AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್

ಅಮೆರಿಕದೊಂದಿಗೆ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಇರಾನ್ ಖಡಾಖಂಡಿತವಾಗಿ ತಿಳಿಸಿದೆ. ಅಮೆರಿಕದ ನಿರಂತರ ಬಾಂಬ್ ದಾಳಿಗಳಿಂದಾಗಿ, ಜೂನ್ 17ರ ಶಾಂತಿ ಒಪ್ಪಂದವನ್ನು ಇರಾನ್ ರದ್ದುಪಡಿಸಿದೆ. ಇರಾನ್‌ನ ಪರಮಾಣು ಸ್ಥಾವರದ ಮೇಲೂ ದಾಳಿ ನಡೆದಿದ್ದು, ಅಮೆರಿಕದ ಪ್ರತಿಯೊಂದು ಆಕ್ರಮಣಕ್ಕೂ ತಕ್ಕ ಪ್ರತ್ಯುತ್ತರ ನೀಡುವೆ ಎಂದು ಇರಾನ್ ಎಚ್ಚರಿಸಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮಹಾಯುದ್ಧದತ್ತ ಸಾಗುತ್ತಿದೆ.

ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್
ಟ್ರಂಪ್-ಖಮೇನಿ
ನಯನಾ ರಾಜೀವ್
|

Updated on: Jul 16, 2026 | 10:21 AM

Share

ಟೆಹ್ರಾನ್, ಜುಲೈ 16: ಇರಾನ್(Iran) ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ, ಮಾತುಕತೆಗೆ ಮುಂದಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿಕೆಯನ್ನು ಇರಾನ್ ತಳ್ಳಿ ಹಾಕಿದೆ. ಅಮೆರಿಕದ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆಸುವ ಯೋಜನೆ ತಮಗಿಲ್ಲ ಮತ್ತು ಪ್ರಸ್ತುತ ತಮ್ಮ ಸಂಪೂರ್ಣ ಗಮನ ಕೇವಲ ದೇಶದ ರಕ್ಷಣೆಯ ಮೇಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ರಾರ ಎಸ್ಮಾಯಿಲ್ ಬಘೈ ಖಡಕ್ ಆಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಹಾರ್ಮುಜ್ ಜಲಸಂಧಿಯ ಬಳಿ ಅಮೆರಿಕ ಪಡೆಗಳು ಇರಾನ್ ಸೇನಾ ನೆಲೆಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರುವುದರಿಂದ, ಜೂನ್ 17 ರಂದು ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ 14 ಅಂಶಗಳ ಶಾಂತಿ ಒಪ್ಪಂದಕ್ಕೆ ತಾವಿನ್ನು ಬದ್ಧರಾಗಿರುವುದಿಲ್ಲ ಎಂದು ಇರಾನ್ ಘೋಷಿಸಿದೆ.

ಅಮೆರಿಕ ಒಪ್ಪಂದದ ಮೊದಲ ನಿಯಮವನ್ನೇ ಗಾಳಿಗೆ ತೂರಿದೆ. ದಾಳಿಗಳನ್ನು ನಿಲ್ಲಿಸುವುದಾಗಿ ಒಪ್ಪಿಕೊಂಡು, ಈಗ ನಮ್ಮ ದೇಶದ ಬಂದರುಗಳು ಹಾಗೂ ನಗರಗಳ ಮೇಲೆ ಬಾಂಬ್ ಹಾಕುತ್ತಿದೆ. ಶತ್ರುಗಳು ನಮ್ಮ ಬದ್ಧತೆಗಳನ್ನು ಗಾಳಿಗೆ ತೂರಿದ ಮೇಲೆ, ನಾವು ಮಾತ್ರ ಒಪ್ಪಂದಕ್ಕೆ ಕಟ್ಟುಬೀಳಲು ಯಾವುದೇ ಕಾರಣವಿಲ್ಲ. ಅಮೆರಿಕದ ಪ್ರತಿಯೊಂದು ಆಕ್ರಮಣಕ್ಕೂ ನಮ್ಮ ಸಶಸ್ತ್ರ ಪಡೆಗಳು ಮಾರುಕಟ್ಟೆಯಲ್ಲೇ ತಕ್ಕ ಪ್ರತ್ಯುತ್ತರ ನೀಡಲಿವೆ” ಎಂದು ಇರಾನ್‌ನ ಉನ್ನತ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಎಚ್ಚರಿಸಿದ್ದಾರೆ.

