ಅಂಗಾಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಚೇತರಿಕೆ ಸಾಧ್ಯವಿಲ್ಲ: ಪರ್ವೇಜ್​​ ಮುಷರಫ್ ಕುಟುಂಬ ಟ್ವೀಟ್

Pervez Musharraf ಪರ್ವೇಜ್ ಮುಷರಫ್ ಅವರು ವೆಂಟಿಲೇಟರ್‌ನಲ್ಲಿಲ್ಲ. ಕಳೆದ 3 ವಾರಗಳಿಂದ ಅವರ ಅನಾರೋಗ್ಯದ (ಅಮಿಲೋಡೋಸಿಸ್) ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತರಿಕೆ ಸಾಧ್ಯವಾಗದ ಮತ್ತು ಅಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ..

ಅಂಗಾಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಚೇತರಿಕೆ ಸಾಧ್ಯವಿಲ್ಲ: ಪರ್ವೇಜ್​​ ಮುಷರಫ್ ಕುಟುಂಬ ಟ್ವೀಟ್
ಪರ್ವೇಜ್ ಮುಷರಫ್
Edited By:

Updated on: Jun 10, 2022 | 8:37 PM

ಲಾಹೋರ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಅವರ ಕುಟುಂಬ ಶುಕ್ರವಾರ ಟ್ವೀಟ್ ಮಾಡಿದ್ದು ಮುಷರಫ್ ಅವರ್ ವೆಂಟಿಲೇಟರ್ (ventilation) ಬೆಂಬಲದಲ್ಲಿ ಇಲ್ಲ ಎಂದು ಹೇಳಿದೆ. ಮುಷರಫ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಕುಟುಂಬ ಟ್ವೀಟ್ ಮಾಡಿದ್ದು, ಅಮಿಲೋಡೋಸಿಸ್ (Amyloidosis) ಸಮಸ್ಯೆಯಿಂದಾಗಿ ಕಳೆದ ಮೂರು ವಾರಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೀಗ ಚೇತರಿಕೆ ಸಾಧ್ಯವಾಗದೇ ಇದ್ದು ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ ಎಂದು ಕುಟುಂಬ ತಿಳಿಸಿದೆ. ಅವರ ದೈನಂದಿನ ಜೀವನ ಸುಲಭವಾಗುವಂತೆ ಪ್ರಾರ್ಥನೆಗಾಗಿ ಮನವಿ ಮಾಡಿದ ಕುಟುಂಬ, ಅವರ ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು. ಕುಟುಂಬದಿಂದ ಸಂದೇಶ: ಅವರು ವೆಂಟಿಲೇಟರ್‌ನಲ್ಲಿಲ್ಲ. ಕಳೆದ 3 ವಾರಗಳಿಂದ ಅವರ ಅನಾರೋಗ್ಯದ (ಅಮಿಲೋಡೋಸಿಸ್) ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತರಿಕೆ ಸಾಧ್ಯವಾಗದ ಮತ್ತು ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವ ಕಾರಣ ಕಠಿಣ ಹಂತವನ್ನು ಎದುರಿಸುತಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಕೆಲವು ಸುದ್ದಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ ಮುಷರಫ್ ಕುಟುಂಬ ಆ ಟ್ವೀಟ್ ಮಾಡಿದೆ. ಪಾಕಿಸ್ತಾನದ ಮಾಧ್ಯಮ ಸಂಸ್ಥೆ ವಕ್ತ್ ನ್ಯೂಸ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದು , ಆನಂತರ ಅದನ್ನು ಡಿಲೀಟ್ ಮಾಡಿದೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:21 pm, Fri, 10 June 22