AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಬೆದರಿಕೆ ವಿರುದ್ಧ ಗಲ್ಫ್​ ರಾಷ್ಟ್ರಗಳ ಮಾಸ್ಟರ್ ಪ್ಲ್ಯಾನ್, ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಹೊಸ ಬಂದರು ನಿರ್ಮಾಣ

ಇರಾನ್ ಬೆದರಿಕೆಯಿಂದ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುಎಇ, ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಯುದ್ಧೋಪಾದಿಯಲ್ಲಿ ಪರ್ಯಾಯ ಮಾರ್ಗಗಳನ್ನು ನಿರ್ಮಿಸುತ್ತಿವೆ. ಹೊಸ ಬಂದರುಗಳು ಮತ್ತು ಮೆಗಾ ಪೈಪ್‌ಲೈನ್‌ಗಳ ಮೂಲಕ ತೈಲ ಪೂರೈಕೆ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಇದು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸುತ್ತದೆ.

ಇರಾನ್ ಬೆದರಿಕೆ ವಿರುದ್ಧ ಗಲ್ಫ್​ ರಾಷ್ಟ್ರಗಳ ಮಾಸ್ಟರ್ ಪ್ಲ್ಯಾನ್, ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಹೊಸ ಬಂದರು ನಿರ್ಮಾಣ
ಹಾರ್ಮುಜ್
ನಯನಾ ರಾಜೀವ್
|

Updated on: Jul 16, 2026 | 1:16 PM

Share

ದುಬೈ, ಜುಲೈ 16: ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಬಿಡುವಿಲ್ಲದ ತೈಲ ಸಾರಿಗೆ ಮಾರ್ಗವಾದ ಹಾಮರ್ಮಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಾಗತಿಕ ತೈಲ ಪೂರೈಕೆಗೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ ಯುಎಇ (UAE), ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಇರಾನ್‌ನ ಈ ಜಲಮಾರ್ಗದ ಮೇಲಿನ ತಮ್ಮ ಅವಲಂಬನೆಯನ್ನು ಶಾಶ್ವತವಾಗಿ ಕಡಿತಗೊಳಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿವೆ.

ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಭಾಗ ಹಾಗೂ ಭಾರತದ ದ್ರವೀಕೃತ ನೈಸರ್ಗಿಕ ಅನಿಲದ ಬಹುದೊಡ್ಡ ಪಾಲು ಪ್ರತಿದಿನ ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಈಗ ಈ ಮಾರ್ಗಕ್ಕೆ ಪರ್ಯಾಯವಾಗಿ ಗಲ್ಫ್ ರಾಷ್ಟ್ರಗಳು ಭೂಮಿಯ ಒಳಗಿನ ಬೃಹತ್ ಪೈಪ್‌ಲೈನ್‌ಗಳು ಮತ್ತು ಹೊಸ ಹೈಟೆಕ್ ಬಂದರುಗಳನ್ನು ನಿರ್ಮಿಸುತ್ತಿವೆ.

‘ವೆಸ್ಟ್-ಈಸ್ಟ್’ ಮೆಗಾ ಪೈಪ್‌ಲೈನ್

ಪ್ರಾದೇಶಿಕ ಅಸ್ಥಿರತೆ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಯುಎಇ, ಹಾರ್ಮುಜ್ ಜಲಸಂಧಿಯನ್ನು ಬಳಸದೆಯೇ ಕಚ್ಚಾ ತೈಲವನ್ನು ಸಾಗಿಸಬಲ್ಲ ತನ್ನ ಮಹತ್ವಾಕಾಂಕ್ಷೆಯ 252 ಮೈಲಿ ಉದ್ದದ ‘ಪಶ್ಚಿಮ-ಪೂರ್ವ’ ಪೈಪ್‌ಲೈನ್ ಯೋಜನೆಯನ್ನು ತೀವ್ರಗೊಳಿಸಿದೆ. ಈ ಯೋಜನೆಯ ಕೆಲಸ ಈಗಾಗಲೇ ಅರ್ಧದಷ್ಟು ಮುಗಿದಿದ್ದು, 2027 ರ ಕಟ್ಟುನಿಟ್ಟಿನ ಗಡುವಿನೊಳಗೆ ಇದನ್ನು ಪೂರ್ಣಗೊಳಿಸುವಂತೆ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮತ್ತಷ್ಟು ಓದಿ: ಮಹಾಯುದ್ಧದ ಭೀತಿ: ಇರಾನ್‌ನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ, MQ-9 ಡ್ರೋನ್ ಹೊಡೆದುರುಳಿಸಿದ ಇರಾನ್

