ಬೀಜಿಂಗ್: ಕೊರೊನಾ ವೈರಸ್ ಕೃತಕವಾಗಿ ಉದ್ಭವವಾಗಿದ್ದೇ ವುಹಾನ್ ಪ್ರಯೋಗಾಲಾಯದಲ್ಲಿ ಎಂದು ಇಡೀ ಜಗತ್ತೇ ನಂಬಿದೆ. ಆದರೆ ಅದು ಅಲ್ಲಿಂದಲ್ಲ; ಆದು ನಾನಲ್ಲ ನಾನಲ್ಲ ಅನ್ನುತ್ತಿದೆ ಚೀನಾ ಗಣರಾಜ್ಯ ಕಳೆದ ಒಂದೂವರೆ ವರ್ಷದಿಂದ. ಪರಿಸ್ಥಿತಿ ಹೀಗಿರುವಾಗ ಅದೇ ಚೀನಾದಲ್ಲಿ ಮತ್ತೆ ಕೊವಿಡ್ ಮಹಾಮಾರಿ ಆವರಿಸಿದೆ… ಇದು ಮತ್ತೊಂದು ಅಲೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಜನರು ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ; ಹೊಸ ಕೇಸ್ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟಗಳು ರದ್ದಾಗಿವೆ. ಗಾಂಗ್ಝೋ ಎಂಬ ನಗರದಿಂದ ಹಾರಾಡುವ ಎಲ್ಲ ವಿಮಾನಗಳನ್ನು ಕೆಳಗಿಳಿಸಲಾಗಿದೆ. ಮೇ 21ರಿಂದ ಕೊರೊನಾ ಮರುಕಳಿಸಿದೆ. ಇದು ಇಂದಿನ ಚೀನಾದ ದುಃಸ್ಥಿತಿ.
ಚೀನಾದಲ್ಲಿ ಅಲ್ಲಲ್ಲಿ ಕೊರೊನಾ ವೈರಸ್ ಜೋರಾಗಿಯೇ ಕಾಣಿಸಿಕೊಳ್ಳತೊಡಗಿದೆ. ಅದು ಮತ್ತೆ ಪೆಡಂಭೂತವಾಗಿ ಗೋಚರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗಾಂಗ್ಝೋ ನಗರದಲ್ಲಿ ಲಾಕ್ಡೌನ್ ಮಾದರಿ ಕಟ್ಟುನಿಟ್ಟಿನ ಕ್ರಮಗಳನ್ನು ಶನಿವಾರದಿಂದ ಜಾರಿಗೆ ತರಲಾಗಿದೆ. ನಗರದಲ್ಲಿ ಐದೈದು ರಸ್ತೆಗಳನ್ನು ಒಂದು ಮಾಡಿ ಜನ ಓಡಾಡದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತು ಪೂರೈಕೆಗೆ ಸ್ಥಳೀಯ ಆಡಳಿತವೇ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಜೋರಾಗಿ ಕಾಡತೊಗಿದ್ದು ಲಾಕ್ಡೌನ್ ಎಷ್ಟು ದಿನಗಳ ಕಾಲ ಜಾರಿಯಲ್ಲಿರಲಿದೆ ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ.
ಶಾಲೆ-ಕಾಲೇಜು ಬಂದ್ ಆಗಿವೆ. ಒಳಾಂಗಣ ಕ್ರೀಡೆ, ಸಗಟು ಮಾರುಕಟ್ಟೆಗಳು, ಮಾಲ್ಗಳು, ಹೋಟೆಲ್ಗಳಿಗೆ ಅದಾಗಲೇ ಬೀಗ ಹಾಕಲಾಗಿದೆ. ಗಾಂಗ್ಝೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Guangzhou Baiyun International Airport) 519 ವಿಮಾನಗಳ ಹರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸುತ್ತಿದ್ದಾಗ ಕಳೆದ ವರ್ಷ ಕೊರೊನಾ ಸೋಕು ಕಾಣಿಸಿಕೊಂಡ ಬಳಿಕ ಈ ವಿಮಾಣ ನಿಲ್ದಾಣದಿಂದ ಐದು ಕೋಟಿ ಮಂದಿ ವಿಮಾನ ಪ್ರಯಾಣ ಬೆಳೆಸಿದ್ದರು.
ಜನ ಈಗ ರೈಲು, ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಬೇಕೆಂದರೆ ಕೊರೊನಾ ನೆಗೆಟೀವ್ ರಿಪೋರ್ಟ್ ತೋರಿಸುವುದು ಕಡ್ಡಾಯವಾಗಿದೆ. ಮೇ 21ರಿಂದ ಕೊರೊನಾ ಮರುಕಳಿಸಿದೆ. ಹಾಗಾಗಿ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದ್ದು, ಕೊರೊನಾ ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೇ 30ರ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಸುಮಾರು 1 ಲಕ್ಷ ಸೋಕು ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ ಒಟ್ಟು 4,636 ಮಾತ್ರವೇ ಇದೆ.
COVID-19 ವಿರುದ್ಧ ಚೀನಾ ಜಯ ಸಾಧಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದರೂ ಅಲ್ಲಿ ಕೊರೊನಾ ಸೋಂಕು ಮತ್ತೆ ತಾಂಡವವಾಡುತ್ತಿರುವುದು ನೋಡಿದರೆ ಚೀನಾ ಇನ್ನೂ ಕೋವಿಡ್ ವಿರುದ್ಧ ಜಯ ಸಾಧಿಸಿಲ್ಲ ಎನ್ನಬಹುದು.
(Fresh Covid-19 outbreak in Guangzhou China China not yet defeated the virus entirely)
ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ.. ಈಗ ಬ್ರಿಟಿನ್ ಇಂಟಲಿಜೆನ್ಸ್ ಸಹ ಅದನ್ನೇ ಹೇಳುತ್ತಿದೆ
Published On - 1:35 pm, Mon, 31 May 21