House Fire: ಬೆಳಗಾದರೆ ಮದುವೆ ಎನ್ನುವ ಖುಷಿಯಲ್ಲಿ ಮಲಗಿದ್ದ ಮದುಮಗಳು ಮತ್ತೆ ಏಳಲೇ ಇಲ್ಲ

ಬೆಳಗಾದರೆ ಮದುವೆ(Marriage) ಎನ್ನುವ ಖುಷಿಯಲ್ಲಿ ಮಲಗಿದ್ದ ಮಧುಮಗಳು ಏಳಲೇ ಇಲ್ಲ, ಬೆಳಗಿನ ಜಾವ 4 ಗಂಟೆಯ ವೇಳೆಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ.

House Fire: ಬೆಳಗಾದರೆ ಮದುವೆ ಎನ್ನುವ ಖುಷಿಯಲ್ಲಿ ಮಲಗಿದ್ದ ಮದುಮಗಳು ಮತ್ತೆ ಏಳಲೇ ಇಲ್ಲ
ಮೃತ ಯುವತಿ

Updated on: May 28, 2023 | 9:36 AM

ಬೆಳಗಾದರೆ ಮದುವೆ(Marriage) ಎನ್ನುವ ಖುಷಿಯಲ್ಲಿ ಮಲಗಿದ್ದ ಮಧುಮಗಳು ಏಳಲೇ ಇಲ್ಲ, ಬೆಳಗಿನ ಜಾವ 4 ಗಂಟೆಯ ವೇಳೆಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಇದು ಅಮೆರಿಕದಲ್ಲಿ ನಡೆದ ಘಟನೆಯಾಗಿದೆ, ಮೇ 23 ರಂದು ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ರೀಡ್ಸ್​ಬರ್ಗ್​ ಮನೆಯ ಎರಡನೇ ಮಹಡಿಯಲ್ಲಿ ಯುವತಿ ನಿದ್ರಿಸುತ್ತಿದ್ದಳು. ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಮೃತಪಟ್ಟಿದ್ದಾಳೆ.

ಮರುದಿನ ಬೆಳಗ್ಗೆಯೇ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗುವವರಿದ್ದರು. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ, ಆ ಮನೆ ವರನ ಅಜ್ಜಿಗೆ ಸೇರಿದ್ದಾಗಿದೆ.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಮೊತ್ತೊಂದು ಅಗ್ನಿ ಅವಘಡ: ಐದಾರು ಗುಜರಿ ಗೋಡೌನ್‌ಗಳಿಗೆ ಹೊತ್ತಿಕೊಂಡ ಬೆಂಕಿ

ಬೆಳಗ್ಗೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಮನೆಗೆ ಬೆಂಕಿ ಆವರಿಸಿತ್ತು. ಮನೆಯೊಳಗಿದ್ದ ಮೂವರ ಆರೋಗ್ಯವೂ ಹದಗೆಟ್ಟಿದೆ. ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಎಷ್ಟೇ ಕಿರುಚಾಡಿದರೂ ಆಕೆಯನ್ನು ರಕ್ಷಿಸುವಲ್ಲಿ ಸೋತರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us