ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಮಾಲ್ಟಾ ಹಡಗನ್ನು ಅಪಹರಿಸುವ ಯತ್ನ ವಿಫಲ

|

Updated on: Dec 16, 2023 | 12:11 PM

ಭಾರತೀಯ ನೌಕಾಪಡೆಯ ಮಾಲ್ಟಾ ವೆಸೆಲ್(Malta Vessel) ಹಡಗನ್ನು ಅಪಹರಿಸುವ ಯತ್ನ ವಿಫಲಗೊಂಡಿದೆ. ಅರಬ್ಬಿ ಸಮುದ್ರದಲ್ಲಿ ಈ ಸರಕು ಹಡಗನ್ನು ಅಪಹರಿಸಲು ಕಿಡಿಗೇಡಿಗಳು ಉತ್ನಿಸಿದ್ದರು ಆದರೆ ಮಾಲ್ಟಾವನ್ನು ರಕ್ಷಿಸಿಕೊಳ್ಳುವಲ್ಲಿ ನೌಕಾಪಡೆ ಸಫಲವಾಗಿದೆ. ಹಡಗಿನಲ್ಲಿ 18 ಸಿಬ್ಬಂದಿ ಇದ್ದರು.

ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಮಾಲ್ಟಾ ಹಡಗನ್ನು ಅಪಹರಿಸುವ ಯತ್ನ ವಿಫಲ
ಹಡಗು
Follow us on

ಭಾರತೀಯ ನೌಕಾಪಡೆಯ ಮಾಲ್ಟಾ ವೆಸೆಲ್(Malta Vessel) ಹಡಗನ್ನು ಅಪಹರಿಸುವ ಯತ್ನ ವಿಫಲಗೊಂಡಿದೆ. ಅರಬ್ಬಿ ಸಮುದ್ರದಲ್ಲಿ ಈ ಸರಕು ಹಡಗನ್ನು ಅಪಹರಿಸಲು ಕಿಡಿಗೇಡಿಗಳು ಉತ್ನಿಸಿದ್ದರು ಆದರೆ ಮಾಲ್ಟಾವನ್ನು ರಕ್ಷಿಸಿಕೊಳ್ಳುವಲ್ಲಿ ನೌಕಾಪಡೆ ಸಫಲವಾಗಿದೆ. ಹಡಗಿನಲ್ಲಿ 18 ಸಿಬ್ಬಂದಿ ಇದ್ದರು.

ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಈಗ ಹಡಗು ಸೋಮಾಲಿಯಾದ ಕರಾವಳಿಯತ್ತ ಸಾಗುತ್ತಿದೆ. ಎಂವಿ ರೆಯುನ್ ಎಂಬ ಹಡಗು ಗುರುವಾರ ಮಾಲ್ಟಾ ಮೇಲೆ ದಾಳಿ ನಡೆಸಿತ್ತು, ಸಿಬ್ಬಂದಿ ಹಡಗಿನ ನಿಯಂತ್ರಣ ಕಡೆದುಕೊಂಡಿದ್ದರು ಯುಕೆ ಮೆರೈನ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.

ಹಡಗನ್ನು ವಶಪಡಿಸಿಕೊಳ್ಳುವಿಕೆಯು 2017ರಿಂದ ಸೋಮಾಲಿ ಕಡಲ್ಗಳ್ಳರು ನಡೆಸಿದ ಪ್ರಮುಖ ದಾಳಿ ಇದಾಗಿದೆ. ಕಡಲ್ಗಳ್ಳತನ ಆಕ್ಷನ್ ಗ್ರೂಪ್ ಆ ಪ್ರದೇಶದಲ್ಲಿ ಸಕ್ರಿಯವಾಗಿರುವುದರಿಂದ ಸೊಮಾಲಿಯಾ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಲು ಯುಕೆ ಮೆರೈನ್ ಉಳಿದ ಹಡಗುಗಳಿಗೆ ಸಲಹೆ ನೀಡಿದೆ.

ಮತ್ತಷ್ಟು ಓದಿ:Europa 2: ನವಮಂಗಳೂರು ಬಂದರಿಗೆ ಆಗಮಿಸಿದ ಕ್ರೂಸ್ ಹಡಗು

ನೌಕೆಗಳನ್ನು ಎಚ್ಚರಿಕೆಯಿಂದ ಸಾಗಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಲು ಸಲಹೆ ನೀಡಲಾಗುತ್ತಿದೆ.
18 ಮಂದಿ ಸಿಬ್ಬಂದಿ ಇದ್ದ ಹಡಗನ್ನು 6 ಮಂದಿ ಅಪಹರಿಸಲು ಯತ್ನಿಸಿದ್ದರು. ತಕ್ಷಣವೇ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗು ಇರುವ ಸ್ಥಳವನ್ನು ಪತ್ತೆ ಮಾಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:10 pm, Sat, 16 December 23