ಅಸ್ತಿತ್ವದಲ್ಲಿರುವ ಫುಜೈರಾ ಜಾಲದೊಂದಿಗೆ ಈ ಹೊಸ ಪೈಪ್‌ಲೈನ್ ಸೇರಿದರೆ, ಯುಎಇ ದೇಶದ ಭೂ-ಆಧಾರಿತ ತೈಲ ರಫ್ತು ಸಾಮರ್ಥ್ಯವು ದಿನಕ್ಕೆ 3.6 ಮಿಲಿಯನ್ ಬ್ಯಾರೆಲ್‌ಗಳಿಗೆ ದ್ವಿಗುಣಗೊಳ್ಳಲಿದೆ. ವಿಶ್ವದ ಹೆಚ್ಚಿನ ಇಂಧನ ಕೆಲವೇ ಕೆಲವು ಚಾಕ್ ಪಾಯಿಂಟ್‌ಗಳ ಮೂಲಕ ಸಾಗುತ್ತಿರುವುದರಿಂದಲೇ ನಾವು ಒಂದು ದಶಕದ ಹಿಂದೆಯೇ ಈ ಸುರಕ್ಷಿತ ಹೂಡಿಕೆಯ ನಿರ್ಧಾರ ಕೈಗೊಂಡಿದ್ದೆವು ಎಂದು ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿಯ ಮುಖ್ಯಸ್ಥ ಸುಲ್ತಾನ್ ಅಲ್ ಜಾಬರ್ ತಿಳಿಸಿದ್ದಾರೆ.

ಇರಾಕ್ ಮತ್ತು ಸೌದಿಯಿಂದ ಜೋರ್ಡಾನ್, ಟರ್ಕಿ ಜಂಟಿ ನೆಟ್‌ವರ್ಕ್

ಮತ್ತೊಂದೆಡೆ ಇರಾಕ್ ಮತ್ತು ಸೌದಿ ಅರೇಬಿಯಾ ಕೂಡ ತಮ್ಮ ಆರ್ಥಿಕತೆಯ ರಕ್ಷಣೆಗಾಗಿ ಹೊಸ ಭೂ-ಸಾರಿಗೆ ಮಾರ್ಗಗಳನ್ನು ವಿಸ್ತರಿಸುತ್ತಿವೆ.

ಇರಾಕ್‌ನ 1.5 ಬಿಲಿಯನ್ ಡಾಲರ್ ಹೂಡಿಕೆ: ಇರಾಕ್ ಸರ್ಕಾರವು ತನ್ನ 435 ಮೈಲಿ ಉದ್ದದ ‘ಬಸ್ರಾ-ಹದಿತಾ’ ಪೈಪ್‌ಲೈನ್ ನಿರ್ಮಾಣಕ್ಕೆ ಚಾಲನೆ ನೀಡಿದೆ. ಇದು ದಿನಕ್ಕೆ 2.5 ಮಿಲಿಯನ್ ಬ್ಯಾರೆಲ್ ತೈಲವನ್ನು ನೇರವಾಗಿ ಜೋರ್ಡಾನ್, ಸಿರಿಯಾ ಮತ್ತು ಟರ್ಕಿ ದೇಶಗಳ ಟರ್ಮಿನಲ್ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲಿದೆ. ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಈ ಯೋಜನೆಯನ್ನು ದೇಶದ ರಾಷ್ಟ್ರೀಯ ಭದ್ರತಾ ಗುರಾಣಿ ಎಂದು ಕರೆದಿದ್ದಾರೆ.

ಸೌದಿ ಅರೇಬಿಯಾದ ಬೃಹತ್ ಯೋಜನೆ: ಸೌದಿ ಅರೇಬಿಯಾವು ತನ್ನ ರೆಡ್​ ಸೀ ಕಚ್ಚಾ ತೈಲ ಪೈಪ್‌ಲೈನ್ ಸಾಮರ್ಥ್ಯವನ್ನು ದಿನಕ್ಕೆ ಬರೋಬ್ಬರಿ 9 ಮಿಲಿಯನ್ ಬ್ಯಾರೆಲ್‌ಗಳಿಗೆ ವಿಸ್ತರಿಸುವ ಬೃಹತ್ ಯೋಜನೆಯನ್ನು ಪರಿಶೀಲಿಸುತ್ತಿದೆ.

