Alaska Earthquake: ಅಲಾಸ್ಕಾದಲ್ಲಿ 8.2 ತೀವ್ರತೆಯ ಭೀಕರ ಭೂಕಂಪ; ಭಯ ಹುಟ್ಟಿಸುವ ಫೋಟೋ, ವಿಡಿಯೋಗಳು ವೈರಲ್​

ಅಲಾಸ್ಕಾದಲ್ಲಿ ಬುಧವಾರ ರಾತ್ರಿ 8.2ರಷ್ಟು ತೀವ್ರತೆಯ ಭೂಕಂಪ ಆಗಿದ್ದರ ಫೋಟೋ-ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೊಡ್ಡದಾಗಿ ಸೀಳುಬಿಟ್ಟಿರುವ ರಸ್ತೆಗಳನ್ನು ನೋಡಬಹುದು.

Alaska Earthquake: ಅಲಾಸ್ಕಾದಲ್ಲಿ 8.2 ತೀವ್ರತೆಯ ಭೀಕರ ಭೂಕಂಪ; ಭಯ ಹುಟ್ಟಿಸುವ ಫೋಟೋ, ವಿಡಿಯೋಗಳು ವೈರಲ್​
ಅಲಾಸ್ಕಾ ಭೂಕಂಪದಿಂದಾದ ಹಾನಿ
Edited By:

Updated on: Jul 29, 2021 | 5:43 PM

ಯುಎಸ್​ನ ಅಲಾಸ್ಕಾದಲ್ಲಿ ಬುಧವಾರ ರಾತ್ರಿ ಭೀಕರ ಭೂಕಂಪ ಸಂಭವಿಸಿದೆ (Alaska Earthquake). ಇದರ ತೀವ್ರತೆ ರಿಕ್ಟರ್ ಮಾಪಕ(Rictor Scale)ದಲ್ಲಿ 8.2ರಷ್ಟು ದಾಖಲಾಗಿದೆ. ಭೂಕಂಪನದಿಂದ ಉಂಟಾದ ಹಾನಿಯ ಫೋಟೋಗಳು ಸಾಮಾಜಿಕ ಜಾಲತಾಣ (Social Media)ಗಳಲ್ಲಿ ವೈರಲ್ ಆಗುತ್ತಿದ್ದು, ನಿಜಕ್ಕೂ ಮನಮಿಡಿಯುವಂತಿವೆ. ಪೆರಿವಿಲ್ಲೆಯಿಂದ ಆಗ್ನೇಯಕ್ಕೆ 91 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದ್ದು, ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಇದು ಸುನಾಮಿಯ ಮುನ್ನೆಚ್ಚರಿಕೆ ಆಗಿದೆ. ಇನ್ನು 1965ರಿಂದ ಈಚೆಗೆ ಅಮೆರಿಕದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಕಂಪ ಆಗಿರಲಿಲ್ಲ. ಅಂದರೆ ಈಗಾಗಲೇ 6.2 ಮತ್ತು 5.6 ತೀವ್ರತೆಯಲ್ಲಿ ಭೂಮಿ ನಡುಗಿದ್ದರೂ 8.2ರಷ್ಟೆಲ್ಲ ತೀವ್ರತೆ ದಾಖಲಾಗಿರಲಿಲ್ಲ.

ಅಲಾಸ್ಕಾದಲ್ಲಿ ಬುಧವಾರ ರಾತ್ರಿ 8.2ರಷ್ಟು ತೀವ್ರತೆಯ ಭೂಕಂಪ ಆಗಿದ್ದರ ಫೋಟೋ-ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೊಡ್ಡದಾಗಿ ಸೀಳುಬಿಟ್ಟಿರುವ ರಸ್ತೆಗಳನ್ನು ನೀವು, ವಿಡಿಯೋ ಫೋಟೋಗಳಲ್ಲಿ ನೋಡಬಹುದು. ಅಲಾಸ್ಕಾ ಕರಾವಳಿ ತೀರದಲ್ಲಿ ಉಂಟಾದ ಹಾನಿಯ ಕೆಲವು ಫೋಟೋ..ವಿಡಿಯೋಗಳು ಇಲ್ಲಿವೆ.. ನೋಡಿ

ಇದನ್ನೂ ಓದಿ: ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಂಪತಿಗೆ ಶಾಕ್​; ದೊಡ್ಡ ಮೊತ್ತದ ದಂಡ ವಿಧಿಸಿದ ಸೆಬಿ