ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಮಾಡಿದವರಿಗೆ ಅಮೆರಿಕ(America) ತಕ್ಕ ಉತ್ತರ ನೀಡಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರ, ಅಲ್ಲಿಗೆ ಭೇಟಿ ನೀಡುವ ಯಾರಾದರೂ ಅದನ್ನು ಸ್ವತಃ ಅನುಭವಿಸಬಹುದು ಎಂದು ಅಮೆರಿಕ ಶ್ವೇತ ಭವನ ಹೇಳಿದೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅನುಮಾನವಿದ್ದವರು ಅಲ್ಲಿಗೆ ಹೋಗಿ ನೋಡಿ, ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯ ಮೇಲಿನ ಕಳವಳವನ್ನು ಅಮೆರಿಕವು ಸ್ಪಷ್ಟವಾಗಿ ತಳ್ಳಿಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ ಕೊನೆಯ ವಾರದಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.
ರಾಹುಲ್ ಗಾಂಧಿಯವರ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ, ಆದರೂ ಅವರ ಕಮೆಂಟ್ಗೆ ತಕ್ಕೆ ಉತ್ತರ ಸಿಕ್ಕಂತಾಗಿದೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಟೀಕಿಸುತ್ತಿರುವ ಹೊತ್ತಿನಲ್ಲಿ ಈ ಹೇಳಿಕೆ ಹೊರ ಬಿದ್ದಿದೆ. ರಾಹುಲ್ ಗಾಂಧಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಭಾರತಕ್ಕೆ ಹಿಂತಿರುಗಿ ಪ್ರಜಾಪ್ರಭುತ್ವದೊಂದಿಗೆ ಭಾರತೀಯ ಸಂವಿಧಾನದ ರಕ್ಷಣೆಗೆ ನಿಲ್ಲುವಂತೆ ಅವರು ವಿನಂತಿಸಿದ್ದರು.
ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹಾಡಿ ಹೊಗಳಿದ್ದಾರೆ. ಸಹಜವಾಗಿ, ನಮ್ಮ ಎರಡು ದೇಶಳ ನಡುವೆ ಬಲವಾದ ಆರ್ಥಿಕ ಸಂಬಂಧವಿದೆ, ಭಾರತವು ಪೆಸಿಫಿಕ್ ಕ್ವಾಡ್ನ ಸದಸ್ಯ ಹಾಗೂ ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ. ಭಾರತವು ನಿಸ್ಸಂಶಯವಾಗಿ ನಮ್ಮ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತ್ರವಲ್ಲ, ಬಹುಪಕ್ಷೀಯ ಹಲವು ಹಂತಗಳಲ್ಲಿ ಸಂಬಂಧ ಹೊಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