ವಿಮಾನದಲ್ಲಿ ಕೂತು ಪ್ರಯಾಣಿಸುವುದು ಮಾಮೂಲಿಯೇ.. ಈಗ ಮಲಗಿಯೂ ಪ್ರಯಾಣಿಸಬಹುದು ಗೊತ್ತಾ!?

| Updated By: ganapathi bhat

Updated on: Apr 06, 2022 | 9:01 PM

ವಿಮಾನದಲ್ಲಿ ಕುಳಿತುಕೊಂಡು ಪ್ರಯಾಣಿಸಬಹುದು ಎಂದು ನಿಮಗೆಲ್ಲಾ ಗೊತ್ತು. ಆದರೆ ಇಲ್ಲೀಗ ಮಲಗಿಯೂ ಪ್ರಯಾಣಿಸಬಹುದು. ಹಾಯಾಗಿ ನಿದ್ರಿಸುತ್ತಾ ವಾಯುವಿಹಾರ ಮಾಡಬಹುದು.

ವಿಮಾನದಲ್ಲಿ ಕೂತು ಪ್ರಯಾಣಿಸುವುದು ಮಾಮೂಲಿಯೇ.. ಈಗ ಮಲಗಿಯೂ ಪ್ರಯಾಣಿಸಬಹುದು ಗೊತ್ತಾ!?
ಸಾಂದರ್ಭಿಕ ಚಿತ್ರ
Follow us on

ಕೊರೊನಾ ನಂತರ ಬಹಳಷ್ಟು ಬದಲಾವಣೆಗಳನ್ನು ನಮ್ಮ ಸುತ್ತಮುತ್ತ ನಾವು ಗಮನಿಸುತ್ತಿದ್ದೇವೆ. ವಿಶೇಷ, ವಿಶಿಷ್ಟ ಎಂಬಂಥ ಹಲವು ವ್ಯತ್ಯಾಸಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಇದೀಗ ಹೊಸ ಅಚ್ಚರಿಯೊಂದು ಈ ಪಟ್ಟಿಗೆ ಸೇರಿಕೊಂಡಿದೆ.

ಕುಳಿತುಕೊಂಡು ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ನಿಮಗೆಲ್ಲಾ ಗೊತ್ತು. ಆದರೆ ಇಲ್ಲೀಗ ಮಲಗಿಯೂ ಪ್ರಯಾಣಿಸಬಹುದು. ಹಾಯಾಗಿ ನಿದ್ರಿಸುತ್ತಾ ವಿಹಾರ ಮಾಡಬಹುದು. ಹೇಗೆ? ಯಾಕೆ? ಅಂತೀರಾ..

ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯಿಂದ ಹೊಸ ಸೇವೆ
ಕೊರೊನಾ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಇದು ವಿಮಾನ ಪ್ರಯಾಣದ ಸಂದರ್ಭಕ್ಕೂ ಹೊರತಾಗಿಲ್ಲ. ವಿಮಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಪ್ರಯಾಣಿಕರಿಗೆ ಖಾಸಗಿ ಸ್ಥಳ ನೀಡುವ ಸಲುವಾಗಿ ಜರ್ಮನಿಯ ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಹೊಸ ಕೊಡುಗೆಯೊಂದನ್ನು ನೀಡಿದೆ.

ನವೆಂಬರ್ 18ರಿಂದ ಡಿಸೆಂಬರ್​ವರೆಗೆ, ಫ್ರಾಂಕ್​ಫರ್ಟ್, ಜರ್ಮನಿ, ಸಾವೊ ಪೌಲೊ ಮತ್ತು ಬ್ರೆಜಿಲ್​ಗೆ ಸಂಚರಿಸುವ ವಿಮಾನಗಳಲ್ಲಿ ಮಲಗಿಕೊಂಡು ಪ್ರಯಾಣಿಸುವ (Sleeper’s Row) ಹೊಸ ಸೌಲಭ್ಯ ನೀಡಲಿದೆ. ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸುವವರು ಮೂರು ಅಥವಾ ನಾಲ್ಕು ಆಸನಗಳ ಒಂದು ಸಾಲನ್ನು ಆರಿಸಬಹುದಾಗಿದ್ದು, ಅದರಲ್ಲಿ ಮಲಗಿಕೊಂಡು ವಿಮಾನಯಾನ ಮಾಡಬಹುದಾಗಿದೆ. ಇದು ಬ್ಯುಸಿನೆಸ್ ಕ್ಲಾಸ್ ಬೆಡ್​ನಲ್ಲಿ ಪ್ರಯಾಣ ಮಾಡಿದ ಅನುಭವ ಕೊಡಲಿದೆ ಎಂಬುದು ಲುಫ್ತಾನ್ಸಾ ಆಶಯ.

ಪ್ರಯಾಣಿಕರಿಗೆ ಸಿಗುವ ವಿಶೇಷ ಸೌಲಭ್ಯಗಳೇನು?
ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಒಂದು ಹೊದಿಕೆ, ತಲೆದಿಂಬು ಮತ್ತೊಂದು ಸೀಟ್ ಟಾಪರ್ ನೀಡಲಾಗುತ್ತದೆ ಎಂದು ಲುಫ್ತಾನ್ಸಾ ಹೇಳಿದೆ. ಈ ವಿಶೇಷ ಸೌಲಭ್ಯವನ್ನು ಬಳಸಿಕೊಳ್ಳಲು ಆಸಕ್ತ ಪ್ರಯಾಣಿಕರು, ಟಿಕೆಟ್​ನ ಮೂಲಬೆಲೆಗೆ 260 ಡಾಲರ್​ಗಳ ಹೆಚ್ಚಿನ ಮೊತ್ತ ತೆರಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ
ಕೊರೊನಾ ಲಸಿಕೆ ಸಿದ್ಧವಾದ್ರೆ.. ಇಡೀ ವಿಶ್ವಕ್ಕೆ ಹಂಚಲು ಎಷ್ಟು ಕಾರ್ಗೋ ವಿಮಾನಗಳು ಬೇಕಾಗುತ್ತೆ ಗೊತ್ತಾ!?

Published On - 5:06 pm, Sat, 28 November 20