AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಲಾಕ್​ಡೌನ್ ಆತಂಕದಲ್ಲಿ ಶಾಂಘೈ, ಉಪನಗರ ಮಿನ್ಹಾಂಗ್​ನಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ

ಸುಮಾರು 27 ಲಕ್ಷ ಜನಸಂಖ್ಯೆ ಹೊಂದಿರುವ ಮಿನ್ಹಾಂಗ್ ನಗರದಲ್ಲಿ ಸಮೂಹಿಕ ಟೆಸ್ಟಿಂಗ್ ಗಳನ್ನು ನಡೆಸಿದ ಬಳಿಕವೇ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸಲಾಗುವುದೆಂದು ವರದಿ ತಿಳಿಸುತ್ತದೆ.

ಮತ್ತೊಮ್ಮೆ ಲಾಕ್​ಡೌನ್ ಆತಂಕದಲ್ಲಿ ಶಾಂಘೈ, ಉಪನಗರ ಮಿನ್ಹಾಂಗ್​ನಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ
ಲಾಕ್​ಡೌನ್​​​ನಲ್ಲಿ ಹೀಗಿತ್ತು ಶಾಂಘೈ ನಗರ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 10, 2022 | 5:03 PM

Share

Shanghai: ಜನಸಂಖ್ಯೆಯ ದೃಷ್ಟಿಯಿಂದ ಜಗತ್ತಿನ ಮೂರನೇ ಅತಿದೊಡ್ಡ ಮತ್ತು ಚೀನಾದ ಅತ್ಯಂತ ದೊಡ್ಡ ನಗರವನಿಸಿಕೊಂಡಿರುವ ಶಾಂಘೈ (Shanghai) ವಿಶ್ವದ ಪ್ರಮುಖ ಆರ್ಥಿಕ ವಹಿವಾಟಿನ ಕೇಂದ್ರವೂ ಆಗಿದೆ. ಮೊನ್ನೆಯಷ್ಟೇ ಚೀನಾ ಸರ್ಕಾರ (Chinese Government) ಸುಮಾರು ಎರಡು ತಿಂಗಳು ಅವಧಿಯ ಕೋವಿಡ್-19 ಸಂಬಂಧಿತ ಲಾಕ್ ಡೌನ್ ಅನ್ನು (Lockdown) ತೆರವುಗೊಳಿಸಿತ್ತು. ಆದರೆ ಲಾಕ್​ಡೌನ್  ಕರಿನೆರಳು ಈ ಮಹಾನಗರವನ್ನು ಪುನಃ ಆವರಿಸಿಕೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ. ಶಾಂಘೈ ಜಿಲ್ಲೆಯ ಉಪನಗರವಾಗಿರುವ ಮಿನ್ಹಾಂಗ್ ನಲ್ಲಿ (Minhang) ಕೋವಿಡ್-19 ಪ್ರಕರಣಗಳು ಮತ್ತೇ ಕಾಣಿಸಿಕೊಳ್ಳುತ್ತಿರುವುದರಿಂದ ಸರ್ಕಾರ ಈ ಉಪನಗರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಆದೇಶಿಸಿದೆ ಎಂದು ರಾಯಿಟರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಸುಮಾರು 27 ಲಕ್ಷ ಜನಸಂಖ್ಯೆ ಹೊಂದಿರುವ ಮಿನ್ಹಾಂಗ್ ನಗರದಲ್ಲಿ ಸಮೂಹಿಕ ಟೆಸ್ಟಿಂಗ್ ಗಳನ್ನು ನಡೆಸಿದ ಬಳಿಕವೇ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸಲಾಗುವುದೆಂದು ವರದಿ ತಿಳಿಸುತ್ತದೆ.

ಚೀನಾದ ಮಹಾನಗರ ಶಾಂಘೈ ಕಟ್ಟುನಿಟ್ಟಿನ ಎರಡು-ತಿಂಗಳ ಕೋವಿಡ್-19 ಲಾಕ್​ಡೌನ್  ತೆರವುಗೊಂಡ ನಂತರ ಚೇತರಿಸಿಕೊಳ್ಳುವ ಹಂತದಲ್ಲಿರುವಾಗಲೇ ಪುನಃ ನಿರ್ಬಂಧಗಳನ್ನು ಹೇರುವ ಅನಿವಾರ್ಯತೆ ಸರ್ಕಾರಕ್ಕೆ ಬಂದೊದಗಿದೆ.

