ಫ್ರಾನ್ಸ್: ಜನರ ಭೇಟಿಯ ವೇಳೆ, ಜನಸಂದಣಿಯ ನಡುವೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಕೆನ್ನೆಗೆ ಸಾರ್ವಜನಿಕನೊಬ್ಬ ಏಟು ಕೊಟ್ಟ ಘಟನೆ ಮಂಗಳವಾರ ನಡೆದಿದೆ. ಫ್ರಾನ್ಸ್ ಸೌತ್ಈಸ್ಟ್ನ ಡ್ರೋಮ್ ಪ್ರದೇಶದಲ್ಲಿ ಫ್ರಾನ್ಸ್ ಅಧ್ಯಕ್ಷ ಸಾರ್ವಜನಿಕರೊಂದಿಗೆ ಭೇಟಿ ಹಾಗೂ ಮಾತುಕತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ನೆರೆದಿದ್ದ ಜನರಲ್ಲಿ ಒಬ್ಬಾತ ಅಧ್ಯಕ್ಷರಿಗೇ ಕೆನ್ನೆಗೆ ಬಾರಿಸಿದ್ದಾನೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಅಲ್ಲಿನ ಬಿಎಫ್ಎಮ್ ಟಿವಿ ಮತ್ತು ಆರ್ಎಮ್ಸಿ, ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಕೆನ್ನೆಗೆ ಸಾರ್ವಜನಿಕರ ನಡುವೆ ನೆರೆದಿದ್ದ ಒಬ್ಬಾತ ಏಟು ಕೊಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಅದರಂತೆ, ಹಸಿರು ಬಣ್ಣದ ಅಂಗಿ ತೊಟ್ಟುಕೊಂಡಿದ್ದ, ಕನ್ನಡಕ ಧರಿಸಿದ್ದ ಹಾಗೂ ಮಾಸ್ಕ್ ಧರಿಸಿದ್ದ ವ್ಯಕ್ತಿ ಈ ಕೆಲಸ ಮಾಡಿದ್ದಾನೆ.
ಆತ ’ಡೌನ್ ವಿಥ್ ಮಾಕ್ರೋನಿಯಾ’ (ಅ ಬಸ್ ಲ ಮಾಕ್ರೋನಿಯಾ) ಎಂದು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದ್ದಾನೆ. ಬಳಿಕ, ಕೆನ್ನೆಗೆ ಹೊಡೆದಿದ್ದಾನೆ. ಆತನ ಹೆಸರು ಮತ್ತಿತರ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ.
ವಿಡಿಯೋ ನೋಡಿ:
?゚ヌᄋ — VIDEO: French President Emmanuel Macron got slapped in his face during a visit in southeast France.
— Belaaz (@TheBelaaz) June 8, 2021
ಈ ಸಂದರ್ಭ ಮಾಕ್ರೋನ್ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದ್ದಾರೆ. ಕಪಾಳಕ್ಕೆ ಏಟು ಕೊಟ್ಟವನನ್ನು ಎಳೆದು, ಅಧ್ಯಕ್ಷರನ್ನು ದೂರ ಮಾಡಿದ್ದಾರೆ. ಈ ಘಟನೆಯನ್ನು ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಭದ್ರತಾ ಪಡೆ ಕೂಡ ಒಪ್ಪಿಕೊಂಡಿದೆ.
ಇದನ್ನೂ ಓದಿ: World Record: ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಗಿನ್ನಿಸ್ ದಾಖಲೆ ನಿರ್ಮಿಸಿದ ಅಮ್ಮ!
Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!