ಇರಾನ್ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ

ಬುಧವಾರ ಅಮೆರಿಕದ ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್ ವಿರುದ್ಧ ಹೊಸ ಸುತ್ತಿನ ವಿನಾಶಕಾರಿ ವಾಯುದಾಳಿಗಳನ್ನು ತೀವ್ರಗೊಳಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್ ಅಡ್ಡಿಪಡಿಸುತ್ತಿದೆ ಎಂಬ ಕಾರಣ ನೀಡಿ ಈ ದಾಳಿ ಮಾಡಲಾಗಿದೆ.

ಮತ್ತಷ್ಟು ಓದಿ: ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಇರಾನ್‌ನ ಪ್ರಮುಖ ಬಂದರು ನಗರಿಗಳಾದ ಬಂದರ್ ಅಬ್ಬಾಸ್, ರಾಸ್ಕ್, ಚಬಹಾರ್, ಕ್ವೆಶ್ಮ್‌ಗಳಲ್ಲಿ ಭೀಕರ ಸ್ಫೋಟಗಳು ಸಂಭವಿಸಿದ್ದು, ಇರಾನ್‌ನ ಏಕೈಕ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವಿರುವ ‘ಬುಶೆಹರ್’ ಮೇಲೂ ಅಮೆರಿಕದ ಯುದ್ಧವಿಮಾನಗಳು ಬಾಂಬ್ ಹಾಕಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇರಾನ್ ಬಂದರುಗಳಿಗೆ ಆಮದು ತಡೆಯಲು ಖಾಲಿ ತೈಲ ಟ್ಯಾಂಕರ್ ಹಡಗೊಂದರ ಮೇಲೂ ಅಮೆರಿಕ ವಾಯುಪಡೆ ಗುಂಡು ಹಾರಿಸಿ ಅದನ್ನು ನಿಷ್ಕ್ರಿಯಗೊಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಕೇವಲ ಒಂದು ತಿಂಗಳ ಹಿಂದಷ್ಟೇ ಮಾಡಿಕೊಳ್ಳಲಾಗಿದ್ದ ಈ ಶಾಂತಿ ಒಪ್ಪಂದವು ಪ್ರಸ್ತುತ ಸಂಪೂರ್ಣವಾಗಿ ಮುರಿದುಬಿದ್ದಿದ್ದು, ತೆರೆಮರೆಯ ರಾಜತಾಂತ್ರಿಕ ಸಂಧಾನಗಳು ಅಧಿಕೃತವಾಗಿ ರದ್ದಾಗದಿದ್ದರೂ, ರಣಕಣದಲ್ಲಿ ಮಾತ್ರ ಉಭಯ ದೇಶಗಳು ಮುಖಾಮುಖಿ ಮಹಾಯುದ್ಧಕ್ಕೆ ಸಜ್ಜಾಗಿ ನಿಂತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ಚಾಕು ಹಿಡಿದು ನುಗ್ಗಿದ ಆಗಂತುಕರು
ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ಚಾಕು ಹಿಡಿದು ನುಗ್ಗಿದ ಆಗಂತುಕರು
ಹಾಸ್ಟೆಲ್‌ನಲ್ಲಿದ್ದ 20 ಕಂಪ್ಯೂಟರ್‌ಗಳು ಮಾಯ
ಹಾಸ್ಟೆಲ್‌ನಲ್ಲಿದ್ದ 20 ಕಂಪ್ಯೂಟರ್‌ಗಳು ಮಾಯ
ಬಿಡದಿ ಟೌನ್‌ಶಿಪ್ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ಸಜ್ಜು
ಬಿಡದಿ ಟೌನ್‌ಶಿಪ್ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ಸಜ್ಜು
ಕಾಲಭೈರವನ ಆರಾಧನೆಯ ವಿಶೇಷ ದಿನ, ಯಾವ ರಾಶಿಗೆ ಏನು ಫಲ?
ಕಾಲಭೈರವನ ಆರಾಧನೆಯ ವಿಶೇಷ ದಿನ, ಯಾವ ರಾಶಿಗೆ ಏನು ಫಲ?
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