Greenland Ice Melt: ಕರಗಿ ಕರಗಿ ಸಮುದ್ರ ಸೇರುತ್ತಿವೆ ಬಿಲಿಯನ್​ ಟನ್ ಪ್ರಮಾಣದ ಹಿಮ; ಕಾದಿದೆ ಅಪಾಯ

ಮಂಗಳವಾರ ಸಂಭವಿಸಿದ ಹಿಮ ಕರಗುವಿಕೆಯಿಂದಾಗಿ ಗ್ರೀನ್​ಲ್ಯಾಂಡ್ ತನ್ನ 8.5 ಬಿಲಿಯನ್ ಟನ್​ ಮೇಲ್ಭಾಗವನ್ನು ಕಳೆದುಕೊಂಡಿದೆ ಹಾಗೂ ಕಳೆದ ಭಾನುವಾರದಿಂದ ಈ ತನಕ 18.4 ಬಿಲಿಯನ್ ಟನ್​ ಮೇಲ್ಮೈ ಪ್ರದೇಶವನ್ನು ಕಳೆದುಕೊಂಡಿದೆ

Greenland Ice Melt: ಕರಗಿ ಕರಗಿ ಸಮುದ್ರ ಸೇರುತ್ತಿವೆ ಬಿಲಿಯನ್​ ಟನ್ ಪ್ರಮಾಣದ ಹಿಮ; ಕಾದಿದೆ ಅಪಾಯ
ಸಂಗ್ರಹ ಚಿತ್ರ
Follow us
TV9 Web
| Updated By: Skanda

Updated on:Jul 30, 2021 | 1:00 PM

ಆರ್ಕ್​ಟಿಕ್​ ವಲಯದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಪರಿಣಾಮ ಗ್ರೀನ್​ಲ್ಯಾಂಡ್​ನಲ್ಲಿ (Green Land) ಹಿಮ ಕರಗುವಿಕೆ (Ice Melting) ಆರಂಭವಾಗಿದ್ದು, ಕಳೆದ ಮಂಗಳವಾರ ಒಂದೇ ದಿನ ಉಂಟಾಗಿರುವ ಹಿಮ ಕರಗುವಿಕೆಯು ಇಡೀ ಫ್ಲೋರಿಡಾ (Florida) ರಾಜ್ಯವನ್ನು ಎರಡು ಇಂಚು ನೀರಿನಲ್ಲಿ ಮುಳುಗಿಸುವಷ್ಟು ಪ್ರಮಾಣದಲ್ಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದೊಂದು ದಶಕದಲ್ಲಿ ಹೀಗೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಹಿಮ ಕರಗುತ್ತಿರುವುದು ಮೂರನೇ ಬಾರಿಯಾಗಿದ್ದು, ಮಂಗಳವಾರ ಸಂಭವಿಸಿದ ಹಿಮ ಕರಗುವಿಕೆಯಿಂದಾಗಿ ಗ್ರೀನ್​ಲ್ಯಾಂಡ್ ತನ್ನ 8.5 ಬಿಲಿಯನ್ ಟನ್​ ಮೇಲ್ಭಾಗವನ್ನು ಕಳೆದುಕೊಂಡಿದೆ ಹಾಗೂ ಕಳೆದ ಭಾನುವಾರದಿಂದ ಈ ತನಕ 18.4 ಬಿಲಿಯನ್ ಟನ್​ ಮೇಲ್ಮೈ ಪ್ರದೇಶವನ್ನು ಕಳೆದುಕೊಂಡಿದೆ ಎಂದು ಡೆನ್ಮಾರ್ಕ್​ ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.

ಆದರೂ, ಸದರಿ ಹಿಮ ಕರಗುವಿಕೆಯ ಪ್ರಮಾಣ 2019ರಲ್ಲಿ ಉಂಟಾದ ಕರಗುವಿಕೆಯ ಗಾತ್ರಕ್ಕಿಂತ ಕೊಂಚ ಕಡಿಮೆ ಮಟ್ಟದ್ದೇ ಆಗಿದ್ದು, ಅದರ ವಿಸ್ತೀರ್ಣ ಮಾತ್ರ ಹೆಚ್ಚಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಜುಲೈ 27ರಂದು ಕಂಡುಬಂದಿರುವ ಹಿಮಕರಗುವಿಕೆ ಅನಿರೀಕ್ಷಿತವಾಗಿದ್ದಾಗಿದೆ. ಗ್ರೀನ್​ಲ್ಯಾಂಡ್​ನ ಬಹುಭಾಗ ಕರಗಿದ್ದು, ಇದು ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ತೊಂದರೆಗೆ ಕೈಗನ್ನಡಿ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.

