ತಮ್ಮ ಜೀವನದ ಬಹುಪಾಲನ್ನು ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಆಗಿಯೇ ಕಳೆದ ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ಸತೀಶ್ ಧುಪೇಲಿಯಾ ಜೊಹಾನ್ಸ್ಬರ್ಗ್ನಲ್ಲಿ ಕೊವಿಡ್ 19ಗೆ ಬಲಿಯಾಗಿದ್ದಾರೆ. 66 ವರ್ಷದ ಧುಪೇಲಿಯಾ ನ್ಯುಮೋನಿಯಾದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊವಿಡ್ ಸೋಂಕು ತಗುಲಿತ್ತು.
ಮಣಿಲಾಲ್ ಗಾಂಧೀ ತಲೆಮಾರಿನ ಸತೀಶ್ ಧುಪೇರಿಯಾ ಮಹಾತ್ಮಾ ಗಾಂಧೀಜಿ ಅಭಿವೃದ್ಧಿ ಟ್ರಸ್ಟ್ ಸೇರಿ ಹಲವು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಇದೀಗ ಧುಪೇರಿಯಾ ತಮ್ಮ ಸೋದರಿಯರಾದ ಎಂ.ಎಸ್.ಉಮಾ ಮತ್ತು ಕೀರ್ತಿ ಮೆನನ್ ಅವರನ್ನು ಅಗಲಿದ್ದಾರೆ. ತಮ್ಮ ಸಹೋದರನ ಸಾವಿನ ವಿಷಯವನ್ನು ಎಂ.ಎಸ್ ಉಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ತಮ್ಮ ಜೀವನದ ಬಹುಪಾಲನ್ನು ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಆಗಿಯೇ ಕಳೆದ ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ಸತೀಶ್ ಧುಪೇಲಿಯಾ ಜೊಹಾನ್ಸ್ಬರ್ಗ್ನಲ್ಲಿ ಕೊವಿಡ್ 19ಗೆ ಬಲಿಯಾಗಿದ್ದಾರೆ.
Published On - 2:47 pm, Mon, 23 November 20