ರಷ್ಯಾದ ಘಟಕದಿಂದ ನಿಯಂತ್ರಣ ತಪ್ಪಿದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ; ಗಗನಯಾತ್ರಿಗಳು ಸೇಫ್

NASA: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದಾಗ ಇಬ್ಬರು ರಷ್ಯಾದ ಗಗನಯಾತ್ರಿಗಳು, ಮೂವರು ನಾಸಾ, ಒಬ್ಬರು ಜಪಾನ್ ಮತ್ತು ಒಬ್ಬರು ಫ್ರಾನ್ಸ್‌ನ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗಗನಯಾತ್ರಿಗಳು ಇದ್ದರು.

ರಷ್ಯಾದ ಘಟಕದಿಂದ ನಿಯಂತ್ರಣ ತಪ್ಪಿದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ; ಗಗನಯಾತ್ರಿಗಳು ಸೇಫ್
ಬಾಹ್ಯಾಕಾಶ ನೌಕೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 30, 2021 | 11:11 AM

ಮಾಸ್ಕೋ: ಹೊಸದಾಗಿ ಆಗಮಿಸಿರುವ ರಷ್ಯಾದ ಸಂಶೋಧನಾ ಘಟಕದ ಜೆಟ್ ಥ್ರಸ್ಟರ್‌ಗಳಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ಗುರುವಾರ ಸ್ವಲ್ಪ ಕಾಲ ನಿಯಂತ್ರಣ ತಪ್ಪಿತ್ತು ಎಂದು ನಾಸಾ (NASA) ತಿಳಿಸಿದೆ. ಐಎಸ್​ಎಸ್​ನಲ್ಲಿ ಏಳು ಜನರಿದ್ದರು ಎಂದು ತಿಳಿದುಬಂದಿದ್ದು, ಈ ಘಟನೆಯಿಂದಾಗಿ ನಾಸಾದ ಯೋಜನೆ ಆಗಸ್ಟ್ 3ರವರೆಗೆ ಮುಂದೂಡಲ್ಪಟ್ಟಿದೆ.

ಹೊಸದಾಗಿ ಸೇರ್ಪಡೆಯಾಗಿರುವ ರಷ್ಯಾದ ಸಂಶೋಧನಾ ಘಟಕದ ನೌಕೆಯನ್ನು ಕಕ್ಷೆಯ ಹೊರಭಾಗದಲ್ಲಿ ಸಂಧಿಸುವಂತೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಇಬ್ಬರು ರಷ್ಯಾದ ಗಗನಯಾತ್ರಿಗಳು, ಮೂವರು ನಾಸಾ ಗಗನಯಾತ್ರಿಗಳು, ಜಪಾನಿನ ಗಗನಯಾತ್ರಿ ಮತ್ತು ಫ್ರಾನ್ಸ್‌ನ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗಗನಯಾತ್ರಿಗಳು ಇದ್ದರು. ಅವರ್ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ನಾಸಾ ಮತ್ತು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಆರ್‌ಐಎ ಮಾಹಿತಿ ನೀಡಿದೆ.

ಈ ಅವಘಡದಿಂದ ನಾಸಾ ತನ್ನ ಬೋಯಿಂಗ್‌ನ ಹೊಸ CST-100 ಸ್ಟಾರ್‌ಲೈನರ್ ಅನ್ನು ಉಡಾವಣಾ ಕೇಂದ್ರಕ್ಕೆ ತಲುಪಿಸುವ ಯೋಜನೆಯನ್ನು ಆಗಸ್ಟ್ 3ರವರೆಗೆ ಮುಂದೂಡಲಾಗಿದೆ. ಈ ಸ್ಟಾರ್​ಲೈನರ್ ಅನ್ನು ಕೆನಡಿ ಬಾಹ್ಯಾಕಾಶ ಘಟಕದಿಂದ ಇಂದು ಅಟ್ಲಾಸ್ ವಿ ರಾಕೆಟ್ ಮೂಲಕ ಉಡಾವಣೆ ಮಾಡಬೇಕಾಗಿತ್ತು. ಆದರೀಗ ಈ ಉಡಾವಣೆ ಮುಂದೂಡಲ್ಪಟ್ಟಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ನೌಕೆಯ ಜೆಟ್​ಗಳು ಪುನರಾರಂಭಗೊಂಡಿದ್ದರಿಂದ ಇಡೀ ಬಾಹ್ಯಾಕಾಶ ನಿಲ್ದಾಣವು ತನ್ನ ಸಾಮಾನ್ಯ ಹಾರಾಟದ ಸ್ಥಾನದಿಂದ ಭೂಮಿಯಿಂದ 250 ಮೈಲುಗಳಷ್ಟು ದೂರದಲ್ಲಿದೆ. ಮಿಷನ್‌ನ ಫ್ಲೈಟ್ ಡೈರೆಕ್ಟರ್ ಇದನ್ನು ಬಾಹ್ಯಾಕಾಶ ನೌಕೆಯ ತುರ್ತುಸ್ಥಿತಿ ಎಂದು ಘೋಷಿಸಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: NASA: ಚಂದ್ರನ ಮೇಲೆ ಮನೆ ಕಟ್ಟಲು ನಾಸಾದಿಂದ ಕಂಟ್ರಾಕ್ಟ್; 6,964 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಲಿದೆ ಅಚ್ಚರಿಯ ಲೋಕ

(International Space Station thrown out of control by misfire of Russian module says Nasa)

Published On - 11:07 am, Fri, 30 July 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