ಈ ಹಿಮ ಕರಗುವಿಕೆಗೆ ಮನುಷ್ಯನೇ ನೇರ ಕಾರಣವಾಗಿದ್ದು, ಹವಾಮಾನದಲ್ಲಿ ಬಿಸಿ ಏರುತ್ತಿರುವುದರಿಂದ 1990ರ ಮಧ್ಯಭಾಗದಿಂದ ಇಲ್ಲಿಯ ತನಕ ಸುಮಾರು 28 ಟ್ರಿಲಿಯನ್ ಟನ್​ ಹಿಮವನ್ನು ಭೂಮಿ ಕಳೆದುಕೊಂಡಿದೆ. ಅಷ್ಟು ಹಿಮ ಕರಗಿ ಹೋಗುವುದಕ್ಕೆ ಮನುಷ್ಯನ ಕೊಡುಗೆ ದೊಡ್ಡದಿದೆ. ಇದರಲ್ಲಿ ಆರ್ಕ್​ಟಿಕ್​ ಭಾಗದಲ್ಲಿ ಉಂಟಾಗಿರುವ ಕರಗುವಿಕೆಯೇ ಅತಿ ಹೆಚ್ಚಿದ್ದು, ಗ್ರೀನ್​ಲ್ಯಾಂಡ್​ನ ಹಿಮ ಪದರವೂ ಸೇರಿ ದೊಡ್ಡ ಪ್ರದೇಶದಲ್ಲಿನ ಹಿಮ ನೀರಾಗಿದೆ ಎಂದು ವರದಿಗಳು ತಿಳಿಸಿವೆ.

ಕಳೆದೊಂದು ದಶಕದಲ್ಲಿ ಇದು ಮತ್ತಷ್ಟು ಗಂಭೀರವಾಗುತ್ತಿದ್ದು, ಗ್ರೀನ್​ಲ್ಯಾಂಡ್​ ಬಳಿ ಹವಾಮಾನದ ಉಷ್ಣತೆ ಹೆಚ್ಚುತ್ತಿರುವುದರಿಂದ ಹಿಮ ಕರಗುವಿಕೆ ಸಾಧಾರಣ ಎಂಬಂತಾಗಿ ಹೋಗಿದೆ. ನಿನ್ನೆಯ ಹಿಮ ಕರಗುವಿಕೆ ಕೂಡಾ ಇದಕ್ಕೆ ಉದಾಹರಣೆ ಎಂದು ಲೀಡ್ಸ್​ ವಿವಿಯಲ್ಲಿ ಹಿಮ ತಜ್ಞರೂ ಹಾಗೂ ವರದಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವವರೂ ಆದ ಥಾಮಸ್ ಸ್ಲಾಟರ್ ತಿಳಿಸಿದ್ದಾರೆ.

2019ರಲ್ಲಿ ಗ್ರೀನ್​ಲ್ಯಾಂಡ್​ನಲ್ಲಿ ಸುಮಾರು 532 ಬಿಲಿಯನ್​ ಟನ್​ ಹಿಮ ಕರಗಿ ಸಮುದ್ರದ ಪಾಲಾಗಿತ್ತು. ಜುಲೈ ತಿಂಗಳಲ್ಲಿ ಅನಿರೀಕ್ಷಿತವಾಗಿ ಬೀಸಿದ ಬಿಸಿ ಗಾಳಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಸಮುದ್ರದ ನೀರಿನ ಮಟ್ಟದಲ್ಲಿ ಶಾಶ್ವತವಾಗಿ 1.5 ಮೀಟರ್​ ಏರಿಕೆಯಾಗಿದೆ ಎನ್ನುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಸಮುದ್ರಕ್ಕೆ ಜಾರಿಬಿತ್ತು ವಿಶ್ವದ ಅತಿದೊಡ್ಡ ಹಿಮಗಡ್ಡೆ; ದೆಹಲಿಗಿಂತಲೂ ಮೂರು ಪಟ್ಟು ದೊಡ್ಡದಿದೆ ಅಳತೆ 

ಹಿಮಾಚಲ ಭೀಕರ ಭೂಕುಸಿತದಿಂದ ಸಾಯುವ ಮೊದಲು ಜೈಪುರ ವೈದ್ಯರ ಟ್ವೀಟ್

(Greenland Facing huge ice melting due to climate change)

Published On - 12:59 pm, Fri, 30 July 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