಮಾಡಲು ಬಯಸುವುದಿಲ್ಲ. ಆದರೆ ರಷ್ಯಾದ ಅನಿಲವನ್ನು ಖರೀದಿಸುವುದು ಯುದ್ಧಕ್ಕೆ ಧನಸಹಾಯವಲ್ಲವೇ? ರಷ್ಯಾದಿಂದ ಭಾರತಕ್ಕೆ ತೈಲ ಬರುತ್ತಿದ್ದು ಅದಕ್ಕೆ ಭಾರತ ಪಾವತಿ ಮಾಡಿದರೆ ಮಾತ್ರ ಅದು ಯುದ್ಧಕ್ಕೆ ನಿಧಿ ಸಹಾಯ ಮಾಡಿದಂತಾಗುತ್ತದೆಯೇ? ಯುರೋಪ್‌ಗೆ ಬರುವ ರಷ್ಯಾದ ಅನಿಲವು ನಿಧಿಯನ್ನು ನೀಡುವುದಿಲ್ಲವೇ? ಪ್ರಶ್ನೆಗಳು ಸರಿಯಾಗಿರಲಿ ಎಂದು ಜೈಶಂಕರ್ ಹೇಳಿದ್ದಾರೆ.
ಭಾರತವು ರಷ್ಯಾ-ಉಕ್ರೇನ್ ಯುದ್ಧವನ್ನು ‘ನಿರ್ಲಕ್ಷಿಸುತ್ತಿದೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಭಾರತವು ಬುಚಾ ಹತ್ಯೆಯನ್ನು ಖಂಡಿಸುತ್ತದೆ ಮತ್ತು ತನಿಖೆಗೆ ಒತ್ತಾಯಿಸುತ್ತದೆ ಎಂದು ಹೇಳಿದರು. “ಉಕ್ರೇನ್ ಸಂಘರ್ಷದೊಂದಿಗೆ ಏನಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ, ನಾವು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಯಸುತ್ತಿದ್ದೇವೆ. ನಾವು ಪುಟಿನ್ ಮತ್ತು ಝೆಲೆನ್ಸ್ಕಿ ಅವರಿಗೆ ಕರೆ ಮಾಡಿದ್ದೆವು. ಇದನ್ನು ನೀವು ನಿರ್ಲಕ್ಷಿಸುತ್ತಿದ್ದೀರಿ ಎಂದು ಜೈಶಂಕರ್ ಉತ್ತರಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:28 pm, Fri, 3 June 22