ಎರಡು ತಿಂಗಳ ಕಠಿಣ ನಿರ್ಬಂಧಗಳ ಬಳಿಕ ಚೈನೀಸ್ ಸರ್ಕಾರ ಇತ್ತಿಚಿಗಷ್ಟೇ ಅದನ್ನು ತೆರವುಗೊಳಿಸಿತ್ತು. ನಮಗೆಲ್ಲ ಗೊತ್ತಿರುವ ಹಾಗೆ, ಇಡೀ ವಿಶ್ವಕ್ಕೆ ಮಹಾಮಾರಿಯನ್ನು ಹಬ್ಬಿದ ಚೀನಾ, ಶೂನ್ಯ-ಕೋವಿಡ್ ನೀತಿ ಅಡಿ ಮಿನ್ಹಾಂಗ್ ನಲ್ಲಿ ಹೊಸದಾಗಿ ಲಾಕ್​ಡೌನ್ ಹೇರುತ್ತಿದೆ.

ಮಿನ್ಹಾಂಗ್ ಜಿಲ್ಲಾಧಿಕಾರಿಗಳ ಪ್ರಕಾರ ಶನಿವಾರದಿಂದ ಆರಂಭಗೊಳ್ಳುವ ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲ ಜನರ ಮೇಲೆ ತೀವ್ರ ನಿಗಾ ಇಡಲಾಗುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಕೋವಿಡ್ ಟೆಸ್ಟ್ ನಡೆಸಲಾಗುವುದು.

ಲಾಕ್​ಡೌನ್ ಯಾವಾಗ ತೆರವುಗೊಳಿಸಲಾಗಬಹುದು ಎನ್ನುವ ಬಗ್ಗೆ ಸ್ಪಷ್ಟನೆ ಸೂಚನೆ ನೀಡದ ಅಧಿಕಾರಿಗಳು, ಪ್ರತಿಯೊಬ್ಬ ವ್ಯಕ್ತಿಯ ಸ್ಯಾಂಪಲ್ ಸಂಗ್ರಹಿದ ನಂತರ ತೆರವುಗೊಳಿಸಲಾಗುವುದು ಅಂತ ಹೇಳಿರುವರೆಂದು ರಾಯಿಟರ್ ವರದಿ ಮಾಡಿದೆ.

ಶೂನ್ಯ-ಕೋವಿಡ್ ಪಾಲಿಸಿ ಅಡಿಯಲ್ಲಿ ಚೀನಾ ಸರ್ಕಾರವು ಕೋವಿಡ್ ವೈರಾಣು ಸಮುದಾಯಗಳ ನಡುವೆ ಹಬ್ಬದಂತೆ ಎಚ್ಚರವಹಿಸುತ್ತಿದೆ. ಈ ಕಾರಣಕ್ಕಾಗೇ ಅದು ಅತ್ಯಂತ ಕಠೋರ ಮತ್ತು ಬಿಗಿ ಕ್ರಮಗಳನ್ನು ಅನುಸರಿಸುತ್ತಿದೆ. ಕಟ್ಟುನಿಟ್ಟಿನ ಲಾಕ್​ಡೌನ್ ಮತ್ತು ಸಾಮೂಹಿಕ ಟೆಸ್ಟಿಂಗ್ ಅದರ ಭಾಗವಾಗಿವೆ.

ಮಾರ್ಚ್ ತಿಂಗಳಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಆತಂಕ ಹುಟ್ಟಿಸುವ ರೀತಿಯಲ್ಲಿ ಹೆಚ್ಚಲಾರಂಭಿಸಿದ ನಂತರ ಚೀನಾದ ವಾಣಿಜ್ಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ಬ್ಯೂಸಿ ಬಂದರು ಪಟ್ಟಣವಾಗಿರುವ ಶಾಂಘೈನಲ್ಲಿ ಸರ್ಕಾರ ಎರಡು ತಿಂಗಳು ಅವಧಿಗೆ ಲಾಕ್​ಡೌನ್ ಹೇರಿತ್ತು ಮತ್ತು ಕೆಲವೇ ದಿನಗಳ ಹಿಂದೆ ಅದನ್ನು ತೆರವುಗೊಳಿಸಲಾಗಿತ್ತು. ಆ ಲಾಕ್​ಡೌನ್ ಚೀನಾದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿತ್ತಲ್ಲದೆ ಜಾಗತಿಕ ಉತ್ಪಾದನೆ ಹಾಗೂ ವಹಿವಾಟನ್ನು ಬುಡಮೇಲು ಮಾಡಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!