ಹಾರ್ಮುಜ್ ಬೈಪಾಸ್ ಮಾಡಲು ಯುಎಇಯಿಂದ ಹೊಚ್ಚ ಹೊಸ ಬಂದರು

ಪೈಪ್‌ಲೈನ್‌ಗಳ ಜೊತೆಗೆ, ಯುಎಇ ಅತ್ಯಂತ ಚಾಣಾಕ್ಷ ಹೆಜ್ಜೆಯನ್ನಿಟ್ಟಿದೆ. ಹಾರ್ಮುಜ್ ಜಲಸಂಧಿಯ ಅರಬ್ಬಿ ಸಮುದ್ರದ ಬದಿಯಲ್ಲಿ ಹೊಸದೊಂದು ದೈತ್ಯ ಬಂದರು ಮತ್ತು ಕಂಟೇನರ್ ಟರ್ಮಿನಲ್ ನಿರ್ಮಿಸಲು ಯೋಜನೆ ರೂಪಿಸಿದೆ.

ದುಬೈ ಮೂಲದ ವಿಶ್ವಪ್ರಸಿದ್ಧ ಬಂದರು ನಿರ್ವಾಹಕ ಸಂಸ್ಥೆ ‘ಡಿಪಿ ವರ್ಲ್ಡ್’ಯುಎಇಯ ಪೂರ್ವ ಕರಾವಳಿಯಲ್ಲಿ ಈ ಬಹುಪಯೋಗಿ ಬಂದರನ್ನು ಅಭಿವೃದ್ಧಿಪಡಿಸಲಿದೆ. ಈ ಮೂಲಕ ದುಬೈ ತನ್ನ ಪ್ರಮುಖ ‘ಜೆಬೆಲ್ ಅಲಿ’ ಬಂದರಿನ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿ, ಅಸ್ಥಿರ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವ ಹೊಸ ಹಡಗು ಮಾರ್ಗವನ್ನು ಜಗತ್ತಿಗೆ ಪರಿಚಯಿಸಲಿದೆ.

2028 ರ ವೇಳೆಗೆ ಶೇ. 60 ರಷ್ಟು ತೈಲ ಸುರಕ್ಷಿತ

ಜಾಗತಿಕ ಹೂಡಿಕೆ ಬ್ಯಾಂಕ್ ಆದ ‘ಗೋಲ್ಡ್‌ಮನ್ ಸ್ಯಾಚ್ಸ್’ ನ ಪ್ರಮುಖ ವಿಶ್ಲೇಷಕಿ ಅಲೆಕ್ಸಾಂಡ್ರಾ ಪೌಲಸ್ ಅವರ ವರದಿಯ ಪ್ರಕಾರ, ಪ್ರಸ್ತುತ ಗಲ್ಫ್ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಏಳು ಪ್ರಮುಖ ಪೈಪ್‌ಲೈನ್ ಯೋಜನೆಗಳು ಯಶಸ್ವಿಯಾದರೆ, 2028 ರ ಅಂತ್ಯದ ವೇಳೆಗೆ ಗಲ್ಫ್ ರಾಷ್ಟ್ರಗಳ ಒಟ್ಟು ತೈಲ ರಫ್ತಿನ ಶೇಕಡಾ 60 ರಷ್ಟು (ದಿನಕ್ಕೆ 7.3 ಮಿಲಿಯನ್ ಬ್ಯಾರೆಲ್) ಭಾಗವು ಹಾರ್ಮುಜ್ ಜಲಸಂಧಿಯ ಅಪಾಯವಿಲ್ಲದೆಯೇ ಸುರಕ್ಷಿತವಾಗಿ ಜಗತ್ತನ್ನು ತಲುಪಲಿದೆ.

ಈ ಪರ್ಯಾಯ ಮಾರ್ಗಗಳಿಗಾಗಿ ಶತಕೋಟಿ ಡಾಲರ್ ಸುರಿಯಲಾಗುತ್ತಿದ್ದರೂ, ಭೌಗೋಳಿಕವಾಗಿ ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಇಲ್ಲದೆಯಾಗಿಸಲು ಸಾಧ್ಯವಿಲ್ಲ ಎಂದು ಜಾಗತಿಕ ಇಂಧನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಇರಾನ್‌ನ ಇತ್ತೀಚಿನ ಸರಣಿ ಬೆದರಿಕೆಗಳು ಮಧ್ಯಪ್ರಾಚ್ಯದ ಆರ್ಥಿಕ ಭೂಪಟವನ್ನು ಹೊಸದಾಗಿ ಮರುವಿನ್ಯಾಸಗೊಳಿಸುತ್ತಿರುವುದಂತೂ ಸತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!