ಅಮೆರಿಕದ ಟೆಕ್ಸಾಸ್‌ನಲ್ಲಿ ಗುರು ಪೂರ್ಣಿಮೆ(Guru Purnima) ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಟೆಕ್ಸಾಸ್ನ ಅಲೆನ್ ಈಸ್ಟ್ ಸೆಂಟರ್ನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಯಿಂದ ಭಗವದ್ಗೀತೆ ಪಠಣ ಕಾರ್ಯಕ್ರಮ ಜರುಗಿತು. 4 ರಿಂದ 84 ವರ್ಷದೊಳಗಿನ 10 ಸಾವಿರಕ್ಕೂ ಅಧಿಕ ಮಂದಿ ನೆರೆದಿದ್ದರು. ಯೋಗ ಸಂಗೀತಾ ಮತ್ತು ಎಸ್ಜಿಎಸ್ ಗೀತಾ ಫೌಂಡೇಷನ್ ಭಗವದ್ಗೀತಾ ಪಾರಾಯಣವನ್ನು ಆಯೋಜಿಸಿತ್ತು.
ಮೈಸೂರಿನ ಅವಧೂತ ದತ್ತ ಪೀಠಂ ಆಶ್ರಮದಿಂದ ದೊರೆತ ಮಾಹಿತಿ ಪ್ರಕಾರ ಸೋಮವಾರ ಗುರು ಪೂರ್ಣಿಮೆ ನಿಮಿತ್ತ ವಿಶ್ವವಿಖ್ಯಾತ ಆಧ್ಯಾತ್ಮಿಕ ಸಂತ ಪೂಜ್ಯ ಗಣಪತಿ ಸಚ್ಚಿದಾನಂದ ಅವರ ಸಮ್ಮುಖದಲ್ಲಿ ಭಗವದ್ಗೀತೆ ಪಠಣ ಮಾಡಲಾಯಿತು.
ಮತ್ತಷ್ಟು ಓದಿ: Guru Purnima 2023: ವೇದವ್ಯಾಸರ ಜನ್ಮದಿನದಂದು ಗುರು ಪೂರ್ಣಿಮಾ ಆಚರಿಸುವುದೇಕೆ? ಗುರು ಯಾರು?
ಟೆಕ್ಸಾಸ್‌ನಲ್ಲಿ ಭಗವದ್ಗೀತೆಯನ್ನು ಪಠಿಸಿದ ಎಲ್ಲಾ 10,000 ಜನರು ತಮ್ಮ ಗುರುಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಳೆದ ಎಂಟು ವರ್ಷಗಳಿಂದ ಅದನ್ನು ಕಂಠಪಾಠ ಮಾಡಿದ್ದಾರೆ. ಸ್ವಾಮೀಜಿ ಅಮೆರಿಕದಲ್ಲಿ ಭಗವದ್ಗೀತೆ ಪಠಣ ಕಾರ್ಯಕ್ರಮ ಆಯೋಜಿಸಿರುವುದು ಇದೇ ಮೊದಲಲ್ಲ. ಸ್ವಾಮೀಜಿ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.
ಅವಧೂತ ದತ್ತ ಪೀಠವು 1966 ರಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಸ್ಥಾಪಿಸಲ್ಪಟ್ಟ ಅಂತರರಾಷ್ಟ್ರೀಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